ಇಂಡೋನೇಷ್ಯಾ: ರಾಜಧಾನಿ ಜಕಾರ್ತ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ 62 ಜನರಿದ್ದ ಶ್ರೀವಿಜಯ ಏರ್ ವಿಮಾನಸಂಪರ್ಕ ಕಳೆದುಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಪಶ್ಚಿಮ ಕಾಲಿಮಂಟನ್ ನ ಪೊಂಡಿಯಾನಕ್ ಗೆ ಹೋಗುವ ಮಾರ್ಗದಲ್ಲಿ ಬೋಯಿಂಗ್ 737-500 ವಿಮಾನ(Plane)ವು 2.30 p.m. (0730 GMT) ಟೇಕ್ ಆಫ್ ಆದ ನಂತರ ರಾಡಾರ್ ಪರದೆಗಳಿಂದ ಕಣ್ಮರೆಯಾಗಿದೆ. ಇಂತಹ ವಿಮಾನದಲ್ಲಿ 12 ಸಿಬ್ಬಂದಿ ಸೇರಿದಂತೆ 62 ಮಂದಿ ವಿಮಾನದಲ್ಲಿದ್ದರು ಎಂದು ಇಂಡೋನೇಷ್ಯಾದ ಸಾರಿಗೆ ಸಚಿವ ಬುಡಿ ಕಾರ ಯಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಮೊದಲು 56 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದರು.
ಟ್ವಿಟರ್ ನಿಷೇಧದ ನಂತರ ತನ್ನದೇ ವೇದಿಕೆ ನಿರ್ಮಿಸುವುದಾಗಿ ಹೇಳಿದ ಟ್ರಂಪ್...!
ಜಕಾರ್ತದ ಉತ್ತರ ಭಾಗದಲ್ಲಿ ಶೋಧಕ್ಕಾಗಿ ತಂಡಗಳನ್ನು ಕಳುಹಿಸಲಾಗಿದೆ ಎಂದು ದೇಶದ ಶೋಧ ಮತ್ತು ರಕ್ಷಣಾ ಏಜೆನ್ಸಿ ಬಸರ್ನಾಸ್ ಮುಖ್ಯಸ್ಥ ಬಾಗುಸ್ ಪುರುಹಿಟೊ ಹೇಳಿದ್ದಾರೆ. ಯಾವುದೇ ರೇಡಿಯೋ ಬೀಕನ್ ಸಿಗ್ನಲ್ ಪತ್ತೆಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಳೆದುಕೊಂಡ ಶ್ರೀವಿಜಯ ಏರ್ ವಿಮಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ