Poonawalla Vs Krishna Ella: ನವದೆಹಲಿ: ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಕುರಿತು ಎರಡು ಕಂಪನಿಗಳ ಸಿಇಓಗಳ ಮಧ್ಯೆ ನಡೆಯುತ್ತಿರುವ ಸಿತಲ ಸಮರಕ್ಕೆ ಸರ್ಕಾರ ಅಂತ್ಯಹಾಡಿದೆ. ಈ ಕುರಿತು ಹೇಳಿದೆ ನೀಡಿರುವ ಸರ್ಕಾರ ಎರಡೂ ವ್ಯಾಕ್ಸಿನ್ ಗಳು ಸುರಕ್ಷಿತವಾಗಿವೆ ಹಾಗೂ ಸಾಮಾನ್ಯ ಜನರು ಯಾವುದೇ ಲಸಿಕೆಯನ್ನು ಹಾಕಿಸಿಕೊಳ್ಳಬಹುದು.
ಎರಡೂ ಕೊರೊನಾ ವ್ಯಾಕ್ಸಿನ್ ಗಳು ಸುರಕ್ಷಿತವಾಗಿವೆ
ಕರೋನಾ ಲಸಿಕೆ ತಯಾರಿಸಿದ ಎರಡು ಕಂಪನಿಗಳ ನಡುವಿನ ಮುಖಾಮುಖಿಯಲ್ಲಿ ಕೇಂದ್ರ ಸರ್ಕಾರ ಎಂಟ್ರಿ ನೀಡಿದ್ದು, ಎರಡು ಕಂಪೆನಿಗಳ ಸಿಇಓ ಜೊತೆ ಮಾತುಕತೆ ನಡೆಸಿ ಮಂಗಳವಾರ ಮಧ್ಯಮ ಮಾರ್ಗವನ್ನು ಕಂಡುಕೊಂಡಿದೆ. ಎರಡೂ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಜನರು ಅವುಗಳನ್ನು ನಂಬಬಹುದು ಎಂದು ಸರ್ಕಾರ ಎರಡೂ ಕಂಪನಿಗಳ ಸಹಿಯೊಂದಿಗೆ ಜಂಟಿ ಹೇಳಿಕೆ ನೀಡಿದೆ. ಈ ಎರಡೂ ಲಸಿಕೆಗಳನ್ನು ಜನರಿಗೆ ಅನ್ವಯಿಸಲಾಗುತ್ತದೆ.
ಇದನ್ನು ಓದಿ- BIG NEWS: ಸ್ಥಳೀಯ ಲಸಿಕೆ 'Covaxin' ಸುರಕ್ಷಿತ ಮತ್ತು ಪರಿಣಾಮಕಾರಿ ಎಂದ ICMR
ಅದರ್ ಪೂನಾವಾಲಾ ಹೇಳಿಕೆಯಿಂದ ಸೃಷ್ಟಿಯಾದ ವಿವಾದ
ಈ ಕುರಿತು ಭಾನುವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಓ ಅದರ್ ಪೂನಾವಾಲಾ, ಕೊರೊನಾ ವಿರುದ್ಧ ಕೇವಲ ಮೂರು ಲಸಿಕೆಗಳು ಅಂದರೆ ಫೈಜರ್, ಮಾಡರ್ನಾ ಹಾಗೂ ಆಕ್ಸ್ಫರ್ಡ್-ಅಸ್ಟ್ರಾಜೇನಿಕಾ ಲಸಿಕೆಗಳು ಮಾತ್ರ ಸುರಕ್ಷಿತವಾಗಿದ್ದು, ಉಳಿದೆಲ್ಲ ಲಸಿಕೆಗಳು 'ನೀರಿನ ರೀತಿ ಸುರಕ್ಷತೆ' ಒದಗಿಸುತ್ತವೆ ಎಂದಿದ್ದರು.
ಇದನ್ನು ಓದಿ- 'ಭಾರತದ ಕೊರೊನಾ ಲಸಿಕೆ Covaxin ಜಗತ್ತಿನ ಗಮನ ಸೆಳೆದಿದೆ'
ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದ ಕೃಷ್ಣಾ ಇಲ್ಲಾ
ಇದಾದ ನಂತರ ಸುದ್ದಿಗೋಷ್ಠಿ ನಡೆಸಿದ್ದ ಭಾರತ ಬಯೋಟೆಕ್ ಸಿಎಂಡಿ ಕೃಷ್ಣಾ ಇಲ್ಲಾ, ಹೆಸರನ್ನು ಉಲ್ಲೇಖಿಸದೆಯೇ ಅದರ್ ಪೂನಾವಾಲಾ ಅವರಿಗೆ ತಿರುಗೇಟು ನೀಡಿದ್ದರು. ಈ ಕುರಿತು ಮಾತನಾಡಿದ್ದ ಅವರು, 'ನಮ್ಮ ಕಂಪನಿಯ ಲಸಿಕೆಗೆ ನೀರು ಎಂದು ಹೇಳಲಾಗಿದೆ. ನಾನು ಅದನ್ನು ಅಲ್ಲಗಳೆಯುತ್ತೇನೆ. ನಾವೂ ಕೂಡ ವಿಜ್ಞಾನಿಗಳಾಗಿದ್ದು, ನಮ್ಮ ವೈದ್ಯಕೀಯ ಪರೀಕ್ಷೆಗಳನ್ನು ಕೂಡ ಯಾರೂ ಪ್ರಶ್ನಿಸಬಾರದು' ಎಂದಿದ್ದರು.
ಇದನ್ನು ಓದಿ- ಮೂರನೇ ಹಂತದ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳಿಗೆ ಡಿಸಿಜಿಐ ಅನುಮೋದನೆ
ಈ ಆಧಾರದ ಮೇಲೆ Covaxinಗೆ ದೊರೆತಿದೆ ಅನುಮೋದನೆ
ಕೊವ್ಯಾಕ್ಸಿನ್ ನ ಮೂರನೇ ಹಂತದ ದತ್ತಾಂಶಗಳನ್ನು ಬಿಡುಗಡೆ ಮಾಡದೆಯೇ ದೊರೆತ ಅನುಮೋದನೆ ನಿರ್ಧಾರದ ಕುರಿತು ಮಾತನಾಡಿರುವ ICMR DG ಡಾ.ಬಲರಾಮ್ ಭಾರ್ಗವ್, ನ್ಯೂ ಡ್ರಗ್ ಅಂಡ್ ಕ್ಲಿನಿಕಲ್ ಟ್ರಯಲ್ ನಿಯಮ ಮಾರ್ಚ್ 2019 ರ ಅಡಿ ಒಂದು ವೇಳೆ ಎರಡನೇ ಹಂತದ ಪರೀಕ್ಷೆಯಲ್ಲಿ ದತ್ತಾಂಶ ಸುರಕ್ಷಿತ ಕಂಡುಬಂದಿದ್ದರೆ, ಆ ಆಧಾರದ ಮೇಲೆ ವ್ಯಾಕಿನ್ ನ ತುರ್ತು ಬಳಕೆಗೆ ಅನುಮೋದನೆ ಸಿಗಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.