ದೆಹಲಿ : ತುಟ್ಟಿಭತ್ಯೆ ಹೆಚ್ಚಳದ (DA)ಬಗ್ಗೆ ಸರ್ಕಾರ ಯಾವಾಗ ಫೋಷಣೆ ಮಾಡುತ್ತದೆ ಎನ್ನುವುದರ ಮೇಲೆಯೇ ಸರ್ಕಾರಿ ನೌಕರರ (Government employee) ದೃಷ್ಟಿ ನೆಟ್ಟಿದೆ. ಡಿಎ ಹೆಚ್ಚಳದ ಬಗ್ಗೆ ಯಾವಾಗ ಪೋಷಣೆಯಾಗುತ್ತದೆಯೋ ಎಂದು ಕೇಂದ್ರ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಇದಕ್ಕಾಗಿ ಹೆಚ್ಚು ದಿನ ಕಾಯಬೇಕಿಲ್ಲ. ಹೋಳಿಗಿಂತ (Holi) ಮೊದಲೇ ಸರ್ಕಾರ ಬಗ್ಗೆ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಹೀಗಾದರೆ ಹೋಳಿ ಹಬ್ಬಕ್ಕೆ ಸರ್ಕಾರ ಕೇಂದ್ರ ನೌಕರರಿಗೆ ಉಡುಗೊರೆ ನೀಡಿದಂತೆಯೇ
ಸಂಬಳ ಮತ್ತು ಪಿಂಚಣಿ ಎರಡೂ ಹೆಚ್ಚಳವಾಗಲಿದೆ:
ಡಿಎ (Dearness Allowance) ಹೆಚ್ಚಳವಾದರೆ ಸುಮಾರು 50 ಲಕ್ಷ ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ನೌಕರರ ಹಿತದೃಷ್ಟಿಯಿಂದ ಸರ್ಕಾರ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಬಹುದು. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ 17 ರಷ್ಟು ಡಿಎ (DA) ಸಿಗುತ್ತಿದೆ. ಈಗ ಸರ್ಕಾರ ಡಿಎಯಲ್ಲಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಶೀಘ್ರವೇ ಈ ಬಗ್ಗೆ ಪೋಷಣೆ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ : PM Fasal Bima Yojana: ರೈತರಿಗೆ ಸಿಗಲಿದೆ ಬೆಳೆ ವಿಮೆಯ ಗರಿಷ್ಠ ಲಾಭ
ಪ್ರತಿ 6 ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಪರಿಷ್ಕರಿಸುತ್ತದೆ. ಇದೀಗ ನೌಕರರು ಮತ್ತು ಪಿಂಚಣಿದಾರರು (Pensioner) ಪಡೆಯುವ ಡಿಎ ಬೇರೆ ಬೇರೆಯಾಗಿದೆ. ಡಿಎ ಹೆಚ್ಚಳವನ್ನು ಸರ್ಕಾರ ಘೋಷಿಸಿದರೆ ಕೇಂದ್ರ ನೌಕರರಿಗೆ ಅನುಕೂಲವಾಗಲಿದೆ. ಪ್ರಸ್ತುತ, ಕೇಂದ್ರ ಉದ್ಯೋಗಿಗಳಿಗೆ ಶೇಕಡಾ 17 ರಷ್ಟು ಡಿಎ ಸಿಗುತ್ತದೆ. ಶೇಕಡಾ 4 ರಷ್ಟು ಹೆಚ್ಚಿಸಿದರೆ ಅದು ಶೇಕಡಾ 21 ಕ್ಕೆ ತಲುಪಬಹುದು. ಕರೋನಾ (Coronavirus) ಅವಧಿಯಲ್ಲಿ ತಡೆಹಿಡಿಯಲಾಗಿದ್ದ ಡಿಎ ಹೆಚ್ಚಳವನ್ನು ಸರ್ಕಾರ ನೀಡಿದರೆ, ಕೇಂದ್ರ ಉದ್ಯೋಗಿಗಳಿಗೆ ಇನ್ನಷ್ಟು ಲಾಭವಾಗಲಿದೆ. ಸರ್ಕಾರವು ಕರೋನಾ ಕಾಲದಲ್ಲಿ ತಡೆಹಿಡಿಯಲಾಗಿದ್ದ ಡಿಎಯನ್ನು ಕೂಡಾ ಸೇರಿಸಿದರೆ, ಇದು 25 ಪ್ರತಿಶತವನ್ನು ತಲುಪುತ್ತದೆ. ಕರೋನಾ (COVID-19)ಅವಧಿಯಲ್ಲಿ ಎದುರಾದ ತೊಂದರೆಗಳು ಮತ್ತು ಆರ್ಥಿಕ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶೀಘ್ರದಲ್ಲೇ ಡಿಎ ಹೆಚ್ಚಳವನ್ನು ಪ್ರಕಟಿಸಬಹುದು ಎನ್ನಲಾಗಿದೆ.
ಗರಿಷ್ಠ ಪಿಂಚಣಿ ಮಿತಿ ಹೆಚ್ಚಿಸಿದ ಸರ್ಕಾರ :
ಡಿಎ ಹೆಚ್ಚಳವನ್ನು ಸರ್ಕಾರ ಇನ್ನೂ ಘೋಷಿಸಿಲ್ಲ, ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರ ಕುಟುಂಬಗಳಿಗೆ ಅನುಕೂಲವಾಗುವ ಘೋಷಣೆಯನ್ನು ಸರ್ಕಾರ ಮಾಡಿದೆ. ಸರ್ಕಾರಿ ನೌಕರನ ಮರಣದ ನಂತರ, ಅವರ ಕುಟುಂಬವು 1.25 ಲಕ್ಷ ರೂ.ಗಳನ್ನು ಪಿಂಚಣಿಯಾಗಿ (Pension) ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ಮಿತಿ 45 ಸಾವಿರ ರೂಪಾಯಿಗಳಿಗೆ ಸೀಮಿತವಾಗಿತ್ತು. ಸರ್ಕಾರ ಇದನ್ನು ಎರಡೂವರೆ ಪಟ್ಟು ಹೆಚ್ಚಿಸಿದೆ. ಈ ಘೋಷಣೆಯಿಂದಾಗಿ ಬೆಲೆ ಏರಿಕೆ (price hike) ಸಂದರ್ಭದಲ್ಲಿ ಮನೆ ನಡೆಸಲು ಕಷ್ಟಪಡುತ್ತಿದ್ದ ಸಾವಿರಾರು ಸರ್ಕಾರಿ ನೌಕರರ ಕುಟುಂಬಗಳು ಪ್ರಯೋಜನ ಪಡುವಂತಾಗಿದೆ.
ಇದನ್ನೂ ಓದಿ : Central Government: ಕೇಂದ್ರ ಸರ್ಕಾರದ ನೌಕರರಿಗೆ 'ಮಹತ್ವ'ದ ಸೂಚನೆ..!
ದಿವ್ಯಾಂಗರಿಗೆ ದೊಡ್ಡ ರಿಲೀಫ್ :
ಸರ್ಕಾರಿ ನೌಕರ ನಿಧನರಾದಾಗ, ಅವರ ಕುಟುಂಬದಲ್ಲಿ ದಿವ್ಯಾಂಗರಿದ್ದರೆ (Specially Abled), ಅವರಿಗೆ ಜೀವನೋಪಾಯಕ್ಕೆ ಬೇರೆ ಮಾರ್ಗ ಇಲ್ಲದೇ ಇದ್ದರೆ, ಅಂಥ ದಿವ್ಯಾಂಗರಿಗೆ ಜೀವನಪೂರ್ತಿ ಪಿಂಚಣಿ ಸಿಗಲಿದೆ. ಇದರಿಂದ ಸಾವಿರಾರು ಮಂದಿ ದಿವ್ಯಾಂಗರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಈ ಹಿಂದೆಯೂ ಮಂಥನ ನಡೆದಿತ್ತು. ಆದರೆ, ಯಾವುದೇ ನಿರ್ಧಾರವಾಗಿರಲಿಲ್ಲ.
ಮೊದಲಿದ್ದ ನಿಯಮ ಏನು..? :
ಕೇಂದ್ರ ನೌಕರನ ನಿಧನದ ಬಳಿಕ ಮೃತರ ಪತ್ನಿಗೆ ಪಿಂಚಣಿ ಸಿಗುತ್ತಿತ್ತು. ಪತ್ನಿಯ ನಿಧನದ ಬಳಿಕ ಯಾರಿಗೂ ಪಿಂಚಣಿ ಸಿಗುತ್ತಿರಲಿಲ್ಲ. ಈ ನಿಯಮದ ಪ್ರಕಾರ, ಇಂಥ ಸನ್ನಿವೇಶದಲ್ಲಿ ಮನೆಯಲ್ಲಿರುವ ದಿವ್ಯಾಂಗರಿಗೆ ಜೀವನೋಪಾಯ ದುಸ್ತರವಾಗುತ್ತಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ, ದಿವ್ಯಾಂಗರಿರುವ ಮನೆಯಲ್ಲಿ ಆಶ್ರಿತರಿಗೆ ಜೀವನಪೂರ್ತಿ ಪಿಂಚಣಿ ನೀಡಲು ಮುಂದಾಗಿದೆ. ಬದಲಾದ ನಿಯಮದ ಪ್ರಕಾರ ಸರ್ಕಾರಿ ನೌಕರನ ಮನೆಯಲ್ಲಿ ದಿವ್ಯಾಂಗರಿದ್ದರೆ, ಅಂಥವರಿಗೆ ಜೀವನಪೂರ್ತಿ ಪಿಂಚಣಿ ಬರಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.