Corona Vaccine ಕುರಿತು ರಾಜಕೀಯ, BJP ಲಸಿಕೆ ಹಾಕಿಸಿಕೊಳ್ಳಲ್ಲ ಎಂದ ಅಖಿಲೇಶ್

ಕೇಂದ್ರ ಸರ್ಕಾರ ಸ್ಥಳೀಯ ಕರೋನಾ ಲಸಿಕೆ ಬಗ್ಗೆ ಹಗಲು ರಾತ್ರಿ ನಿಗಾ ವಹಿಸಿದೆ. ಅಗ್ಗದ ಮತ್ತು ಸುರಕ್ಷಿತ ಲಸಿಕೆಗಳಿಗಾಗಿ ಇಡೀ ವಿಶ್ವ ಭಾರಿ ಭರವಸೆಯಿಂದ ಭಾರತದತ್ತ ನೋಡುತ್ತಿದೆ.  ಏತನ್ಮಧ್ಯೆ, ಹರಾಮ್ ಮತ್ತು ಹಲಾಲ್ ವಿವಾದದ ನಡುವೆ ಸಿಲುಕಿಕೊಂಡಿರುವ ಲಸಿಕೆ ಕುರಿತು ಇದೀಗ ರಾಜಕೀಯ ತೀವ್ರಗೊಂಡಿದೆ.

Written by - Nitin Tabib | Last Updated : Jan 2, 2021, 06:08 PM IST
  • ಕೊರೊನಾ ವ್ಯಾಕ್ಸಿನ್ ವಿಷಯದಲ್ಲಿ ತೀವ್ರಗೊಂಡ ರಾಜಕೀಯ.
  • ಬಿಜೆಪಿ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಿಲ್ಲ ಎಂದ ಎಸ್.ಪಿ ಮುಖಂಡ ಅಖಿಲೇಶ್ ಯಾದವ್.
  • ನನಗೆ ಬಿಜೆಪಿ ವ್ಯಾಕ್ಸಿನ್ ಮೇಲೆ ಭರವಸೆ ಇಲ್ಲ ಎಂದ ಅಖಿಲೇಶ್
Corona Vaccine ಕುರಿತು ರಾಜಕೀಯ, BJP ಲಸಿಕೆ ಹಾಕಿಸಿಕೊಳ್ಳಲ್ಲ ಎಂದ ಅಖಿಲೇಶ್  title=
Akhilesh Yadav On Corona Virus (File Image)

ನವದೆಹಲಿ: ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈಗಾಗಲೇ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ರಾಜಕೀಯ ತೀವ್ರಗೊಂಡಿದೆ. ಏತಮಧ್ಯೆ ವ್ಯಾಕ್ಸಿನ್ ಕುರಿತು ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ತಮಗೆ ಬಿಜೆಪಿ ಲಸಿಕೆಯ ಮೇಲೆ ಭರವಸೆ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಭಾರತದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಯಾವುದೇ ವ್ಯಾಕ್ಸಿನ್ ಅನ್ನು ತಾವು ಹಾಕಿಸಿಕೊಳ್ಳುವುದಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.

ಕೊರೊನಾ ವ್ಯಾಕ್ಸಿನ್ ಅಣುಕು ಕಾರ್ಯಾಚರಣೆ ಜಾರಿಯಲ್ಲಿದೆ
ಕೊರೊನಾ ವ್ಯಾಕ್ಸಿನ್ ಲಸಿಕಾಕರಣ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಡೆತಡೆ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರಸ್ತುತ ದೇಶದಲ್ಲಿ ವ್ಯಾಕಿನ್ಸ್ ನ ಅಣುಕು ಕಾರ್ಯಾಚರಣೆ ಜಾರಿಯಲ್ಲಿದೆ. ನೂರಾರು ಜಿಲ್ಲೆಗಳಲ್ಲಿ ಈ ಕೆಲಸಕ್ಕಾಗಿ ತರಬೇತಿ ನೀಡಲಾಗಿದೆ. ಕೇಂದ್ರ ಸರ್ಕಾರ ಸ್ವದೇಶಿ ವ್ಯಾಕ್ಸಿನ್ ಮೇಲೆ ಹಗಲು-ರಾತ್ರಿ ತನ್ನ ಗಮನ ಕೇಂದ್ರೀಕರಿಸಿದೆ. ಇನ್ನೊಂದೆಡೆ ಇಡೀ ವಿಶ್ವ ಸುರಕ್ಷಿತಃ ಹಾಗೂ ಅಗ್ಗದ ದರದ ವಾಕ್ಸಿನ್ (Coronavaccine) ಗಾಗಿ ಭಾರತದತ್ತ ಭರವಸೆಯ ದೃಷ್ಠಿಯಿಂದ ನೋಡುತ್ತಿದೆ. ಏತನ್ಮಧ್ಯೆ ಹರಾಮ್ ಹಾಗೂ ಹಲಾಲ್ ಕುರಿತಾದ ಚರ್ಚೆಗಳ ಮಧ್ಯೆ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ರಾಜಕೀಯ ತೀವ್ರಗೊಂಡಿದೆ.

ಇದನ್ನು ಓದಿ-Coronavaccine ಹಾಕಿಸಿಕೊಂಡ ಬಳಿಕ ಮಹಾಮಾರಿಯ ಅಪಾಯ ತಪ್ಪುತ್ತಾ....? ಉತ್ತರಕ್ಕಾಗಿ ಇಲ್ಲಿಗೆ ಭೇಟಿ ನೀಡಿ

ಕೊರೊನಾ ವ್ಯಾಕ್ಸಿನ್ ಕುರಿತು ಮಾತನಾಡಿದ ಅಖಿಲೇಶ ಯಾದವ್
ಈ ಕುರಿತು ಮಾತನಾಡಿರುವ ಅಖಿಲೇಶ್ ಯಾದವ್ ಒಂದೊಮ್ಮೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ನಾವು ಜನತೆಗೆ ಉಚಿತವಾಗಿ ವ್ಯಾಕ್ಸಿನ್ ನೀಡಲಿದ್ದೇವೆ ಎಂದಿದ್ದಾರೆ. ಅಣುಕು ಕಾರ್ಯಾಚರಣೆಯ ಅರ್ಥ ಲಸಿಕಾಕರಣ ಕಾರ್ಯಕ್ರಮಕ್ಕೆ ಸರ್ಕಾರದ ಸಿದ್ಧತೆಗಳನ್ನು ಪರಿಶೀಲಿಸುವುದು ಎಂದರ್ಥ. ಈ ಹಿನ್ನೆಲೆಯಲ್ಲಿ ಅಖಿಲೇಶ ಯಾದವ್ ಅವರ ಹೇಳಿಕೆ ಹೊಸ ರಾಜಕೀಯ ಚರ್ಚೆಯೊಂದನ್ನು ಹುಟ್ಟುಹಾಕಿದೆ.

ಇದನ್ನು ಓದಿ-ಭಾರತದಲ್ಲಿ Corona Vaccineನ ತುರ್ತು ಬಳಕೆಗೆ ಅನುಮತಿ ಕೋರಿದ Pfizer

ಲಸಿಕಾಕರಣ ಕಾರ್ಯಕ್ರಮದ ಕುರಿತು ಪ್ರಮುಖ ಅಂಶ ಬಹಿರಂಗಪಡಿಸಿದ ಕೇಂದ್ರ ಆರೋಗ್ಯ ಸಚಿವ 
ಲಸಿಕಾಕರಣ ಕಾರ್ಯಕ್ರಮದ ಕುರಿತು ಇಂದು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕಾರ್ಯಕ್ರಮದ ಮೊದಲ ಹಂತದಲ್ಲಿ ದೇಶದ ಒಟ್ಟು 3 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿಯಲ್ಲಿರುವ ಕೊರೊನಾ ಹೋರಾಟಗಾರರಿಗೆ ಈ ವ್ಯಾಕ್ಸಿನ್ ಅನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಹೇಳಿದ್ದಾರೆ.  ಇವರಲ್ಲಿ 1 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ 2 ಕೋಟಿ ಫ್ರಂಟ್ ಲೈನ್ ಕಾರ್ಯಕರ್ತರು ಶಾಮೀಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ-Corona Vaccine ತಯಾರಿಕೆಗೆ 5 ಲಕ್ಷ ಶಾರ್ಕ್ ಗಳ ಬಲಿ

ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಗೊಳಿಸಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಸಿಕ್ಕಿರುವುದು ಇಲ್ಲಿ ಗಮನಾರ್ಹ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News