'ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆಯಾದ್ರೆ ಪಕ್ಷ ತೊರೆಯುತ್ತೇನೆ'

ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಅಥವಾ ಮೈತ್ರಿ ಮಾಡಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ನಮ್ಮ ತೀರ್ಮಾನಕ್ಕೆ ವಿರುದ್ದವಾಗಿ ಪಕ್ಷ ನಿಲುವು ತೆಗೆದು ಕೊಂಡರೆ ನಮ್ಮ ತೀರ್ಮಾನವನ್ನು ಪ್ರಕಟಿಸಬೇಕಾಗುತ್ತದೆ

Last Updated : Dec 20, 2020, 05:49 PM IST
  • ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಅಥವಾ ಮೈತ್ರಿ ಮಾಡಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ನಮ್ಮ ತೀರ್ಮಾನಕ್ಕೆ ವಿರುದ್ದವಾಗಿ ಪಕ್ಷ ನಿಲುವು ತೆಗೆದು ಕೊಂಡರೆ ನಮ್ಮ ತೀರ್ಮಾನವನ್ನು ಪ್ರಕಟಿಸಬೇಕಾಗುತ್ತದೆ
  • ನಾನೀಗ ಈಗ ಜೆಡಿಎಸ್‌ ಪಕ್ಷದಲ್ಲಿದ್ದೇನೆ. ಮುಂದಿನ ಚುನಾವಣೆ ವೇಳೆಗೆ ಎಲ್ಲಿ ಯಾವ ಪಕ್ಷದಲ್ಲಿರುತ್ತೇನೆ, ಇರುವುದಿಲ್ಲವೋ ಎಂಬುದನ್ನು ಕಾದು ನೋಡೊಣ. ಬಿಜೆಪಿ ಜತೆ ಕುಮಾರಸ್ವಾಮಿ ಹೋದರೂ ನಾವು ಜೊತೆಗೆ ಇರುವುದಿಲ್ಲ
  • ಮುಂದಿನ ವಿಧಾನಸಭೆ ಚುನಾವಣೆ ವೇಳೆ ನನ್ನ ಬೆಂಬಲಿಗರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವೆ ಎನ್ನುವ ಮೂಲಕ ಜೆಡಿಎಸ್ ನಿಂದ ದೂರವಾಗುವ ಬಗ್ಗೆ ಅಭಿಪ್ರಾಯ
'ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆಯಾದ್ರೆ ಪಕ್ಷ ತೊರೆಯುತ್ತೇನೆ' title=

ತುಮಕೂರು: ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಅಥವಾ ಮೈತ್ರಿ ಮಾಡಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ನಮ್ಮ ತೀರ್ಮಾನಕ್ಕೆ ವಿರುದ್ದವಾಗಿ ಪಕ್ಷ ನಿಲುವು ತೆಗೆದು ಕೊಂಡರೆ ನಮ್ಮ ತೀರ್ಮಾನವನ್ನು ಪ್ರಕಟಿಸಬೇಕಾಗುತ್ತದೆ ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಖಡಕ್ಕಾಗಿ ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನೀಗ ಈಗ ಜೆಡಿಎಸ್(JDS)‌ ಪಕ್ಷದಲ್ಲಿದ್ದೇನೆ. ಮುಂದಿನ ಚುನಾವಣೆ ವೇಳೆಗೆ ಎಲ್ಲಿ ಯಾವ ಪಕ್ಷದಲ್ಲಿರುತ್ತೇನೆ, ಇರುವುದಿಲ್ಲವೋ ಎಂಬುದನ್ನು ಕಾದು ನೋಡೊಣ. ಬಿಜೆಪಿ ಜತೆ ಕುಮಾರಸ್ವಾಮಿ ಹೋದರೂ ನಾವು ಜೊತೆಗೆ ಇರುವುದಿಲ್ಲ ಎಂದಿದ್ದಾರೆ.

Voter ID Lis t: ಗ್ರಾ. ಪಂ. ಚುನಾವಣೆ: ನಿಮ್ಮೂರಿನ ವೋಟರ್ ಲಿಸ್ಟ್ ನೋಡೋದು ಹೇಗೆ ಗೊತ್ತಾ?

ಅಧಿಕಾರದ ಬಗ್ಗೆ ಪ್ರೀತಿ ಇರುವವರು ಮಾತ್ರ ಬಿಜೆಪಿ ಬಗ್ಗೆ ಒಲವು ಹೊಂದಿರುತ್ತಾರೆ ಎಂದು ಹೇಳುವ ಮೂಲಕ ಎಚ್.ಡಿ. ಕುಮಾರಸ್ವಾಮಿಗೆ ಅಧಿಕಾರದ ಲಾಲಸೆ ಇದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಆದರೆ ನನಗೆ ಬಿಜೆಪಿ ಬಗ್ಗೆ ಆಸಕ್ತಿ ಇಲ್ಲ. ಅವರು ಬಿಜೆಪಿ ಜತೆ ಹೋದರೆ ನಾನು ಪಕ್ಷದಿಂದ ದೂರವಾಗುತ್ತೇನೆ ಎಂದು ಜೆಡಿಎಸ್ ಶಾಸಕ ಹೇಳಿದ್ದಾರೆ.

ಖಾಸಗಿ ಶಾಲಾ ವಿದ್ಯಾರ್ಥಿಗಳಿಗೊಂದು 'ಶಾಕಿಂಗ್ ನ್ಯೂಸ್'..!

ಬಿಜೆಪಿ ನಿಲುವುಗಳ ಬಗ್ಗೆ ನನ್ನ ವಿರೋಧವಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆ ನನ್ನ ಬೆಂಬಲಿಗರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವೆ ಎನ್ನುವ ಮೂಲಕ ಜೆಡಿಎಸ್ ನಿಂದ ದೂರವಾಗುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಾಲಿನಲ್ಲಿ ರಾಜ್ಯಕ್ಕೆ 2000 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ'

Trending News