ಖ್ಯಾತ ಫ್ಯಾಶನ್ ಡಿಸೈನರ್ ಸತ್ಯಪಾಲ್ ನಿಧನ

ಖ್ಯಾತ ಫ್ಯಾಷನ್ ಡಿಸೈನರ್ ಮತ್ತು ಮೆಚ್ಚುಗೆ ಪಡೆದ ಫ್ಯಾಶನ್ ಲೇಬಲ್ ಸ್ಥಾಪಕ ಸತ್ಯ ಪಾಲ್ ಅವರು ತಮ್ಮ 78 ನೇ ವಯಸ್ಸಿನಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಿಧನರಾದರು.ಸತ್ಯಪಾಲ್ ಅವರ ಪುತ್ರ ಪುನೀತ್ ನಂದಾ ಮತ್ತು ಈಶಾ ಯೋಗ ಕೇಂದ್ರದ ಸಂಸ್ಥಾಪಕ ಸದ್ಗುರು ಅವರು ಈ ಸುದ್ದಿಯನ್ನು ಗುರುವಾರ ಪ್ರಕಟಿಸಿದರು.

Last Updated : Jan 7, 2021, 04:39 PM IST
  • ಸತ್ಯ ಪಾಲ್ ಅವರು ತಮ್ಮ 78 ನೇ ವಯಸ್ಸಿನಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಅವರು ನಿಧನರಾದರು
  • 70ರ ದಶಕದಲ್ಲಿ ಜೆ ಕೃಷ್ಣಮೂರ್ತಿ (ದಾರ್ಶನಿಕ) ರೊಂದಿಗೆ ಅವರ ಆಧ್ಯಾತ್ಮಿಕ ಪ್ರಯಾಣವು ಪ್ರಾರಂಭವಾಯಿತು, ನಂತರ ಅವರು ಓಶೋ ಅವರಿಂದ ಸನ್ಯಾಸವನ್ನು ತೆಗೆದುಕೊಂಡರು.
  • ಡಿಸೆಂಬರ್ 2 ರಂದು ಸತ್ಯ ಪಾಲ್ ಅವರಿಗೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು,
ಖ್ಯಾತ ಫ್ಯಾಶನ್ ಡಿಸೈನರ್ ಸತ್ಯಪಾಲ್ ನಿಧನ  title=
Photo Courtesy: Twitter

ನವದೆಹಲಿ: ಖ್ಯಾತ ಫ್ಯಾಷನ್ ಡಿಸೈನರ್ ಮತ್ತು ಮೆಚ್ಚುಗೆ ಪಡೆದ ಫ್ಯಾಶನ್ ಲೇಬಲ್ ಸ್ಥಾಪಕ ಸತ್ಯ ಪಾಲ್ ಅವರು ತಮ್ಮ 78 ನೇ ವಯಸ್ಸಿನಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಿಧನರಾದರು.ಸತ್ಯಪಾಲ್ ಅವರ ಪುತ್ರ ಪುನೀತ್ ನಂದಾ ಮತ್ತು ಈಶಾ ಯೋಗ ಕೇಂದ್ರದ ಸಂಸ್ಥಾಪಕ ಸದ್ಗುರು ಅವರು ಈ ಸುದ್ದಿಯನ್ನು ಗುರುವಾರ ಪ್ರಕಟಿಸಿದರು.

ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿ ಎಲ್ಲರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು-ಸದ್ಗುರು

ಫೇಸ್‌ಬುಕ್ ಪೋಸ್ಟ್‌ನಲ್ಲಿ ಪುನೀತ್ ನಂದಾ ಅವರು ಡಿಸೆಂಬರ್ 2 ರಂದು ಸತ್ಯ ಪಾಲ್ ಅವರಿಗೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದರು.

ಸತ್ಯಪಾಲ್ ಡಿಸೈನರ್ ಅಥವಾ ಉದ್ಯಮಿಗಿಂತ ಹೆಚ್ಚಾಗಿ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು. 70ರ ದಶಕದಲ್ಲಿ ಜೆ ಕೃಷ್ಣಮೂರ್ತಿ (ದಾರ್ಶನಿಕ) ರೊಂದಿಗೆ ಅವರ ಆಧ್ಯಾತ್ಮಿಕ ಪ್ರಯಾಣವು ಪ್ರಾರಂಭವಾಯಿತು, ನಂತರ ಅವರು ಓಶೋ ಅವರಿಂದ ಸನ್ಯಾಸವನ್ನು ತೆಗೆದುಕೊಂಡರು.1990 ರಲ್ಲಿ ಓಶೋ ನಿಧನದ ನಂತರ, ಅವರು ಇನ್ನೊಬ್ಬ ಮಾಸ್ಟರ್ ಅನ್ನು ಹುಡುಕುತ್ತಿದ್ದರು. ಆಗ ಅವರು 2007 ರಲ್ಲಿ ಸದ್ಗುರು (Sadhguru) ಅವರ ಬಳಿ ಹೋದರು. ಮತ್ತೆ ತಕ್ಷಣ ಯೋಗದ ಹಾದಿಗೆ ಮರಳಿ ಅಂತಿಮವಾಗಿ 2015 ರಿಂದ ಇಶಾ ಕೇಂದ್ರದಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: ರಣವೀರ್ ಸಿಂಗ್ ಜೊತೆ 'ಹ್ಯಾಪಿ ಡ್ಯಾನ್ಸ್' ಮಾಡಿದ ಸದ್ಗುರು-ವೀಡಿಯೋ

ಈಗ ಸತ್ಯಪಾಲ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಸದ್ಗುರು 'ಸತ್ಯಪಾಲ್, ಅಗಾಧವಾದ ಉತ್ಸಾಹ ಮತ್ತು ಅವಿರತ ಪಾಲ್ಗೊಳ್ಳುವಿಕೆಯೊಂದಿಗೆ ಬದುಕುವುದಕ್ಕೆ ಒಂದು ಉತ್ತಮ ಉದಾಹರಣೆ. ಭಾರತೀಯ ಫ್ಯಾಷನ್ ಉದ್ಯಮಕ್ಕೆ ನೀವು ತಂದ ವಿಶಿಷ್ಟ ದೃಷ್ಟಿ ನಿಜಕ್ಕೂ ಗೌರವವಾಗಿದೆ. ನೀವು ನಮ್ಮ ನಡುವೆ ಇದ್ದೀರಿ. ಸಂತಾಪಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News