ನವದೆಹಲಿ, ಆ.31: ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರ ಇದೇ ಡಿಸೆಂಬರ್ 31ರವರೆಗೂ ಕಾಲವಕಾಶ ನೀಡಿದೆ.
ಆಧಾರ್ ಕಾರ್ಡಿನೊಂದಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಇಂದೇ ಕಡೆಯದಿನವಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಲಿಂಕಿಂಗ್ ಪ್ರಕ್ರಿಯೆ ಆಗಿಲ್ಲದಿರುವುದರಿಂದ ವಿಧಿಯಿಲ್ಲದೆ ಕೇಂದ್ರ ಸರ್ಕಾರ ಮತ್ತೆ ನಾಲ್ಕುತಿಂಗಳ ಗಡುವು ನೀಡಿದೆ.
ಈ ಹಿಂದೆಯೂ ಕೂಡ ಗಡುವು ನೀಡಿ ಜನರಿಂದ ಪೂರಕ ಪ್ರತಿಕ್ರಿಯೆ ಸಿಗದೆ ಕೊಟ್ಟಿದ್ದ ಗಡುವನ್ನು ವಿಸ್ತರಿಸಲಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದೂ ಇನ್ನೂ ಬಹುತೇಕರು ಆಧಾರ್ ಮತ್ತು ಪಾನ್ ಕಾರ್ಡುಗಳನ್ನು ಲಿಂಕ್ ಮಾಡಿಲ್ಲದಿರುವುದರಿಂದ ಮತ್ತೊಮ್ಮೆ ಅವಧಿ ವಿಸ್ತರಿಸಲಾಗಿದೆ.