Supreme Court: ಈ ನಾಲ್ವರ ಮೇಲಿದೆ ಕೇಂದ್ರ-ರೈತರ ನಡುವಿನ ತಿಕ್ಕಾಟಕ್ಕೆ ಅಂತ್ಯ ಕಾಣಿಸುವ ಜವಾಬ್ದಾರಿ!

ರೈತ ಸಂಘಗಳೊಂದಿಗೆ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿಯ ಸದಸ್ಯರನ್ನು ಸಹ ಸುಪ್ರೀಂ ಕೋರ್ಟ್ ಆಯ್ಕೆ ಮಾಡಿದೆ.

Last Updated : Jan 12, 2021, 06:38 PM IST
  • ರೈತ ಸಂಘಗಳೊಂದಿಗೆ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿಯ ಸದಸ್ಯರನ್ನು ಸಹ ಸುಪ್ರೀಂ ಕೋರ್ಟ್ ಆಯ್ಕೆ ಮಾಡಿದೆ.
  • ಸುಪ್ರೀಂ ಕೋರ್ಟ್ ಸ್ಥಾಪಿಸಿರುವ ಸಮಿತಿಯು ಪರಿಶೀಲಿಸಬೇಕಾದ ಅಂಶಗಳ ಬಗ್ಗೆ ರೈತ ಸಂಘಗಳ ಮುಖಂಡರು ತೀರ್ಮಾನಿಸಲಿದ್ದಾರೆ.
  • ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಸುಪ್ರೀಂ ಕೋರ್ಟ್ ಸಮಿತಿ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿದೆ.
Supreme Court: ಈ ನಾಲ್ವರ ಮೇಲಿದೆ ಕೇಂದ್ರ-ರೈತರ ನಡುವಿನ ತಿಕ್ಕಾಟಕ್ಕೆ ಅಂತ್ಯ ಕಾಣಿಸುವ ಜವಾಬ್ದಾರಿ! title=

ನವದೆಹಲಿ: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದ್ದು, ಮುಂದಿನ ಆದೇಶದವರೆಗೆ ತಡೆಯಾಜ್ಞೆ ಜಾರಿಯಲ್ಲಿರಲಿದೆ ಎಂದು ಕೋರ್ಟ್ ಹೇಳಿದೆ.

ಆದರೆ, ರೈತ ಸಂಘಗಳೊಂದಿಗೆ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ಸುಪ್ರೀಂ ಕೋರ್ಟ್(Supreme Court) ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿಯ ಸದಸ್ಯರನ್ನು ಸಹ ಸುಪ್ರೀಂ ಕೋರ್ಟ್ ಆಯ್ಕೆ ಮಾಡಿದೆ.

B.S.Yediyurappa: ನಾಳೆ 7-8 ಸಚಿವರ ಪ್ರಮಾಣ ವಚನ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ..!

ಬಿ ಕೆ ಯು ಅಧ್ಯಕ್ಷ ಜಿತೇಂದರ್ ಸಿಂಗ್ ಮಾನ್, ಅಂತಾರಾಷ್ಟ್ರೀಯ ನೀತಿ ಮುಖ್ಯಸ್ಥ ಡಾ.ಪ್ರಮೋದ್ ಕುಮಾರ್ ಜೋಶಿ, ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಹಾಗೂ ಶಿವಕೇರಿ ಸಂಘಟನೆ ಮಹಾರಾಷ್ಟ್ರ ಅಧ್ಯಕ್ಷ ಅನಿಲ್ ಧನ್ವತ್ ಸಮಿತಿಯ ಸದಸ್ಯರಾಗಿದ್ದಾರೆ.

Govind Karjol: 'ತಾಲೂಕು ಪಂಚಾಯತಿ ವ್ಯವಸ್ಥೆಯನ್ನೇ ರದ್ದು ಮಾಡುತ್ತೇವೆ'

ಸುಪ್ರೀಂ ಕೋರ್ಟ್ ಸ್ಥಾಪಿಸಿರುವ ಸಮಿತಿಯು ಪರಿಶೀಲಿಸಬೇಕಾದ ಅಂಶಗಳ ಬಗ್ಗೆ ರೈತ ಸಂಘಗಳ ಮುಖಂಡರು ತೀರ್ಮಾನಿಸಲಿದ್ದಾರೆ. ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಸುಪ್ರೀಂ ಕೋರ್ಟ್ ಸಮಿತಿ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿದೆ.

Cabinet Expansion: ಬಿಎಸ್ ವೈಗೆ ಸಂಪುಟದಲ್ಲಿ 'ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ಫಿಕ್ಸ್'..!

ಹೊಸ ಕೃಷಿ ಕಾಯ್ದೆಗಳ ಕುರಿತು ಸುಪ್ರೀಂ ಕೋರ್ಟ್‌ ಇಂದು ವಿಚಾರಣೆ ನಡೆಸಿತು. ಕಾನೂನುಗಳನ್ನು ಆತುರಾತರವಾಗಿ ಜಾರಿಗೆ ತಂದಿಲ್ಲ, ದಶಕಗಳ ಕಾಲ ಮಾತುಕತೆಯ ಫಲಿತವಾಗಿ ಈ ಕಾಯ್ದೆಗಳು ರೂಪುಗೊಂಡಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಂಡಿದೆ.

S.Suresh Kumar: 'ಶಾಲಾ-ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಶೇಕಡ 30ರಷ್ಟು ಕಡಿತ'

ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಕಳೆದ 40ಕ್ಕೂ ಹೆಚ್ಚುದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಅಂತ್ಯಗೊಳಿಸಲು, ಕೇಂದ್ರ ಸರ್ಕಾರ ಈವರೆಗೆ 8 ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪರಿಹಾರ ಲಭಿಸಿಲ್ಲ.

Cabinet Expansion : ಸಪ್ತ ಸಚಿವರ ಸಿಟಿ ಬೆಂಗಳೂರು ವಿಚಾರದಲ್ಲಿ ಬಿಎಸ್ ವೈಗೆ ಟೆನ್ಶನ್ ಯಾಕೆ..?

ಬಿಕ್ಕಟ್ಟು ಬಗೆಹರಿಯದ ಕಾರಣ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶಿದರೂ ತಾವು ಮಾತ್ರ ಪ್ರತಿಭಟನಾ ಪ್ರದೇಶಗಳನ್ನು ತೊರೆಯುವುದಿಲ್ಲ ಎಂದು ರೈತರು ಹೇಳಿದ್ದಾರೆ. ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ಮೆರವಣಿಗೆ ನಡೆಯಲಿದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

B.S.Yediyurappa: ನಾಳೆ ಬಿಎಸ್ ವೈ ಸಚಿವ ಸಂಪುಟ ವಿಸ್ತರಣೆ: ಮೂವರು ಹಾಲಿ ಸಚಿವರಿಗೆ ಕೊಕ್!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News