ಬೆಂಗಳೂರು: ಸುಂದರವಾಗಿ ಕಾಣುವುದು ಯಾರಿಗೆ ಬೇಡ. ಸುಂದರವಾಗಿ ಕಾಣಬೇಕು ಎನ್ನುವ ಕಾರಣಕ್ಕೆ ದುಬಾರಿ ಹಣ ಕೊಟ್ಟು ಸೌಂದರ್ಯವರ್ಧಕಗಳನ್ನು ಖರೀದಿಸುವವರು ನಮ್ಮ ನಡುವೆ ಎಷ್ಟೋ ಮಂದಿ ಇದ್ದಾರೆ. ಸುಂದರವಾಗಿ ಕಾಣುವುದಕ್ಕಾಗಿ ಜಾಹೀರಾತುಗಳನ್ನು ನೋಡಿ ದಿನಕ್ಕೊಂದರಂತೆ ಕ್ರೀಂ, ಲೋಶನ್ ಬದಲಿಸುವವರು ಕೂಡಾ ಬಹಳ ಮಂದಿ. ಇಷ್ಟಾದರೂ ಏನೂ ಪ್ರಯೋಜನವಿಲ್ಲ ಎಂದು ಕೊರಗುವವರಿಗೂ ಕೊರತೆಯಿಲ್ಲ. ಆದರೆ ಕೇವಲ ಒಂದು ಸಸ್ಯ ನಿಮ್ಮ ೆಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದರೆ ನಂಬುತ್ತೀರಾ? ಹೌದು ಆ ಸಸ್ಯದ ಬಗ್ಗೆ ನಾವು ಹೇಳುತ್ತೇವೆ. ಅದೇ ಅಲೋವಿರಾ ಸಸ್ಯ . ಅಲೋವಿರಾವನ್ನು ಲೋಳೆರಸ ಎಂದು ಕೂಡಾ ಕರೆಯುತ್ತಾರೆ. ಸಾಮಾನ್ಯವಾಗಿ ಈ ಸಸ್ಯ ಎಲ್ಲರ ಮನೆಗಳಲ್ಲಿಯೂ ಇರುತ್ತದೆ. ಇದು ಮನೆಯ ಸೌಂದರ್ಯ ಹೆಚ್ಚಿಸುವುದು ಮಾತ್ರ ವಲ್ಲ ನಿಮ್ಮ ಸೌಂದರ್ಯ ಹೆಚ್ಚಿಸಲು ಕೂಡಾ ಸಹಕಾರಿ.
ತ್ವಚೆಯ ಹೊಳಪು ಹೆಚ್ಚಿಸುವಲ್ಲಿ ಮಖ್ಯ ಪಾತ್ರ : ಅಲೋವಿರಾ ರಸವನ್ನು(aloe vera) ಮುಖಕ್ಕೆ ಹಚ್ಚುವುದರಿಂದ ಚರ್ಮದ ತೇವಾಂಶ ಹೆಚ್ಚುತ್ತದೆ. ಇದು ನೈಸರ್ಗಿಕ ಮಾಸ್ಚರೈಸರ್ (moisturizer)ಆಗಿ ಕಾರ್ಯನಿರ್ವಹಿಸುತ್ತದೆ. ಮುಖದ ಕಾಂತಿ ಹೆಚ್ಚಿಸುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಇದು ಆ್ಯಂಟಿ ಏಜಿಂಗ (anti aging) ರೂಪದಲ್ಲಿಯೂ ಕೆಲಸ ಮಾಡುತ್ತದೆ. ನಿದ್ದೆಗೆಟ್ಟರೆ ಅಥವಾ ಟೆನ್ಶನ್ ನಿಂದಾಗಿ ಕಣ್ಣಿನ ಸುತ್ತ ಮೂಡುವ ಡಾರ್ಕ್ ಸರ್ಕಲನ್ನು (dark circle)ಸುಲಭವಾಗಿ ತೆಗೆದು ಹಾಕುತ್ತದೆ. ಪ್ರತಿ ದಿನ ರಾತ್ರಿ ಲೋಳೆರಸವನ್ನು ಕಣ್ಣಿನ ಸುತ್ತ ಹಚ್ಚತ್ತಿದ್ದರೆ ನೋಡ ನೋಡುತ್ತಿದ್ದಂತೆ ಡಾರ್ಕ್ ಸರ್ಕಲ್ ಮಾಯವಾಗಿ ಬಿಡುತ್ತದೆ. ಸನ್ ಬರ್ನ್ ತಡೆಯಲು ಇದು ರಾಮಬಾಣ. ಹರಿಗೆಯ ನಂತರ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ ಸ್ಟ್ರೆಚ್ ಮಾರ್ಕ್. ಪ್ರತಿ ದಿನ ಸ್ಟ್ರೆಚ್ ಮಾರ್ಕ್ (stretch mark) ಇರುವ ಜಾಗದಲ್ಲಿ ಅಲೋವಿರಾ ಜೆಲ್ ನಿಂದ ಮಸಾಜ್ ಮಾಡುತ್ತಿದ್ದರೆ ಬಹಳ ಬೇಗ ಸ್ಟ್ರೆಚ್ ಮಾರ್ಕ್ ನಿಂದ ಮುಕ್ತಿ ಕಾಣಬಹುದು. ಸುಟ್ಟಗಾಯದಿಂದಾಗುವ ಕಲೆ ನಿವಾರಣೆಗೂ ಸಹಕಾರಿಯಾಗಿದೆ.
ಇದನ್ನೂ ಓದಿ: ನಿತ್ಯ ರಾತ್ರಿ ಸಣ್ಣ ಏಲಕ್ಕಿ ಸೇವಿಸುವುದರಿಂದ ಸಿಗುತ್ತೆ ಈ ಎಲ್ಲ ಪ್ರಯೋಜನ
ನುಣುಪಾದ ದಪ್ಪನೆಯ ಕೂದಲಿಗೆ: ಲೋಳೆರಸವನ್ನು ನೀವು ಉಪಯೋಗಿಸುವ ಎಣ್ಣೆಯೊಂದಿಗೆ ಬೆರೆಸಿ ತಲೆಕೂದಲಿಗೆ ಹಚ್ಚುವುದರಿಂದ ಕೂದಲು ನುಣುಪಾಗುತ್ತದೆ. ಅಲ್ಲದೆ ಕೂದಲಿನ ಬುಡಕ್ಕೆ ಲೋಳೆ ರಸದಿಂದ ಮಸಾಜ್ (massage) ಮಾಡುತ್ತಾ ಬಂದರೆ ಕೂದಲು ಉದುರುವುದನ್ನು (hair fall)ಕೂಡಾ ತಡೆಯಬಹುದು. ಇದನ್ನು ಲಿಂಬೆರಸದೊಂದಿಗೆ ಬೆರೆಸಿ ಹಚ್ಚುವುದರಿಂದ ತಲೆಹೊಟ್ಟು (drandruff) ನಿವರಾಣೆಯಾಗುತ್ತದೆ. ಅಲೋವಿರಾ ನ್ಯಾಚುರಲ್ ಕಂಡೀಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
ಒಣ ಮತ್ತು ಒಡೆದ ಹಿಮ್ಮಡಿ ತಡೆಯಲು ರಾಮಬಾಣ : ಚಳಿಗಾಲದಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ ಹಿಮ್ಮಡಿ ಒಡೆಯುವುದು. ಪ್ರತಿದಿನ ಅಲೆವಿರಾ ಜೆಲನ್ನು ಹರಳೆಣ್ಣೆ ಜೊತೆ ಬೆರೆಸಿ ಹಿಮ್ಮಡಿಗೆ ಹಚ್ಚುವುದರಿಂದ ಹಿಮ್ಮಡಿ ಒಡೆಯುವುದನ್ನು ತಡೆಯಬಹುದು. ಪಾದದ ಅಂದ ಹೆಚ್ಚಿಸಲು ಇದು ಸಹಕಾರಿಯಾಗುತ್ತದೆ.
ಇದನ್ನೂ ಓದಿ: ರಾತ್ರಿ ವೇಳೆ ಅರಿಶಿನದ ಹಾಲನ್ನು ಸೇವಿಸಿ, ಈ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ
ಉದರ ಸಂಬಂಧ ರೋಗಗಳಿಗೂ ಉತ್ತಮ ಔಷಧ: ಅಲೋವಿರಾ ಹೆಚ್ಚಿನ ಪ್ರಮಾಣದ ವಿಟಮಿನ್ ಮತ್ತು ಪ್ರೊಟಿನ್ ಅನ್ನು ಒಳಗೊಂಡಿದೆ. ಪ್ರತಿ ದಿನ ಅಲೋವಿರಾ ರಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ (immunity power)ಹೆಚ್ಚುತ್ತದೆ. ಅಲೋವಿರಾದಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿರುವುದರಿಂದ ಗ್ರಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ. ದಿನನಿತ್ಯ ಲೋಳೆರಸವನ್ನು ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಮಲಬದ್ಧತೆಯನ್ನು (consipation)ತಡೆಯಬಹುದು. ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು (red blood cell)ಅಭಿವೃದ್ದಿಪಡಿಸುತ್ತದೆ. ಬಾಯಿಹುಣ್ಣಿಗೂ ಲೋಳೆ ರಸ ಉತ್ತಮ ಪರಿಹಾರ.
ನೆನಪಿಡಿ ನಿಮಗೆ ಅಲೊವಿರಾದಿಂದ ಯಾವುದೇ ರೀತಿಯ ಅಲರ್ಜಿಯಿದ್ದಲ್ಲಿ ಇದನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.