ಜೈಪುರ: ರಾಜಸ್ಥಾನದ 50 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಒಟ್ಟು 1,775 ವಾರ್ಡ್ಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ 620 ಸ್ಥಾನಗಳಲ್ಲಿ ಜಯ ಸಾಧಿಸಿದರೆ, ಬಿಜೆಪಿ 548 ಹಾಗೂ ಸ್ವತಂತ್ರ ಅಭ್ಯರ್ಥಿಗಳು 595 ಸ್ಥಾನಗಳನ್ನು ಬಾಚಿಕೊಂಡಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದೆ.
ಬಹುಜನ ಸಮಾಜ ಪಕ್ಷದ(BSP)ಏಳು ಅಭ್ಯರ್ಥಿಗಳು, ಸಿಪಿಐ ಹಾಗೂ ಸಿಪಿಎಂನ ತಲಾ ಇಬ್ಬರು ಹಾಗೂ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ(ಆರ್ಎಲ್ಪಿ)ಪಕ್ಷ ಒಂದು ಸ್ಥಾನದಲ್ಲಿ ಜಯ ಸಾಧಿಸಿದೆ. ರಾಜಸ್ಥಾನದ 12 ಜಿಲ್ಲೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು ಎಂದು ರಾಜ್ಯ ಚುನಾವಣಾ ಆಯೋಗದ ವಕ್ತಾರರು ತಿಳಿಸಿದ್ದಾರೆ.
Cheque Payment System: ಜನವರಿ 1ರಿಂದ ಬದಲಾಗಲಿರುವ ಈ ನಿಯಮವನ್ನು ತಪ್ಪದೇ ತಿಳಿಯಿರಿ
ಚುನಾವಣೆಗಾಗಿ ಸುಮಾರು 2,622 ಮತ ಗಟ್ಟೆಗಳನ್ನುಸ್ಥಾಪಿಸಲಾಗಿತ್ತು. ಒಟ್ಟು 14.32 ಲಕ್ಷ ಜನರು ಮತದಾನದ ಅರ್ಹತೆ ಪಡೆದಿದ್ದರು. 7,249 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದರು.