Nostradamus Predictions: 2020ರಲ್ಲಿ ಕೊರೊನಾ ಪ್ರಕೋಪ, 2021 ರಲ್ಲಿ ವಿಶ್ವ ವಿನಾಶ

Nostradamus Predictions: ಮೈಕಲ್ ದಿ ನಾಸ್ಟ್ರಾಡಾಮಸ್ ಬರೆದಿರುವ ಪುಸ್ತಕದಲ್ಲಿ ಸುಮಾರು 6338 ಭವಿಷ್ಯವಾನಿಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಇದುವರೆಗೆ ಸುಮಾರು ಶೇ.70 ರಷ್ಟು ನಿಜ ಎಂದು ಸಾಬೀತಾಗಿವೆ.

  • Dec 15, 2020, 19:13 PM IST

ಪ್ಯಾರಿಸ್: Nostradamus Predictions: ಸುಮಾರು 465 ವರ್ಷಗಳ ಹಿಂದೆ ಮೈಕಲ್ ದಿ ನಾಸ್ಟ್ರಾಡಾಮಸ್  ಪ್ರಪಂಚದ ಬಗ್ಗೆ ಹೇಳಿರುವ ಮುನ್ಸೂಚನೆಗಳು ಇಲ್ಲಿಯವರೆಗೆ ಜನರನ್ನು ಅಚ್ಚರಿಗೊಳಿಸಿವೆ. ಪ್ರೊಫೆಸೀಸ್ ಆಫ್ ನಾಸ್ಟ್ರಾಡಾಮಸ್ (Prophecies of Nostradamus) ಎಂಬ ತನ್ನ ಪುಸ್ತಕದಲ್ಲಿ, ನಾಸ್ಟ್ರಾಡಾಮಸ್ ಒಟ್ಟು 6338 ಭವಿಷ್ಯವಾಣಿಗಳನ್ನುಉಲ್ಲೇಖಿಸಿದ್ದಾನೆ. ಅದರಲ್ಲಿ ಇದುವರೆಗೆ ಶೇ. 70 ರಷ್ಟು  ನಿಜವೆಂದು ಸಾಬೀತಾಗಿವೆ. ಈ ಪುಸ್ತಕದ ಮೊದಲ ಆವೃತ್ತಿ 1555 ರಲ್ಲಿ ಪ್ರಕಟಗೊಂಡಿತ್ತು. ಪುಸ್ತಕದಲ್ಲಿನ ಅವರ ಭವಿಷ್ಯವಾಣಿಗಳನ್ನು ಪದ್ಯಗಳಲ್ಲಿ ವ್ಯಾಖ್ಯಾನಿಸಲಾಗಿದೆ, ಇದನ್ನು 'ಕ್ವಾಟ್ರೇನ್' ಎಂದು ಕರೆಯಲಾಗುತ್ತದೆ. 2020 ರಲ್ಲಿ ವಿಶ್ವದಾದ್ಯಂತ ಹರಡಿದ ಕರೋನಾ ವೈರಸ್ ಸಾಂಕ್ರಾಮಿಕವು ದುರಂತಕ್ಕೆ ಕಡಿಮೆಯಿಲ್ಲ. ಈ ಸಾಂಕ್ರಾಮಿಕ ರೋಗವು ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಗೆ ಸಂಬಂಧಿಸಿದೆ. ಇದಲ್ಲದೆ, ಅನೇಕ ಐತಿಹಾಸಿಕ ಘಟನೆಗಳು ಅವರ ನಿಜವಾದ ಭವಿಷ್ಯವಾಣಿಗಳಿಗೆ ಪುರಾವೆಯಾಗಿವೆ. 2021 ರ ಬಗ್ಗೆ ಅವರ ಭವಿಷ್ಯವಾಣಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

 

ಇದನ್ನು ಓದಿ-2036 ರಲ್ಲಿ ಕ್ಷುದ್ರಗ್ರಹದಿಂದ ಭೂಮಿ ನಾಶ: ಭವಿಷ್ಯ ನುಡಿದ ನಾಸಾ

1 /7

ನಾಸ್ಟ್ರಾಡಾಮಸ್ ಬರೆದಿರುವ ಪುಸ್ತಕದ ಪ್ರಕಾರ, ರಶಿಯಾದ ವಿಜ್ಞಾನಿಯೊಬ್ಬ ತಯಾರಿಸಲು ಹೊರಟಿರುವ ಬಯಾಲಾಜಿಕಲ್ ಆಯುಧ ಹಾಗೂ ವೈರಸ್, ಮನುಷ್ಯರನ್ನು ಜಾಂಬಿಗಳನ್ನಾಗಿಸಲಿದೆ.

2 /7

ನಾಸ್ಟ್ರಾಡಾಮಸ್ ಪುಸ್ತಕದಲ್ಲಿ ಉಲ್ಲೇಖಿಸಿರುವ ಹಾಗೆ ವಿಶ್ವದ ಅಂತ್ಯ ಹತ್ತಿರಕ್ಕೆ ಬಂದಾಗ ಅಕಾಲ, ಭೂಕಂಪ, ತರಹೇವಾರಿ ಕಾಯಿಲೆಗಳು ಹಾಗೂ ಮಹಾಮಾರಿಗಳು ಇದಕ್ಕೆ ಮೊದಲು ಸಂಕೇತವಾಗಿರಲಿವೆ. ಕೊರೊನಾ ವೈರಸ್ ಮಹಾಮಾರಿ ಇದರ ಆರಂಭವೆಂದು ಹೇಳಲಾಗುತ್ತಿದೆ. ಈ ಮಹಾಮಾರಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈ ಅಕಾಲ ಹಿಂದೆಂದು ವಿಶ್ವ ಕಂಡಿರಲಿಲ್ಲ.

3 /7

ನಾಸ್ಟ್ರಾಡಾಮಸ್ ಮಾಡಿರುವ ಉಲ್ಲೇಖದ ಪ್ರಕಾರ 2021ರಲ್ಲಿ ಸಂಭವಿಸಲಿರುವ ಸೂರ್ಯನ ವಿನಾಶ ಭೂಮಿಯ ಹಾನಿಗೆ ಕಾರಣವಾಗಲಿದೆ. ತನ್ನ ಪುಸ್ತಕದಲ್ಲಿ ಎಚ್ಚರಿಕೆಯೊಂದನ್ನು ನೀಡಿರುವ ಅವರು, ಸಮುದ್ರ ತಳ ವಿಸ್ತಾರದ ಕುರಿತು ಹೇಳಿದ್ದಾರೆ. ಜಲವಾಯು ಪರಿವರ್ತನೆಯ ಈ ಹಾನಿ ಯುದ್ಧ ಹಾಗೂ ಸಮರದ ಸ್ಥಿತಿಗಳನ್ನು ಸೃಷ್ಟಿಸಲಿದೆ. ಸಂಪನ್ಮೂಲಗಳಿಗಾಗಿ ವಿಶ್ವದಲ್ಲಿ ಹಾಹಾಕಾರ ಸೃಷ್ಟಿಯಾಗಲಿದೆ ಹಾಗೂ ಜನರು ಪಲಾಯನಗೈಯಲ್ಲಿದ್ದಾರೆ.

4 /7

ನಾಸ್ಟ್ರಾಡಾಮಸ್ ನ ಒಂದು 'ಕ್ವಾಟೆನ್' ನಲ್ಲಿ ಭೂಮಿಗೆ ಧೂಮಕೇತು ಅಪ್ಪಳಿಸುವ ಉಲ್ಲೇಖವಿದೆ. ಇದು ಭೂಕಂಪ ಹಾಗೂ ಹಲವು ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಲಿದೆ. ಭೂಮಿಯ ಕಕ್ಷೆಗೆ ಪ್ರವೇಶಿಸುತ್ತಿದ್ದಂತೆ ಈ ಉಲ್ಕಾಶಿಲೆ ಕುದಿಯಲು ಆರಂಭಿಸಲಿದೆ. ಆಗಸದಲ್ಲಿನ ಈ ಚಿತ್ರಣ 'ದಿ ಗ್ರೇಟ್ ಫೈರ್'ನಂತೆ ಇರಲಿದೆ ಎಂದು ಉಲ್ಲೇಖಿಸಲಾಗಿದೆ.

5 /7

ಈ ಕುರಿತು ಹೇಳಿಕೆ ನೀಡಿರುವ ನಾಸಾ ಕೂಡ ಭೂಮಿಗೆ ಒಂದು ದೊಡ್ಡ ಧೂಮಕೇತು ಅಪ್ಪಳಿಸುವ ಸಾಧ್ಯತೆಯನ್ನು ಈಗಾಗಲೇ ವರ್ತಿಸಿದೆ. ಹೀಗಾಗಿ ಇದನ್ನು ಅತಿ ಗಂಭೀರತೆಯಿಂದ ಪರಿಗಣಿಸಬೇಕಾಗಿದೆ. ಏಕೆಂದರೆ 2000KF1 ಹೆಸರಿನ ಉಲ್ಕಾಶಿಲೆಯೊಂದು ಮೇ 6, 2021 ಕ್ಕೆ ಭೂಮಿಗೆ ಅಪ್ಪಳಿಸುವ ಅಪಾಯವಿದೆ. ಈ ಉಲ್ಕಾಶಿಲೆಯ ಶಕ್ತಿ 1945ರಲ್ಲಿ ಹಿರೋಶಿಮಾ ಮೇಲೆ ಅಮೇರಿಕಾ ಹಾಕಿದ ಪರಮಾನು ಬಾಂಬ್ ನ ಸುಮಾರು 15 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

6 /7

ನಾಸ್ಟ್ರಾಡಾಮಸ್ ಭವಿಷ್ಯವಾಣಿಯಂತೆ ಭೂಕಂಪವೊಂದು ನ್ಯೂ ವರ್ಲ್ಡ್ ಅನ್ನದು ಸರ್ವನಾಶ ಮಾಡಲಿದೆ. ಕ್ಯಾಲಿಫೋರ್ನಿಯಾ ಅನ್ನು ಇದರ ಲಾಜಿಕಲ್ ಸ್ಥಾನ ಎಂದು ಹೇಳಲಾಗಿದೆ. ನೈಸರ್ಗಿಕ ವಿಕೋಪ ಹಾಗೂ ಆಪತ್ತುಗಳ ಕುರಿತು ನಾಸ್ಟ್ರಾಡಾಮಸ್ ಈ ಮೊದಲು ಹೇಳಿರುವ ಭವಿಷ್ಯವಾಣಿಗಳು ನಿಜ ಎಂದು ಸಾಬೀತಾಗಿವೆ.

7 /7

ಮಾನವ ಜಾತಿಯ ರಕ್ಷಣೆಗಾಗಿ ಅಮೇರಿಕಾದ ಸೈನಿಕರ ಮೆದುಳು ಸಾಮರ್ಥ್ಯವನ್ನು  ಸೈಬೋರ್ಗ್ (Cyborg) ರೀತಿಯಲ್ಲಿ ಮಾರ್ಪಾಡು ಮಾಡಲಾಗುವುದು. ಇದಕ್ಕಾಗಿ ಬ್ರೇನ್ ಚಿಪ್ ಬಳಕೆಯಾಗಳಿವೆ. ಈ ಚಿಪ್ ಮಾನವ ಮೆದುಳಿನ ಬಯಾಲಾಜಿಕಲ್ ಇಂಟೆಲಿಜೆನ್ಸ್ ಹೆಚ್ಚಿಸುವ ಕೆಲಸ ಮಾಡಲಿದೆ. ಅಂದರೆ, ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಅನ್ನು ನಮ್ಮ ಮೆದುಳು ಹಾಗೂ ಶರೀರದಲ್ಲಿ ಅಳವಡಿಸಲಿದ್ದೇವೆ.