ಭಾರತದಲ್ಲಿ ಒಂದು ಕೋಟಿ ದಾಟಿದ Covid 19 ಪ್ರಕರಣ

ವಿಶ್ವಾದ್ಯಂತ ಕರೋನದ ಹೊಸ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಏತನ್ಮಧ್ಯೆ ಭಾರತದ ಕರೋನಾ ಪ್ರಕರಣಗಳ ಸಂಖ್ಯೆ 1 ಕೋಟಿ ದಾಟಿದೆ. ಆದರೆ ಇದರೊಂದಿಗೆ ಚೇತರಿಸಿಕೆಯ ಪ್ರಮಾಣವೂ ಹೆಚ್ಚಾಗಿದೆ ಎಂಬುದು ನೆಮ್ಮದಿಯ ಸುದ್ದಿ.

Last Updated : Dec 19, 2020, 01:45 PM IST
  • ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1,00,04,599 ಕ್ಕೆ ತಲುಪಿದೆ
  • ಭಾರತದಲ್ಲಿ ಕರೋನದ ಮೊದಲ ಪ್ರಕರಣ ಜನವರಿ 30 ರಂದು ಕಂಡು ಬಂದಿತು
  • ದೇಶದಲ್ಲಿ ಕರೋನಾವೈರಸ್ ಪ್ರಕರಣಗಳು 1 ಕೋಟಿ ದಾಟಲು 325 ದಿನಗಳು ಬೇಕಾಯಿತು
ಭಾರತದಲ್ಲಿ ಒಂದು ಕೋಟಿ ದಾಟಿದ Covid 19 ಪ್ರಕರಣ title=
India's Covid Cases Pass 1 Crore (File Image)

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಕರೋನಾವೈರಸ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆಯಾದರೂ ದೇಶದಲ್ಲಿ ಕರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ ಒಂದು ಕೋಟಿ ದಾಟಿದೆ. ವಿಶ್ವದಾದ್ಯಂತ ಈ ವೈರಸ್ 7.5 ಕೋಟಿ ಜನರ ಮೇಲೆ ತನ್ನ ಪರಿಣಾಮ ಬೀರಿದೆ. ಅಮೇರಿಕಾದಲ್ಲಿ 3,13,588 ಜನರು ಈ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.  ಭಾರತದಲ್ಲಿ ಈ ಮಹಾಮಾರಿ ವೈರಸ್ ಇದುವರೆಗೆ 1.45 ಲಕ್ಷ ಜನರನ್ನು ಬಲಿತೆಗೆದುಕೊಂಡಿದೆ. ಅದಾಗ್ಯೂ ಭಾರತದಲ್ಲಿ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇಕಡಾ 95 ರಷ್ಟಿದೆ ಎಂದು ಸರ್ಕಾರದ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಭಾರತದಲ್ಲಿ ಕರೋನದ ಮೊದಲ ಪ್ರಕರಣ ಜನವರಿ 30 ರಂದು ಕಂಡು ಬಂದಿತು. ದೇಶದಲ್ಲಿ ಕರೋನಾವೈರಸ್ (Coronavirus) ಪ್ರಕರಣಗಳು 1 ಕೋಟಿ ದಾಟಲು 325 ದಿನಗಳು ಬೇಕಾಯಿತು. ಕಳೆದ 24 ಗಂಟೆಗಳಲ್ಲಿ 25,152 ಹೊಸ ಕರೋನಾ ಪ್ರಕರಣಗಳು ವರದಿಯಾಗಿದ್ದು ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1,00,04,599 ಕ್ಕೆ ತಲುಪಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿವೆ. ಇದರೊಂದಿಗೆ ದೇಶದಲ್ಲಿ ಕರೋನದ 16 ಕೋಟಿ ಪರೀಕ್ಷೆಗಳು ಸಹ ಪೂರ್ಣಗೊಂಡಿವೆ.

ಆರೋಗ್ಯ ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, ಕರೋನಾದಿಂದ ಕೇವಲ 24 ಗಂಟೆಗಳಲ್ಲಿ 347 ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ದೇಶದಲ್ಲಿ ಈವರೆಗೆ ಕರೋನಾದಿಂದಾಗಿ ಮೃತಪಟ್ಟವರ ಸಂಖ್ಯೆ ಒಟ್ಟು 1 ಲಕ್ಷ 45 ಸಾವಿರ 136ಕ್ಕೆ ತಲುಪಿದೆ.

ಇದನ್ನೂ ಓದಿ: Covid-19 Vaccination Program: ಲಸಿಕಾಕರಣ ಕಾರ್ಯಕ್ರಮ ಸ್ವಯಂಪ್ರೆರಿತ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ಕೋವಿಡ್ -19 (Covid 19) ಹೊಸ ಪ್ರಕರಣಗಳು ಕಡಿಮೆಯಾಗುವುದರ ಜೊತೆಗೆ, ದೇಶದಲ್ಲಿ ಚೇತರಿಸಿಕೊಳ್ಳುವವರ ಪ್ರಮಾಣವೂ ಉತ್ತಮಗೊಳ್ಳುತ್ತಿದೆ. ಭಾರತದಲ್ಲಿ ಕರೋನಾದ ಚೇತರಿಕೆ ಪ್ರಮಾಣ 95.46%. ಕಳೆದ 24 ಗಂಟೆಗಳಲ್ಲಿ 29,885 ರೋಗಿಗಳು ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಕರೋನಾದಿಂದ ಗುಣಮುಖರಾದ ಒಟ್ಟು ರೋಗಿಗಳ ಸಂಖ್ಯೆ 95,50,712 ತಲುಪಿದೆ. ದೇಶದಲ್ಲಿ 3 ಲಕ್ಷ 8 ಸಾವಿರ 751 ಸಕ್ರಿಯ ಕರೋನಾ ಪ್ರಕರಣಗಳಿವೆ.

ಇದನ್ನೂ ಓದಿ: Covid-19: ಲಸಿಕೆ ಯಾವಾಗ, ಎಲ್ಲಿ ಮತ್ತು ಹೇಗೆ ಪಡೆಯುವುದು? ಇಲ್ಲಿದೆ ಮಹತ್ವದ ಮಾಹಿತಿ

ಭಾರತದಲ್ಲಿ ಒಟ್ಟು 6 ಲಸಿಕೆ ಅಭಿವೃದ್ಧಿ:
ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾವೈರಸ್ ಅನ್ನು ಮಟ್ಟಹಾಕಲು ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಲಸಿಕೆ ಕಂಡು ಹಿಡಿಯುತ್ತಿವೆ. ಭಾರತದಲ್ಲಿ ವಿವಿಧ ಕಂಪನಿಗಳು ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳು ವಿವಿಧ ಪರೀಕ್ಷಾ ಹಂತದಲ್ಲಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇದಲ್ಲದ ಸರ್ಕಾರ ಕೂಡ ಶೀಘ್ರದಲ್ಲಿಯೇ ಲಸಿಕೆ ಬಿಡುಗಡೆಗೆ ಸನ್ನದ್ಧವಾಗಿದೆ. ಪ್ರಸ್ತುತ ಭಾರತದಲ್ಲಿ ಆರು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳಲ್ಲಿ ICMR ಸಹಯೋಗದೊಂದಿಗೆ ಭಾರತ್ ಬಯೋಟೆಕ್ ನ ಲಸಿಕೆ, ಜಾಯ್ಡಸ್ ಕ್ಯಾಡಿಲಾ ಲಸಿಕೆ, ಸಿರಮ್ ಇನ್ಸ್ಟಿಟ್ಯೂಟ್ ನ ಆಕ್ಸ್ಫರ್ಡ್ ಲಸಿಕೆ, ಸ್ಪುಟ್ನಿಕ್ V ಲಸಿಕೆಗಳು ಪ್ರಮುಖವಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

Trending News