Recruitment 2021: ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳಿಗೆ ಅರ್ಜಿ: SSLC ಆದವರಿಗೂ ಅವಕಾಶ!

433 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 217 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 39, ಎಸ್ಸಿಗೆ 46, ಎಸ್ಟಿಗೆ 20 ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 111 ಸ್ಥಾನಗಳನ್ನು ಮೀಸಲಿರಿಸಲಾಗಿದೆ

Last Updated : Feb 9, 2021, 05:07 PM IST
  • ಡಿಜಿಟಲ್ ಎಜುಕೇಷನ್ ಆಯಂಡ್ ಎಂಪ್ಲಾಯ್‍ಮೆಂಟ್ ಡೆವಲಪ್‍ಮೆಂಟ್‍ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ
  • 433 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 217 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 39, ಎಸ್ಸಿಗೆ 46, ಎಸ್ಟಿಗೆ 20 ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 111 ಸ್ಥಾನಗಳನ್ನು ಮೀಸಲಿರಿಸಲಾಗಿದೆ
  • ಎಸ್ಸೆಸ್ಸೆಲ್ಸಿ, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್‍ನಲ್ಲಿ ಪದವಿ/ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಕೋರ್ಸ್‍ನಲ್ಲಿ ಡಿಪ್ಲೋಮಾ
Recruitment 2021: ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳಿಗೆ ಅರ್ಜಿ: SSLC ಆದವರಿಗೂ ಅವಕಾಶ! title=

ಡಿಜಿಟಲ್ ಎಜುಕೇಷನ್ ಆಯಂಡ್ ಎಂಪ್ಲಾಯ್‍ಮೆಂಟ್ ಡೆವಲಪ್‍ಮೆಂಟ್‍ನಲ್ಲಿ (IDEED) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 433

ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, 433 ಹುದ್ದೆ(Job)ಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 217 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 39, ಎಸ್ಸಿಗೆ 46, ಎಸ್ಟಿಗೆ 20 ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 111 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಭ್ಯರ್ಥಿಗಳು ಸಂಸ್ಥೆಯೊಂದಿಗೆ ಅಪ್ರೆಂಟಿಸ್ ಅಗ್ರಿಮೆಂಟ್‍ಗೆ ಸಹಿ ಹಾಕಬೇಕಿದೆ.

Home Loan : ಮನೆ ಕೊಳ್ಳಲು ಇದಕ್ಕಿಂತ ಒಳ್ಳೆಯ ಟೈಮ್ ಸಿಗಲಿಕ್ಕಿಲ್ಲ.! ಯಾಕೆ ಗೊತ್ತಾ..?

ಹುದ್ದೆ ವಿವರ:

-ಡೇಟಾ ಎಂಟ್ರಿ ಆಪರೇಟರ್ - 168

- ವೆಬ್ ಡಿಸೈನರ್ - 15

- ಕಂಟೆಂಟ್ ರೈಟರ್ - 83

- ಕಂಪ್ಯೂಟರ್(Computer) ನೆಟ್‍ವರ್ಕಿಂಗ್ ಟೆಕ್ನಿಷಿಯನ್ - 46

- ಆಫೀಸ್ ಅಸಿಸ್ಟೆಂಟ್ - 39

ಆರ್‌ಬಿಐನ ದೊಡ್ಡ ನಿರ್ಧಾರ, ಇನ್ಮುಂದೆ ವಿಳಂಬವಾಗುವುದಿಲ್ಲ Cheque ಕ್ಲಿಯರೆನ್ಸ್

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್‍ನಲ್ಲಿ ಪದವಿ/ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಕೋರ್ಸ್‍ನಲ್ಲಿ ಡಿಪ್ಲೋಮಾ

ವಯೋಮಿತಿ: 20.2.2021ಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ಸ್ಟೈಪೆಂಡ್: ಅಪ್ರೆಂಟಿಸ್ ನಿಯಮದ ಪ್ರಕಾರ ಮಾಸಿಕ 11,500- 19,200 ರೂ. ನೀಡಲಾಗುವುದು.

SBI ಗ್ರಾಹಕರೇ ಗಮನಿಸಿ, ನೀವು ATM ಬಳಸುವ ಮುನ್ನ ತಪ್ಪದೇ ಈ ಕೆಲಸ ಮಾಡಿ

ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ(OBC), ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು 550 ರೂ., SC, ST, ಅಂಗವಿಕಲ ಅಭ್ಯರ್ಥಿಗಳಿಗೆ 400 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಆನ್‍ಲೈನ್ ಮೂಲಕ ಪಾವತಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಜನರಲ್ ಸ್ಟಡೀಸ್ ಆಯಂಡ್ ರೀಸನಿಂಗ್, ಜನರಲ್ ಸೈನ್ಸ್, ಜನರಲ್ ಮ್ಯಾಥ್ಸ ಮತ್ತು ಇಂಗ್ಲಿಷ್ ಕುರಿತ ಪ್ರಶ್ನೆಗಳಿರುತ್ತವೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳು ವೈದ್ಯಕೀಯವಾಗಿಯೂ ಫಿಟ್ ಇರತಕ್ಕದ್ದು.

ಜೇಬಲ್ಲಿ ದುಡ್ಡಿಲ್ಲದೇ ಇದ್ರೂ ಈ ಟಾಟಾ ಸಫಾರಿ ನಿಮ್ಮದಾಗಿಸಿಕೊಳ್ಳಬಹುದು..!

ಅರ್ಜಿ ಸಲ್ಲಿಸಲು ಕೊನೇ ದಿನ: 20.2.2021

ಅಧಿಸೂಚನೆಗೆ: https://bit.ly/3pRAI8a

ಮಾಹಿತಿಗೆ: http://www.dsrvsindia.ac.in

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ 

Trending News