ಧಾರವಾಡ: ನಾವು ಯಾರನ್ನು ಒದ್ದು ಬಂದಿದ್ದೇವೋ.. ಇಂದು ಅವರ ಜೊತೆಗೆನೇ ಮದುವೆಯಾಗಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಆಡಳಿತರೂಢ ಬಿಜೆಪಿ, ಪರಿಷತ್ ಸಭಾಪತಿಯನ್ನು ಜೆಡಿಎಸ್(JDS)ಗೆ ಬಿಟ್ಟುಕೊಟ್ಟು ತಾನು ಉಪಸಭಾಪತಿ ಕುರ್ಚಿಯಲ್ಲಿ ಕುಳಿತುಕೊಂಡಿದೆ. ಆದ್ರೆ, ಇಲ್ಲಿ ತಮ್ಮ ಮಾಜಿ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ವಿಶ್ವನಾಥ್ ಕೊಂಚ ಬೇಸರಗೊಂಡಂತಿದೆ. ಯಾಕಂದ್ರೆ ಈ ಹಿಂದೆ ವಿಶ್ವನಾಥ್ ಅವರು ಜೆಡಿಎಸ್ ಶಾಸಕರಾಗಿದ್ದವರು. ಅಲ್ಲದೇ ಕುಮಾರಸ್ವಾಮಿ ನಡೆಗೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.
Congress: 'ಬಿಜೆಪಿ ಹಿಟ್ಲರ್ ರಕ್ತದವರು, ರಾಷ್ಟ್ರ ಧ್ವಜವನ್ನೇ ಹಾರಿಸುತ್ತಿರಲಿಲ್ಲ'
ಇನ್ನು ಈ ಬಗ್ಗೆ ನಗರದಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಹಠದಿಂದ ಮಂತ್ರಿ ಆಗಬೇಕು ಎಂದು ಜೆಡಿಎಸ್ ಬಿಟ್ಟು ಬಂದಿಲ್ಲ. 17 ಜನರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ವಿ. ಇಲ್ಲಿ ಪಕ್ಷ ರಾಜಕಾರಣ ಸತ್ತು ಹೋಗಿದೆ. ಶಾಸಕಾಂಗ ಪಕ್ಷದ ನಾಯಕನ ವಿರುದ್ಧ ನಡೆದ ಷ್ಯಡ್ಯಂತ್ರ ಇದು ಎಂದು ಗುಡುಗಿದರು.
BJP: 'ಯುಗಾದಿಗೆ ಹೊಸ ಸಿಎಂ ಬಂದೇ ಬರ್ತಾರೆ, ನೋಡ್ತಾ ಇರಿ'
ದೇಶದಲ್ಲಿ ಪ್ರಧಾನಿ ಮೋದಿ ಕುಟುಂಬ ರಾಜಕಾರಣ ನಡೆಯುತ್ತಿದೆ ಅಂತಿದ್ದಾರೆ. ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಿದ್ದೇ ನಾವು. ಅನಂತಕುಮಾರ್ ನಿಧನದ ನಂತರ ಅವರ ಕುಟುಂಬಕ್ಕೆ ಟಿಕೆಟ್ ಸಿಕ್ಕಿಲ್ಲ. ಇನ್ನು ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡೋದರ ಬಗ್ಗೆ ಕಾದು ನೋಡೋಣ ಎಂದರು.
Laxman Savadi: ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ 'ಸಿಹಿ ಸುದ್ದಿ' ನೀಡಿದ ಸಚಿವ ಸವದಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ..
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.