EPFO Interest Rate: ಆರು ಕೋಟಿ ಖಾತೆದಾರರಿಗೆ ಸಂತಸದ ಸುದ್ದಿ

EPFO Interest Rate: ಈ ತಿಂಗಳ ಅಂತ್ಯದವರೆಗೆ EPFO ತನ್ನ 6 ಕೋಟಿ ದೊಡ್ಡ ಉಡುಗೊರೆ ನೀಡುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಈ ವರ್ಷದ ಕೊನೆಯ ತಿಂಗಳ ಕೊನೆಯಲ್ಲಿ 2019-20ನೇ ಸಾಲಿನ ಇಪಿಎಫ್‌ಗೆ 8.50% ಬಡ್ಡಿಯನ್ನು ನೀಡಬಹುದು.

Last Updated : Dec 13, 2020, 12:44 PM IST

    ಈ ತಿಂಗಳ ಅಂತ್ಯದವರೆಗೆ EPFO ತನ್ನ 6 ಕೋಟಿ ದೊಡ್ಡ ಉಡುಗೊರೆ ನೀಡುವ ಸಾಧ್ಯತೆ ಇದೆ.

    2019-20ನೇ ಸಾಲಿನ ಇಪಿಎಫ್‌ಗೆ 8.50% ಬಡ್ಡಿಯನ್ನು ಒಂದೇ ಕಂತಿನಲ್ಲಿ ನೀಡಬಹುದು.

    ಕೊವಿಡ್ ಸಾಂಕ್ರಾಮಿಕದ ಹಿನ್ನೆಲೆ ಈ ಬಡ್ಡಿಯನ್ನು ಎರಡು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಈ ಮೊದಲು ಹೇಳಲಾಗಿತ್ತು.

EPFO Interest Rate: ಆರು ಕೋಟಿ ಖಾತೆದಾರರಿಗೆ ಸಂತಸದ ಸುದ್ದಿ title=
EPFO Interest Rate:

ನವದೆಹಲಿ: EPFO Interest Rate: ಈ ತಿಂಗಳ ಅಂತ್ಯದವರೆಗೆ EPFO ತನ್ನ 6 ಕೋಟಿ ದೊಡ್ಡ ಉಡುಗೊರೆ ನೀಡುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಈ ವರ್ಷದ ಕೊನೆಯ ತಿಂಗಳ ಕೊನೆಯಲ್ಲಿ 2019-20ನೇ ಸಾಲಿನ ಇಪಿಎಫ್‌ಗೆ 8.50% ಬಡ್ಡಿಯನ್ನು ನೀಡಬಹುದು. ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರ ಅಧ್ಯಕ್ಷತೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಟ್ರಸ್ಟಿ ಸಭೆಯಲ್ಲಿ ಶೇ .8.5 ರಷ್ಟು ಬಡ್ಡಿಯನ್ನು ಎರಡು ಎರಡು ಕಂತುಗಳಲ್ಲಿ ಅಂದರೆ ಶೇ.8.15 ಮತ್ತು ಶೇ 0.35 ರಂತೆ ವಿಭಜಿಸಲು ನಿರ್ಧರಿಸಿತು. 2019-20ನೇ ಸಾಲಿನ ಇಪಿಎಫ್ ಮೇಲಿನ ಬಡ್ಡಿದರವನ್ನು ಶೇ 8.5 ಕ್ಕೆ ಹೆಚ್ಚಿಸಲು ಕಾರ್ಮಿಕ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದೆ ಎಂದು ಉನ್ನತ  ಮೂಲಗಳು PTI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.

"ಹಣಕಾಸು ಸಚಿವಾಲಯದ ಅನುಮೋದನೆ ಕೆಲವೇ ದಿನಗಳಲ್ಲಿ ಬರುವ  ನಿರೀಕ್ಷೆ ಇರುವ ಕಾರಣ  ಈ ತಿಂಗಳ ಅಂತ್ಯಕ್ಕೆ ಬಡ್ಡಿ ಕೂಡ ಜಮೆಯಾಗಲಿದೆ" ಎಂದು ಮೂಲಗಳು ತಿಳಿಸಿವೆ. ಹಿಂದಿನ ಹಣಕಾಸು ವರ್ಷದ ಬಡ್ಡಿದರದ ಬಗ್ಗೆ ಹಣಕಾಸು ಸಚಿವಾಲಯ ಈ ಹಿಂದೆ ಕೆಲವು ಸ್ಪಷ್ಟೀಕರಣವನ್ನು ಕೋರಿತ್ತು ಎಂದು ಮೂಲಗಳು ತಿಳಿಸಿವೆ. ಈ ವರ್ಷದ ಮಾರ್ಚ್‌ನಲ್ಲಿ, ಇಪಿಎಫ್‌ಒನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕೇಂದ್ರೀಯ ಟ್ರಸ್ಟಿಗಳ ಸಭೆಯಲ್ಲಿ, ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು 2019-20ನೇ ಸಾಲಿನ ಇಪಿಎಫ್‌ಗೆ ಶೇ 8.5 ರಷ್ಟು ಬಡ್ಡಿದರವನ್ನು ಅನುಮೋದಿಸಿದ್ದರು.

ಇದನ್ನು ಓದಿ-EPFO: ನಿಮ್ಮ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂದು ತಿಳಿಯಲು ಒಂದೇ ಒಂದು ಮಿಸ್ಡ್ ಕಾಲ್ ಸಾಕು..!

ಸೆಪ್ಟೆಂಬರ್‌ನಲ್ಲಿ ನಡೆದ ವರ್ಚುವಲ್ ಸಿಬಿಟಿ ಸಭೆಯಲ್ಲಿ ಇಪಿಎಫ್‌ಒ ಹಿಂದಿನ ಹಣಕಾಸು ವರ್ಷದಲ್ಲಿ ಶೇ .8.5 ರಷ್ಟು ಬಡ್ಡಿದರವನ್ನು ನೀಡುವ ಬದ್ಧತೆಯನ್ನು ಗೌರವಿಸಲು ನಿರ್ಧರಿಸಿದೆ. ಆದರೆ, ಸಿಬಿಟಿ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಬಡ್ಡಿದರವನ್ನು ಶೇಕಡಾ 8.15 ಕ್ಕೆ ಮತ್ತು  ಶೇ 0.35 ರ ಎರಡು ಕಂತುಗಳಲ್ಲಿ ವಿಂಗಡಣೆ ಮಾಡಿತ್ತು. ಕಾರ್ಮಿಕ ಸಚಿವಾಲಯವು "ಕೋವಿಡ್ -19 ರಿಂದ ಉಂಟಾಗುವ ಅಸಾಮಾನ್ಯ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಬಡ್ಡಿದರಕ್ಕೆ ಸಂಬಂಧಿಸಿದ ಕಾರ್ಯಸೂಚಿಯನ್ನು ಸಿಬಿಟಿ ಪರಿಶೀಲಿಸಿದೆ ಮತ್ತು ಕೇಂದ್ರ ಸರ್ಕಾರಕ್ಕೆ ಶೇಕಡಾ 8.50 ರಷ್ಟು ಏಕರೂಪದ ದರವನ್ನು ಶಿಫಾರಸು ಮಾಡಿದೆ" ಎನ್ನಲಾಗಿದೆ.

ಇದನ್ನು ಓದಿ- EPFO Life Certificate: ಜೀವನ ಪ್ರಮಾಣ ಪತ್ರ ಸಲ್ಲಿಸುವ ಗಡುವು ವಿಸ್ತರಣೆ, ಹೊಸ ಗಡುವು ಇಲ್ಲಿದೆ

ಇದು(ಅಂದರೆ ಶೇ.8.5ರಷ್ಟು ಬಡ್ಡಿ ದರ) ಸಾಲದ ಆದಾಯದಿಂದ ಶೇ.8.15 ಮತ್ತು ಎಕ್ಸ್ಚೆಂಜ್ ಟ್ರೇಡೆಡ್ ಫಂಡ್ (ETF)ನಿಂದ ಉಳಿದ ಶೇ.0.35 ರಷ್ಟನ್ನು ಡಿಸೆಂಬರ್ 31, 2020ರವೆಗೆ ರೀಡಂಪ್ಶನ್ ಆಧಾರದ ಮೆಲಿರಲಿದೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಸ್ಥಿತಿ ಅಂದುಕೊಂಡಿದ್ದರಕ್ಕಿಂತ ಸಾಕಷ್ಟು ಉತ್ತಮವಾಗಿದ್ದು, ಚೇಂಜ್ ಮಾರ್ಕ್ ಇಂಡೆಕ್ಸ್ ದಾಖಲೆಯ ಮಟ್ಟಕ್ಕೆ ತಲುಪಿದೆ. ಹೀಗಾಗಿ ಏಕಕಾಲಕ್ಕೆ ಶೇ.8.5 ರಷ್ಟು ಬಡ್ಡಿ ನೀಡಲು ಯಾವುದೇ ತೊಂದರೆ ಇಲ್ಲ ಎಂದು ಮೂಲಗಳು ಹೇಳಿವೆ.
 

Trending News