Vasant Panchmi 2021 - ಯಾವ ರಾಶಿಯ ಜನರು ಇಂದು ಸರಸ್ವತಿಗೆ ಏನನ್ನು ಅರ್ಪಿಸಬೇಕು?

Vasant Panchmi 2021 - ಇಂದು ವಸಂತ ಪಂಚಮಿ. ದೇವಿ ಸರಸ್ವತಿಗೆ ಭಕ್ತಿ-ಭಾವದಿಂದ ಇಂದು ಪೂಜೆ ಸಲ್ಲಿಸಲಾಗುತ್ತದೆ. ರಾಶಿಗಳ ಅನುಸಾರ ಇಂದು ದೇವಿ ಸರಸ್ವತಿಯ ಪೂಜೆ ಹೇಗೆ ಮಾಡಬೇಕು ಹಾಗೂ ಇಂದು ದೇವಿಗೆ ಏನನ್ನು ಅರ್ಪಿಸಿದರೆ ದೇವಿ ಪ್ರಸನ್ನಳಾಗುತ್ತಾಳೆ ತಿಳಿದುಕೊಳ್ಳೋಣ ಬನ್ನಿ.
 

ನವದೆಹಲಿ:  Vasant Panchmi 2021 - ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ವಸಂತ ಪಂಚಮಿ ಹಬ್ಬ ಆಚರಿಸಲಾಗುತ್ತದೆ ಹಾಗೂ ಈ ವರ್ಷ ಫೆಬ್ರವರಿ 16, 2021 ರಂದು ಮಂಗಳವಾರ ವಸಂತ ಪಂಚಮಿ (Vasant Panchami) ಆಚರಣೆಯಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಬ್ರಹ್ಮದೇವರು ದೇವಿ ಸರಸ್ವತಿಯನ್ನು (Goddess Saraswati) ಸೃಷ್ಟಿಸಿದರು ಎನ್ನಲಾಗಿದೆ. ಹೀಗಾಗಿ ವಸಂತ ಪಂಚಮಿಯ ದಿನ ದೇವಿ ಸರಸ್ವತಿಗೆ ಭಕ್ತಿ-ಭಾವ ಹಾಗೂ ವಿಧಿವತ್ತಾಗಿ ಪೂಜೆ (Saraswati Puja) ಸಲ್ಲಿಸಲಾಗುತ್ತದೆ. ಈ ದಿನ ಹಳದಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಏಕೆಂದರೆ ದೇವಿ ಸರಸ್ವತಿಗೆ ಹಳದಿ ಬಣ್ಣ ತುಂಬಾ ಇಷ್ಟ. ಇಂದಿನ ದಿನ ಸರಸ್ವತಿ ಪೂಜೆ ಮಾಡುವ ವೇಳೆ ದೇವಿಗೆ ಹಳದಿ ಬಣ್ಣದ ವಸ್ತ್ರ ತೊಡಿಸಲಾಗುತ್ತದೆ ಜೊತೆಗೆ ಸಾಧಕರು ಕೂಡ ಹಳದಿ ಬಣ್ಣದ ವಸ್ತ್ರ ಧರಿಸುತ್ತಾರೆ.  ಇಂದು ದೇವಿ ಸರಸ್ವತಿಯನ್ನು ಪ್ರಸನ್ನಗೊಳಿಸಿ ಆಕೆಯ ಆಶೀರ್ವಾದ ಪಡೆಯಲು ನೀವು ಏನನ್ನು ವಿಶೇಷ ಮಾಡಬಹುದು ಎಂಬುದನ್ನು ರಾಶಿಗಳ (Zodiac Sign) ಆಧಾರದ ಮೇಲೆ ತಿಳಿದುಕೊಳ್ಳೋಣ(Astrology) ಬನ್ನಿ.

 

ಇದನ್ನೂ ಓದಿ- Vasant Panchmi 2021: ನಾಳೆ ವಸಂತ ಪಂಚಮಿ, ಅಪ್ಪಿ-ತಪ್ಪಿಯೂ ಕೂಡ ಈ 5 ಕೆಲಸ ಮಾಡಬೇಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /12

ಮೇಷ - ಈ ದಿನ ಮೇಷ ರಾಶಿಯ ಜನರು ಸರಸ್ವತಿ ಪೂಜೆ ಮಾಡುವಾಗ ಸರಸ್ವತಿ ಕವಚವನ್ನು ಪಠಿಸಬೇಕು. ಇದರಿಂದ ಬುದ್ಧಿ ಪ್ರಾಪ್ತಿಯಾಗುತ್ತದೆ ಹಾಗೂ ಏಕಾಗ್ರತೆಯ ಕೊರತೆ ದೂರಾಗುತ್ತದೆ.

2 /12

ವೃಷಭ - ದೇವಿ ಸರಸ್ವತಿಯನ್ನು ಪ್ರಸನ್ನಗೊಳಿಸಲು ವೃಷಭ ರಾಶಿಯ ಜನರು ದೇವಿಗೆ ಬಿಳಿ ಚಂದನದ ತಿಲಕವನ್ನಿಟ್ಟು ಹೂವು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜ್ನಾನದಲಿ ಹೆಚ್ಚಳವಾಗುವುದರ ಜೊತೆಗೆ ಇತರ ಸಮಸ್ಯೆಗಳಿಗೂ ಪರಿಹಾರ ಲಭಿಸುತ್ತದೆ.

3 /12

ಮಿಥುನ - ಮಿಥುನ ರಾಶಿಯ ಜನರು ಈ ದಿನ ದೇವಿ ಸರಸ್ವತಿಗೆ ಹಸಿರು ಬಣ್ಣದ ಲೇಖನಿ ಅರ್ಪಿಸಬೇಕು ಹಾಗೂ ತಮ್ಮ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಇದರಿಂದ ಬರವಣಿಗೆಗೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳು ದೂರಾಗಲಿವೆ.

4 /12

ಕರ್ಕ - ಕರ್ಕ ರಾಶಿಯ ಜನರು ಈ ದಿನ ಸರಸ್ವತಿಗೆ ಪಾಯಸ ನೈವೇದ್ಯ ತೋರಿಸಬೇಕು. ಸಂಗೀತ ಕ್ಷೇತ್ರದ ಜೊತೆಗೆ ಸಂಬಂಧಹೊಂದಿದ ವಿದ್ಯಾರ್ಥಿಗಳಿಗೆ ಇದರಿಂದ ವಿಶೇಷ ಲಾಭ ಸಿಗುತ್ತದೆ.

5 /12

ಸಿಂಹ - ದೇವಿ ಸರಸ್ವತಿಯ ಪೂಜೆ ಮಾಡುವ ವೇಳೆ ಸಿಂಹ ರಾಶಿಯ ಜನರು ಗಾಯತ್ರಿ ಮಂತ್ರ ಜಪಿಸಬೇಕು. ಇದರಿಂದ ವಿದೇಶಗಳಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲಾಭ ಸಿಗಲಿದೆ.

6 /12

ಕನ್ಯಾ - ಒಂದು ವೇಳೆ ನಿಮ್ಮ ರಾಶಿ ಕೂಡ ಕನ್ಯಾ ಆಗಿದ್ದರೆ, ಬಡ ಮಕ್ಕಳಿಗೆ ಅಧ್ಯಯನದ ವಸ್ತುಗಳ ಹಂಚಿಕೆ ಮಾಡಿ. ಇದರಲ್ಲಿ ಪೆನ್, ಪೆನ್ಸಿಲ್, ಪುಸ್ತಕ ಇತ್ಯಾದಿಗಳು ಶಾಮೀಲಾಗಿರಲಿ. ಓದಿನಲ್ಲಿ ಬರುತ್ತಿರುವ ಅಡಚಣೆಗಳು ಇದರಿಂದ ದೂರಾಗುತ್ತವೆ. 

7 /12

ತುಲಾ - ತುಲಾ ರಾಶಿಯ ಜಾತಕ ಹೊಂದಿದವು ಬ್ರಾಹ್ಮಣರಿಗೆ ಬಿಳಿ ಬಣ್ಣದ ಬಟ್ಟೆ ದಾನ ಮಾಡಬೇಕು. ವಿದ್ಯಾರ್ಥಿಗಳು ಈ ರೀತಿ ಮಾಡಿದರೆ ವಾಣಿಗೆ ಸಂಬಂಧಿಸಿದ ಅವರ ಸಮಸ್ಯೆಗಳು ದೂರಾಗುತ್ತವೆ ಹಾಗೂ ಅವರ ವಾಣಿಯಲ್ಲಿ ಮಧುರತೆ ಬರುತ್ತದೆ.

8 /12

ವೃಶ್ಚಿಕ - ಒಂದು ವೇಳೆ ನಿಮ್ಮ ರಾಶಿಯೂ ಕೂಡ ವೃಶ್ಚಿಕ ರಾಶಿಯಾಗಿದ್ದು, ನಿಮಗೆ ಸ್ಮರಣಶಕ್ತಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಸರಸ್ವತಿಯನ್ನು ಆರಾಧಿಸಿ ನೀವು ಈ ಸಮಸ್ಯೆಯನ್ನು ದೂರಗೊಳಿಸಬಹುದು. ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಕೆಂಪು ಬಣ್ಣದ ಪೆನ್ ಅರ್ಪಿಸಿ.

9 /12

ಧನು - ಧನು ರಾಶಿಯ ಜಾತಕದವರು ಇಂದು ದೇವಿ ಸರಸ್ವತಿಗೆ ಪೂಜೆ ಸಲ್ಲಿಸಿ, ನಂತರ ಹಳದಿ ಬಣ್ಣದ ಸಿಹಿಯ ನೈವೇದ್ಯ ತೋರಿಸಿ. ಇದರಿಂದ ನಿಮ್ಮ ನಿರ್ಣಯ ಕೈಗೊಳ್ಳುವ ಕ್ಷಮತೆ ಹೆಚ್ಚಾಗುತ್ತದೆ. ಜೊತೆಗೆ ಉನ್ನತ ಶಿಕ್ಷಣದ ನಿಮ್ಮ ಆಸೆ ಈಡೇರುತ್ತದೆ.  

10 /12

ಮಕರ - ಮಕರ ರಾಶಿಯ ಜನರು ಇಂದು ನಿರ್ಗತಿಕರಿಗೆ ಬಿಳಿ ಬಣ್ಣದ ಧಾನ್ಯ ದಾನ ನೀಡಬೇಕು. ಇದರಿಂದ ನಿಮ್ಮ ಬುದ್ಧಿಬಲ ಹೆಚ್ಚಾಗುತ್ತದೆ.

11 /12

ಕುಂಭ - ದೇವಿ ಸರಸ್ವತಿಗೆ ಪೂಜೆ ಸಲ್ಲಿಸಿದ ಬಳಿಕ ಬಡ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ಓದಿಗೆ ಸಂಬಂಧಿಸಿದ ಇತರೆ ವಸ್ತುಗಳನ್ನು ದಾನವಾಗಿ ನೀಡಬೇಕು. ಇದರಿಂದ ದೇವಿ ಸರಸ್ವತಿಯ ಕೃಪೆ ಸದಾ ನಿಮ್ಮ ಮೇಲಿರಲಿದೆ ಮತ್ತು ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ.

12 /12

ಮೀನ - ಸರಸ್ವತಿ ಪೂಜೆಯ ಬಳಿಕ ಬಾಲ ಕನ್ಯೆಯರಿಗೆ ಹಳದಿ ಬಣ್ಣದ ವಸ್ತ್ರ ದಾನ ಮಾಡಿ. ವೃತ್ತಿಜೀವನದಲ್ಲಿ ಬರುವ ಸಮಸ್ಯೆಗಳು ಇದರಿಂದ ದೂರಾಗುತ್ತವೆ ಮತ್ತು ದೇವಿ ಸರಸ್ವತಿ ಕೃಪೆ ಸದಾ ನಿಮ್ಮ ಮೇಲಿರಲಿದೆ.