ಬೆಂಗಳೂರು: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನವಾದ ಡಿ.25ರಂದು ರಾಷ್ಟ್ರೀಯ ಕೃಷಿಕರ ದಿನವನ್ನಾಗಿ ಆಚರಿಸಲಿದ್ದು, ಅಂದು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿ, ಕೃಷಿ ನೀತಿಗಳ ಬಗ್ಗೆ ವಿವರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಯಲ್ ಆರ್ಕಿಡ್ ಹೋಟೆಲ್ ಸಭಾಂಗಣದಲ್ಲಿ ಪಕ್ಷದ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತ(Farmers)ರಲ್ಲಿ ಈ ಜಾಗೃತಿ ಮೂಡಿಸಲೆಂದು ರಾಜ್ಯದಲ್ಲಿ ಪ್ರತಿ ಮನೆಗೆ ತೆರಳಿ ಕೃಷಿ ನೀತಿಗಳ ಮಾಹಿತಿ ನೀಡಲು ನಿರ್ಧರಿಸಿದ್ದು, ಡಿ.25ರೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
Voter ID Lis t: ಗ್ರಾ. ಪಂ. ಚುನಾವಣೆ: ನಿಮ್ಮೂರಿನ ವೋಟರ್ ಲಿಸ್ಟ್ ನೋಡೋದು ಹೇಗೆ ಗೊತ್ತಾ?
ಜನಪ್ರತಿನಿಧಿ ಸಮಾವೇಶ : ಮುಂದಿನ 3 ತಿಂಗಳಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಬರಲಿದ್ದು, ಪಕ್ಷ ಸಂಘಟನಾತ್ಮಕವಾಗಿ ಸಜ್ಜಾಗಬೇಕಿದೆ. ಈ ನಿಟ್ಟಿನಲ್ಲಿ ಜ.8 ರಿಂದ 11ರವರೆಗೆ ಜನಪ್ರತಿನಿಧಿಗಳ ಸಮಾವೇಶ ಪ್ರತಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಖಾಸಗಿ ಶಾಲಾ ವಿದ್ಯಾರ್ಥಿಗಳಿಗೊಂದು 'ಶಾಕಿಂಗ್ ನ್ಯೂಸ್'..!
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಎಸ್.ರಘು, ಮುನಿರತ್ನ ಇದ್ದರು.
ಈ ಸಾಲಿನಲ್ಲಿ ರಾಜ್ಯಕ್ಕೆ 2000 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ'