ನವದೆಹಲಿ: Rihanna Topless Photoshoot With Ganesh Pendent - ರೈತರ ಆಂದೋಲನದ ಕುರಿತು ಟ್ವೀಟ್ ಮಾಡಿದ ಬಳಿಕ ಇದೀಗ ಅಂತಾರಾಷ್ಟ್ರೀಯ ಪಾಪ್ ಗಾಯಕಿ (Pop Singer Rihanna) ರಿಯಾನ್ನಾ ಇದೀಗ ಮತ್ತೊಂದು ಟ್ವೀಟ್ ಮೂಲಕ ವಿವಾದ ಸೃಷ್ಟಿಸಿದ್ದಾಳೆ. Social Media (Twitter) ಮೇಲೆ ರಿಯಾನ್ನಾ ತನ್ನ ಒಂದು ಟಾಪ್ ಲೆಸ್ ಛಾಯಾಚಿತ್ರ ಹಂಚಿಕೊಂಡಿದ್ದು, ಈ ಛಾಯಾಚಿತ್ರದಲ್ಲಿ ಅವರು ಶ್ರೀ ಗಣೇಶನ ಪೆಂಡೆಂಟ್ (Lord Ganesh Pendent) ಧರಿಸಿದ್ದಾಳೆ.
ಫೋಟೋ ಶೂಟ್ ಬಳಿಕ ಟ್ರೋಲ್ ಗೆ ಗುರಿಯಾದ ರಿಯಾನ್ನಾ (Rihanna)
ಈ ಟಾಪ್ ಲೆಸ್ ಫೋಟೋ ಶೂಟ್ ನಲ್ಲಿ ರಿಯಾನ್ನಾ ಶ್ರೀಗಣೇಶನ ಪೆಂಡೆಂಟ್ ಧರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಆಕೆಯಾ ಫ್ಯಾಷನ್ ಸೆನ್ಸ್ ಕುರಿತು ನೆಟ್ಟಿಗರು ಭಾರಿ ಟ್ರೊಲ್ ಮಾಡುತ್ತಿದ್ದಾರೆ. " ಇದು ತುಂಬಾ ಆಫೆನ್ಸೀವ್ ಆಗಿದೆ, ಕೋಟ್ಯಾಂತರ ಜನರ ಧಾರ್ಮಿಕ ಭಾವನೆಗಳಿಗೆ ಇದು ಧಕ್ಕೆ ತಂದಿದೆ. ಜನರು ಪ್ರತಿವರ್ಷ ಗಣೇಶ್ ಚತುರ್ಥಿ ಹಬ್ಬದಂದು ಶ್ರೀ ಗಣೇಶನನ್ನು ಪೂಜಿಸುತ್ತಾರೆ, ಸಾರಿ RiRi, ನೀನು ನನಗೆ ನಿರಾಶೆಗೊಲಿಸಿರುವಿ" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
when @PopcaanMusic said “me nuh wan ya wear no lingerie tonight fa me girl” @SavageXFenty pic.twitter.com/bnrtCZT7FB
— Rihanna (@rihanna) February 15, 2021
ಇದಕ್ಕೂ ಮೊದಲೂ ಕೂಡ ರಿಯಾನ್ನಾ ಫೆ.12 ರಂದು ರೈತ ಆಂದೋಲನವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಳು. ರೈತ ಚಳುವಳಿಯ ಕುರಿತು ಬರೆದುಕೊಂಡಿದ್ದ ಅವಳು, ನಾವು ಈ ಕುರಿತು ಏಕೆ ಚರ್ಚಿಸುತ್ತಿಲ್ಲ ಎಂದಿದ್ದಳು.
Super offensive wearing Ganesha like that. My first god, a holy sentiment to millions of people celebrating Ganesh Chaturthi every year. Sorry RiRi, you disappointed me and others.
— daakkuuu (@Presenjeet26) February 15, 2021
rihanna !! stop using my religion as an aesthetic !! that ganesh figurine at the end of the chain :( is a holy and sacred figure for us hindus
— YEONJUN 4TH GEN IT BOY. alyn anti (@09S00B) February 15, 2021
ಈ ಟ್ವೀಟ್ ಬಳಿಕ ಆಕೆ ಟ್ರೋಲರ್ ಗಳ ಆಲೋಚನೆಗೆ ಗುರಿಯಾಗಿದ್ದಳು ಮತ್ತು ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಅವಳ ಟ್ವೀಟ್ ಗೆ ಟ್ವೀಟ್ ಮಾಡುವ ಮೂಲಕ ಗುರಿಯಾಗಿಸಿದ್ದರು.
ವಿಶೇಷ ಧರ್ಮವೊಂದರ ಅವಮಾನಿಸಿದ್ದಕ್ಕಾಗಿ ಈ ಮೊದಲು ಕೂಡ ರಿಯಾನ್ನಾ ವಿವಾದಕ್ಕೆ ಗುರಿಯಾಗಿದ್ದಳು
ರಿಯಾನ್ನಾ ಈ ರೀತಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿರುವುದು ಇದೆ ಮೊದಲಲ್ಲ. ಇದಕ್ಕೂ ಮೊದಲು 2013 ರಲ್ಲಿ ರಿಯಾನ್ನಾ ಅಬು ಧಾಬಿಯ ಶೇಕ್ ಜಾಯದ್ ಗ್ರಾಂಡ್ ಮಾಸ್ಕ್ ಸೆಂಟರ್ ನಲ್ಲಿ ಫೋಟೋಶೂಟ್ ನಡೆಸಿದ್ದಳು. ಅಲ್ಲಿ ಕೆಲ ಆಕ್ಷೇಪಾರ್ಹ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಕಾರಣ ಆಕೆಯನ್ನು ಅಲ್ಲಿಂದ ಹೊರಹೋಗಲು ಸೂಚಿಸಲಾಗಿತ್ತು.
ಇದನ್ನೂ ಓದಿ- ರೈತ ಹೋರಾಟದಲ್ಲಿ ಸ್ಟಾರ್ ವಾರ್..! ಹೋರಾಟಕ್ಕೆ ಸ್ವೀಡನ್ನಿನ ಚಳುವಳಿಗಾರ್ತಿ ಗ್ರೇಟಾ ಬೆಂಬಲ
ಬಳಿಕ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದ ಗ್ರಾಂಡ್ ಮಾಸ್ಕ್ ಸೆಂಟರ್, ರಿಯಾನ್ನಾ ಮಸೀದಿ ಅಧಿಕಾರಿಗಳ ಜೊತೆಗೆ ಮುಖಾಮುಖಿಯಾಗಿದ್ದರು. ಆಗ ಮಸೀದಿ ಆಧಿಕಾರಿಗಳು ಅವಳಿಗೆ ನಾರ್ಮಲ್ ಕಂಡಿಶನ್ಸ್ ಹಾಗೂ ಎಂಟ್ರೆನ್ಸ್ ಮೂಲಕ ಮಸೀದಿ ಭೇಟಿಗೆ ಬರಬಹುದು ಎಂದಿದ್ದರು.
ಇದನ್ನೂ ಓದಿ-ರೈತರ ಪ್ರತಿಭಟನೆಗೆ ಹಾಲಿವುಡ್ ನಟಿ ಸುಸಾನ್ ಸರಂಡನ್ ಬೆಂಬಲ
ಇದಾದ ಬಳಿಕ ರಿಆನ್ನಾ ತನ್ನದೇ ಆಗಿರುವ ಬ್ರಾಂಡ್ Savage X Fenty lingerie show ವೇಳೆಯೂ ಕೂಡ ತನ್ನ ಒಂದು ಹಾಡಿನ ಮೂಲಕ ವಿವಾದ ಸೃಷ್ಟಿಸಿದ್ದರು.
ಇದನ್ನೂ ಓದಿ- ಯಾರು ಈ ರಿಹಾನ್ನಾ..? ಜಗತ್ತಿನಾದ್ಯಂತ ಈಗ ಆಕೆ ಸುದ್ದಿಯಲ್ಲಿರುವುದೇಕೆ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.