Vastu Dosh: ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಹಾಗೂ ಸಂಕಷ್ಟಗಳು ಹೆಚ್ಚಾದರೆ ವಾಸ್ತು ದೋಷ ಇದೆ ಎಂದು ಭಾವಿಸಿ. ಯಾವ ಕಾರಣದಿಂದ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಹಾಗೂ ಸಾಲದ ಹೊರೆ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಿರಿ
ನವದೆಹಲಿ: Vastu Dosh- ವಾಸ್ತು ಶಾಸ್ತ್ರದಲ್ಲಿ (Vastu Shastra) ದಿಕ್ಕುಗಳಿಗೆ (Directions)ಭಾರಿ ಮಹತ್ವ ಕಲ್ಪಿಸಲಾಗಿದೆ. ಇದರಲ್ಲಿ ದಿಕ್ಕುಗಳನ್ನು ಆಧರಿಸಿಯೇ ಶುಭ ಹಾಗೂ ಅಶುಭ, ಮಂಗಳ-ಅಮಂಗಳ ಸಂಗತಿಗಳನ್ನು ನಿರ್ಧರಿಸಲಾಗುತದೆ. ವಾಸ್ತು ಶಾಸ್ತ್ರ ನಿಯಮಗಳನ್ನು ಅನುಸರಿಸಿದರೆ ಸುಖ-ಸಮೃದ್ಧಿ ನಿಮ್ಮದಾಗುತ್ತದೆ. ಇವುಗಳನ್ನು ನಿರ್ಲಕ್ಷಿಸುವುದು ಹಲವು ಬಾರಿ ಸಂಕಷ್ಟವನ್ನು ತಂದೊಡ್ಡುತ್ತವೆ. ಹಲವು ಬಾರಿ ಕೈಗೂಡುವ ಕೆಲಸಗಳು ಕೂಡ ನಿಂತು ಹೋಗುತ್ತವೆ. ಇದರಿಂದ ಮನೆಯಲ್ಲಿ ಹಣಕಾಸಿನ ಕೊರತೆ ತಲೆದೋರುತ್ತದೆ. ಇದರ ಹಿಂದೆ ಮನೆಯ ವಾಸ್ತು ದೋಷ ಕಾರಣವಾಗಿರುತ್ತದೆ. ಹೀಗಾಗಿ ಇಂದು ನಾವು ನಿಮಗೆ ಇಂತಹ ವಾಸ್ತು ದೋಷದ ಕುರಿತು ಹೇಳಲಿದ್ದೇವೆ.
ಇದನ್ನು ಓದಿ- Vastu Tips: ಮಲಗುವ ದಿಕ್ಕಿನ ಕುರಿತಾಗಿ ವಾಸ್ತುಶಾಸ್ತ್ರ ಏನು ಹೇಳುತ್ತೆ? ಅನುಸರಿಸಿ ಹಾನಿಯಿಂದ ಪಾರಾಗಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕನ್ನು ಎಂದಿಗೂ ಎತ್ತರದಲ್ಲಿರಿಸಬೇಡಿ. ಈ ದಿಕ್ಕನ್ನು ಮಾತೃ ಸ್ಥಾನ ಎಂದು ಕರೆಯಲಾಗಿದೆ. ಮನೆಯ ಉತ್ತರ ದಿಕ್ಕನ್ನು ಎತ್ತರದಲ್ಲಿರಿಸುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಹಾಗೂ ಇದರಿಂದ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗುತ್ತದೆ.
ಮನೆಯ ಉತ್ತರ ದಿಕ್ಕನ್ನು ಯಾವಾಗಲು ಕುಬೇರನ ಸ್ಥಾನ ಎಂದು ಹೇಳಲಾಗುತ್ತದೆ. ಹೀಗಾಗಿ ಈ ದಿಕ್ಕನ್ನು ಆಸಷ್ಟು ಸ್ವಚ್ಚವಾಗಿಡಿ. ಏಕೆಂದರೆ ಕೊಳೆಯಾಗಿರುವ ಜಾಗದಲ್ಲಿ ಕುಬೇರ ಸ್ವಾಮಿ ವಾಸಿಸುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ಒಂದು ವೇಳೆ ಮನೆಯಿಂದ ಹೊರಹೋಗುವ ನೀರಿನ ಹರಿವು ದಕ್ಷಿಣ ದಿಕ್ಕಿನಲ್ಲಿದ್ದರೆ, ಮನೆಯಲ್ಲಿ ಹಣಕಾಸಿನ ಸಮಸ್ಯೆ ತಲೆದೋರುತ್ತದೆ. ನೀರಿನ ಹರಿವು ಯಾವಾಗಲು ಉತ್ತರ ದಿಕ್ಕಿನಲ್ಲಿರಬೇಕು.
ವಾಸ್ತು ಶಾಸ್ತ್ರದ ಪ್ರಕಾರ ನಲ್ಲಿಯಿಂದ ನೀರು ಸೋರುವುದು ಧನ ಹಾನಿಗೆ ಕಾರಣ. ಇದನ್ನು ಅಶುಭ ಎಂದು ಹೇಳಲಾಗುತ್ತದೆ.
ಬಾತ್ ರೂಂ ಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಹಲವು ಸಂಗತಿಗಳನ್ನು ಹೇಳಲಾಗಿದೆ. ಬಾತ್ ರೂಂ ಅನ್ನು ಯಾವಾಗಲು ಸ್ವಚ್ಛವಾಗಿದಬೇಕು ಹಾಗೂ ಒಣದಾಗಿಡಬೇಕು. ಕೊಳೆಯಾದ ಹಾಗೂ ಹಸಿಯಾಗಿರುವ ಬಾತ್ ರೂಂ ಧನ ಹಾನಿಗೆ ಕಾರಣವಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕಾರಣವಿಲ್ಲದೆ ಒಲೆಯ ಮೇಲೆ ಪಾತ್ರೆಯನ್ನು ಇಡಬಾರದು. ಏಕೆಂದರೆ ಇದು ಅಶುಭ ಸಂಕೇತ. ಇದರಿಂದ ಮನೆಯಲ್ಲಿನ ಆರ್ಥಿಕ ಸಂಕಷ್ಟ ಎಂದಿಗೂ ಮುಗಿಯುವದಿಲ್ಲ.