ನವದೆಹಲಿ: Achaleshwar Mahadev Temple-ಜಗತ್ತು ಹಲವು ವಿಸ್ಮಯಕಾರಿ ಸಂಗತಿಗಳಿಗೆ ಆಗರ. ಈ ಸಂಗತಿಗಳು ಇಂದಿಗೂ ಕೂಡ ಯಕ್ಷಪ್ರಶ್ನೆಯೇ ಹೌದು. ಶಿವಲಿಂಗಕ್ಕೆ ಹಿಂದೂ ಧರ್ಮ ಪುರಾಣಗಳಲ್ಲಿ ವಿಶೇಷ ಮಹತ್ವವಿದೆ. ಭೋಲೆನಾಥ್ ಎಂದೇ ಕರೆಯಲಾಗುವ ಶಿವನಿಗೆ ದೇವಾಧಿದೇವ ಮಹಾದೇವ ಎಂದೂ ಕೂಡ ಕರೆಯಲಾಗುತ್ತದೆ. ಪೌರಾಣಿಕ ಕಥೆಗಳಲ್ಲಿ ಶಿವನ ಚಮತ್ಕಾರಗಳ ಉಲ್ಲೇಖವಿದೆ. ದೇಶಾದ್ಯಂತ ಸಾವಿರಾರು ಶಿವಾಲಯಗಳಿದ್ದು, ಇವುಗಳಲ್ಲಿ ಹಲವು ಶಿವಾಲಯಗಳು ವಿಸ್ಮಯಗಳಿಂದ ಕೂಡಿವೆ. ಈ ದೇಗುಲಗಳ ರಹಸ್ಯಗಳಿಗೆ ಇಂದಿಗೂ ಕೂಡ ಉತ್ತರ ಲಭಿಸಿಲ್ಲ. ಇಂತಹ ದೇಗುಲಗಳ ಪಟ್ಟಿಯಲ್ಲಿ ಆಚಲೇಶ್ವರ ಮಹಾದೇವ ದೇವಸ್ಥಾನ ಕೂಡ ಒಂದಾಗಿದ್ದು, ವಿಜ್ಞಾನಿಗಳ ಪಾಲಿಗೆ ಇಂದಿಗೂ ಕೂಡ ಇದೊಂದು ಸವಾಲಾಗಿ ಪರಿಣಮಿಸಿದೆ.
ದಿನದಲ್ಲಿ 3 ಬಾರಿ ಬಣ್ಣ ಬದಲಾಯಿಸುತ್ತದೆ ಇಲ್ಲಿನ ಶಿವಲಿಂಗ
ರಾಜಸ್ಥಾನದ ಮರಳುಗಾಡಿನ ಮರಳಿನ ಅಡಿ ಹಲವು ವಿಸ್ಮಯಗಳು ಹೂತಿವೆ. ಇಲ್ಲಿನ ಧೌಲ್ ಪುರ್ ನಲ್ಲಿರುವ ಆಚಲೆಶ್ವರ್ ಮಹಾದೇವ ದೇವಸ್ಥಾನದಲ್ಲಿ ಶಿವನ ಅದ್ಭುತ ಚಮತ್ಕಾರವನ್ನು ನೀವು ನೋಡಬಹುದು. ಹೌದು, ಈ ದೇವಸ್ಥಾನದಲ್ಲಿರುವ ಶಿವಲಿಂಗ ದಿನದಲ್ಲಿ ಮೂರು ಬಾರಿಗೆ ತನ್ನ ಬಣ್ಣ ಬದಲಾಯಿಸುತ್ತದೆ. ನೋಡಲು ಸಾಮಾನ್ಯವಾಗಿರುವ ಈ ಶಿವಲಿಂಗ, ತನ್ನ ಬದಲಾಗುವ ಬಣ್ಣಗಳಿಂದ ಎಲ್ಲರನ್ನು ವಿಸ್ಮಯಗೊಳಿಸುತ್ತದೆ.
ವಿಜ್ಞಾನಿಗಳಿಗೆ ಸವಾಲು
ಇಲ್ಲಿರುವ ತನ್ನ ಬಣ್ಣವನ್ನು ದಿನಕ್ಕೆ 3 ಬಾರಿ ಬದಲಾಯಿಸುತ್ತದೆ. ಇದರ ಹಿಂದಿನ ರಹಸ್ಯ ಪರಿಹರಿಸುವುದು ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ಶಿವಲಿಂಗ ಬಣ್ಣವು ಬೆಳಿಗ್ಗೆ ಕೆಂಪು ಬಣ್ಣದ್ದಾಗಿರುತ್ತದೆ. ಇದರ ಬಣ್ಣ ಮಧ್ಯಾಹ್ನ ಕೇಸರಿಗೆ ಬದಲಾಗುತ್ತದೆ. ರಾತ್ರಿಯ ನಂತರ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇಲ್ಲಿ ವಿಶೇಷತೆ ಎಂದರೆ ಇದರ ಕೊನೆ ಎಲ್ಲಿದೆ ಎಂಬುದು ಇದುವರೆರೂ ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಅದ್ಭುತ ಕೃಪೆ
ಈ ಆಚಲೇಶ್ವರ ದೇವಸ್ಥಾನದ ಕುರಿತು ಜನರು ಅಪಾರ ಶೃದ್ಧೆ ಹೊಂದಿದ್ದಾರೆ. ಈ ನಿಗೂಢ ಶಿವಲಿಂಗದ ದರುಶನ ಮಾತ್ರದಿಂದ ಎಲ್ಲ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ ಹಾಗೂ ಎಲ್ಲ ರೀತಿಯ ಜೀವನದ ಸಂಕಷ್ಟಗಳು ದೂರವಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆ.
ಮನಮೆಚ್ಚುವ ಬಾಳಸಂಗಾತಿ
ಇಲ್ಲಿಗೆ ಭೇಟಿ ನೀಡುವ ಬಹುತೇಕ ಭಕ್ತಾದಿಗಳು ಇಲ್ಲಿ ಮನಮೆಚ್ಚುವ ಬಾಳಸಂಗಾತಿಗಾಗಿ ಹರಕೆ ಹೊರುತ್ತಾರೆ. ಕೆಲವರು ಪ್ರಿಯತಮ/ಮೇ ಯ ಹೆಸರಿನಲ್ಲಿ ಹರಕೆ ಹೊತ್ತು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಹಾಗೂ ಅವರಿಗೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.