Video:ವಿರುಷ್ಕಾ ದಂಪತಿಯ ಮುದ್ದಾದ ಮಗಳ ಮೊದಲ ಝಲಕ್ ಹಂಚಿಕೊಂಡ ವಿರಾಟ್ ಸಹೋದರ

Virat-Anushka Baby: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಮವಾರ ಮುದ್ದಾದ ಮಗಳಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಹಾಗೂ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Written by - Nitin Tabib | Last Updated : Jan 11, 2021, 09:17 PM IST
  • ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ವಿರುಷ್ಕಾ ದಂಪತಿ.
  • ತನ್ನ ಅಧಿಕೃತ ಖಾತೆಯಿಂದ ಮಾಹಿತಿ ಹಂಚಿಕೊಂಡ ವಿರಾಟ್ .
  • ವಿರುಷ್ಕಾ ದಂಪತಿಯ ಮೊದಲ ವಿಡಿಯೋ ಝಲಕ್ ಹಂಚಿಕೊಂಡ ವಿಕಾಸ್ ಕೊಹ್ಲಿ.
Video:ವಿರುಷ್ಕಾ ದಂಪತಿಯ ಮುದ್ದಾದ ಮಗಳ ಮೊದಲ ಝಲಕ್ ಹಂಚಿಕೊಂಡ ವಿರಾಟ್ ಸಹೋದರ  title=
Virushka Couple (File Photo)

Virat-Anushka Baby - ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಮವಾರ ಮುದ್ದಾದ ಮಗಳಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಹಾಗೂ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  ಈ ಕುರಿತು ಖುದ್ದು ವಿರಾಟ್ ಕೊಹ್ಲಿ (Virat Kohli) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಸಹೋದರ ವಿಕಾಸ್ ಕೊಹ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ವಿರುಷ್ಕಾ ದಂಪತಿಯ ಮುದ್ದಾದ ಮಗಳ ಮೊದಲ ಝಲಕ್ ಕಂಡು ಬರುತ್ತಿದೆ.

 
 
 
 

 
 
 
 
 
 
 
 
 
 
 

A post shared by Vikas Kohli (@vk0681)

ಇದಕ್ಕೂ ಮೊದಲು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದ ವಿರಾಟ್ ಕೊಹ್ಲಿ, "ಇಂದು ಮಧ್ಯಾಹ್ನ ನಮ್ಮ ಮನೆಯಲ್ಲಿ ಪುತ್ರಿಯ ಆಗಮನವಾಗಿದೆ ಎಂದು ಹೇಳಲು ನಮ್ಮಿಬ್ಬರಿಗೆ ಅತೀವ ಆನಂದವಾಗುತ್ತಿದೆ. ನಿಮ್ಮ ಪ್ರೀತಿ ಹಾಗೂ ಶುಭಕಾಮನೆಗಳಿಗೆ ನಾವು ಆಭಾರಿಯಾಗಿದ್ದೇವೆ. ಅನುಷ್ಕಾ ಹಾಗೂ ನಮ್ಮಿಬ್ಬರ ಪುತ್ರಿ ಇಬ್ಬರೂ ಆರೋಗ್ಯವಂತರಾಗಿದ್ದಾರೆ.  ಜೀವನದ  ಈ ಅಧ್ಯಾಯ ಅನುಭವಿಸುವ ಅವಕಾಶ ದೊರೆತಿರುವುದು ನಮ್ಮಿಬ್ಬರ ಸೌಭಾಗ್ಯ. ಪ್ರಸ್ತುತ ಜೀವನದ ಈ ಗಳಿಗೆಯಲ್ಲಿ ನಮ್ಮಿಬ್ಬರಿಗೆ ಪ್ರೈವೆಸಿಯ ಅಗತ್ಯತೆ ಇದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ ಎಂದು ಭಾವಿಸುವೆ" ಎಂದಿದ್ದರು.

ಇದನ್ನು ಓದಿ- Virat Kohli : ಹೆಣ್ಣು ಮಗುವಿಗೆ ಜನ್ಮ ನೀಡಿದ Anushka Sharma

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸಹೋದರಿಯಾಗಿರುವ ಭಾವನಾ ಕೂಡ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿರುಷ್ಕಾ ಪುತ್ರಿಯ ಭಾವಚಿತ್ರ ಹಂಚಿಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, "ನಮಗೆ ಸ್ವರ್ಗದಿಂದ ಉಡುಗೊರೆಯೊಂದು ಸಿಕ್ಕಿದೆ. ಪ್ರೀತಿ ಮಾಡಲು ಬಂದಿದ್ದಾಳೆ ಪರಿ, ಮುದ್ದಾದ ಪರಿ. ಸೋದರತ್ತೆಯಾಗಿದ್ದಕ್ಕೆ ಖುಷಿಯಾಗುತ್ತಿದೆ" ಎಂದು ಹೇಳಿದ್ದರು.

ಇದನ್ನು ಓದಿ-Anushka-Virat ವಿವಾಹದ Unseen ಫೋಟೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಮ್ಯಾಚ್ ಬಳಿಕ ತಮ್ಮ ಮೊದಲ ಮಗುವಿನ ಜನ್ಮದ ಹಿನ್ನೆಲೆ ಅನುಷ್ಕಾ ಶರ್ಮಾ ವರ ಜೊತೆಗಿರಲು ಪ್ಯಾಟರ್ನಿಟಿ ರಜೆ ಪಡೆದು ಡಿಸೆಂಬರ್ ನಲ್ಲಿಯೇ ಭಾರತಕ್ಕೆ ಮರಳಿರುವುದು ಇಲ್ಲಿ ಉಲ್ಲೇಖನೀಯ. ಅವರ ಪೋಷಕತ್ವ ರಜೆಗೆ ಬಿಸಿಸಿಐ ಅನುಮತಿ ನೀಡಿದೆ. ಅಡಿಲೇಡ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಳಿಕ 8 ವಿಕೆಟ್ ಗಳಿಂದ ಸೋಲನ್ನು ಅನುಭವಿಸಿತ್ತು.  ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 36 ರನ್ ಗಳನಷ್ಟೇ ಗಳಿಸಲು ಟೀಂ ಇಂಡಿಯಾ ಶಕ್ತವಾಗಿತ್ತು.

ಇದನ್ನು ಓದಿ-ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News