/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಕಾಂಗ್ರೆಸ್ ಪಕ್ಷದ ಆಂತರಿಕ ಸಮಸ್ಯೆಗಳು ಒಂದಾದರೊಂದರ ಮೇಲೆ ಬಹಿರಂಗಗೊಳ್ಳುತ್ತಾ ಬಿಕ್ಕಟ್ಟಾಗಿ ಪರಿಣಮಿಸುತ್ತಿರುವ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆಯ ಅಂತಿಮ ಪುಟಗಳು ಕಾಂಗ್ರೆಸ್ ಪಕ್ಷದಲ್ಲಿ ಹೊತ್ತಿಕೊಂಡಿರುವ ಬೆಂಕಿಗೆ ತುಪ್ಪ ಸುರಿದಿವೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆ  'ಪ್ರೆಸಿಡೆನ್ಶಿಯಲ್ ಇಯರ್ಸ್' (The Presidential Years) ಹೊರಬರಲಿದ್ದು, ಇದು ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಬಾಲ್ಯವನ್ನು ಕಳೆದ ಅವರು ರಾಷ್ಟ್ರಪತಿ ಹುದ್ದೆವರೆಗೆ ಸಾಗಿದ ದೀರ್ಘ ಪ್ರಯಾಣದ ಮೇಲೆ ಬೆಳಕು ಚೆಲ್ಲಲಿದೆ.

ಈ ಪುಸ್ತಕದಲ್ಲಿ 2014ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಸೋಲಿನ ಬಗ್ಗೆಯೂ ಉಲ್ಲೇಖಿಸಲಾಗಿದೆ. ಪುಸ್ತಕದಲ್ಲಿ ದಿವಂಗತ ಪ್ರಣಬ್ ಮುಖರ್ಜಿ (Pranab Mukherjee) ಅವರು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಗೆ ಕನ್ನಡಿ ಹಿಡಿದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ವತಃ ಐದು ದಶಕಗಳ ಕಾಲ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದ ಪ್ರಣಬ್ ಮುಖರ್ಜಿ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಮತ್ತು ಡಾ. ಮನಮೋಹನ್ ಸಿಂಗ್ ಅವರೇ ಹೊಣೆ ಎಂದು ದೂಷಿಸಿದ್ದಾರೆ. ಒಂದು ವೇಳೆ ತಾವೇ  ಪ್ರಧಾನಿಯಾಗಿದ್ದರೆ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ಬರೆದಿದ್ದಾರೆ.

ಪುಸ್ತಕದಲ್ಲಿ ತಮ್ಮ ಅನುಭವವನ್ನು ಬಿಚ್ಚಿಟ್ಟಿರುವ ಪ್ರಣಬ್ ಮುಖರ್ಜಿ ಇಬ್ಬರು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಮುಖರ್ಜಿ ಅವರ ಆತ್ಮಚರಿತ್ರೆಯ ಈ ನಾಲ್ಕನೇ ಆವೃತ್ತಿಯಲ್ಲಿ ಮಾಜಿ ರಾಷ್ಟ್ರಪತಿಗಳು ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುವಾಗ ಅವರು ಎದುರಿಸಿದ ಸವಾಲುಗಳು ಮತ್ತು ಕೆಲವು ಕಠಿಣ ನಿರ್ಧಾರಗಳ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ.

ಹೆಗ್ಗಡೆವಾರ್ ಭಾರತ ಮಾತೆಯ ಮಹಾನ್ ಸುಪುತ್ರ -ಪ್ರಣಬ್ ಮುಖರ್ಜೀ

ನಾನು ರಾಷ್ಟ್ರಪತಿಯಾದ ನಂತರ ಕಾಂಗ್ರೆಸ್ ದಿಕ್ಕನ್ನು ಕಳೆದುಕೊಂಡಿತು. ಆದರೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ವ್ಯವಹಾರಗಳನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಪ್ರಣಬ್ ದಾದಾ ತಮ್ಮ 'ಪ್ರೆಸಿಡೆನ್ಶಿಯಲ್ ಇಯರ್ಸ್' ಪುಸ್ತಕದಲ್ಲಿ ಬರೆದಿದ್ದಾರೆ. "ನಾನು 2004 ರಲ್ಲಿ ಪ್ರಧಾನಿಯಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಭೀಕರ ಸೋಲಾಗುತ್ತಿರಲಿಲ್ಲ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳಿದ್ದರು" ಎಂದು ಅವರು ಬರೆದಿದ್ದಾರೆ.

ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಬೇಕಾಗಿದೆ- ಪ್ರಣಬ್ ಮುಖರ್ಜೀ

ತಾವು ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ ಪಕ್ಷದ ನಾಯಕತ್ವವು ರಾಜಕೀಯ ಗಮನವನ್ನು ಕಳೆದುಕೊಂಡಿತು ಎಂದು ನಾನು ನಂಬುತ್ತೇನೆ. ಪಕ್ಷದ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ ಅವರಿಗೆ ಸಾಧ್ಯವಾಗದಿದ್ದರೂ, ಡಾ. ಮನಮೋಹನ್ ಸಿಂಗ್ ಅವರ ದೀರ್ಘಕಾಲದ ಅನುಪಸ್ಥಿತಿಯಿಂದಾಗಿ ಸದನವು ಇತರ ಸಂಸದರೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕವನ್ನು ಕಳೆದುಕೊಂಡಿತು ಎಂದಿದ್ದಾರೆ.

ಅಸಹಿಷ್ಣುತೆ ಭಾರತದ ಅಸ್ಮಿತೆಯನ್ನು ವಿನಾಶಗೊಳಿಸುತ್ತದೆ-ಪ್ರಣಬ್ ಮುಖರ್ಜಿ

ಮುಖರ್ಜಿ ಅವರ ಆತ್ಮಚರಿತ್ರೆ 'ದಿ ಪ್ರೆಸಿಡೆನ್ಶಿಯಲ್ ಇಯರ್ಸ್' ಜಾಗತಿಕವಾಗಿ 2021ರ ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂದು 'ರೂಪಾ ಬುಕ್ಸ್' ಪ್ರಕಟಣೆ ಶುಕ್ರವಾರ ಪ್ರಕಟಿಸಿದೆ. ಪಬ್ಲಿಕೇಷನ್ಸ್ ವ್ಯವಸ್ಥಾಪಕ ನಿರ್ದೇಶಕ ಕಪಿಶ್ ಜಿ. "ಭಾರತೀಯ ರಾಜಕಾರಣದ ಪ್ರಬಲ ವ್ಯಕ್ತಿತ್ವವಾದ ಪ್ರಣಬ್ ದಾದಾ ಸಾಟಿಯಿಲ್ಲದ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ. ಕೆಲವು ಮಹತ್ವದ ವಿಷಯಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ" ಎಂದು ಹೇಳಿದ್ದಾರೆ.

Section: 
English Title: 
'Sonia Gandhi and Manmohan Singh were responsible for Congress defeat in 2014', Pranab Mukherjee revealed in his book
News Source: 
Home Title: 

2014ರ ಕಾಂಗ್ರೆಸ್ ಪಕ್ಷದ ಸೋಲಿಗೆ ಇವರೇ ಕಾರಣವಂತೆ - ಪ್ರಣಬ್ ಮುಖರ್ಜಿ ದೂಷಿಸಿದ್ದು ಇವರನ್ನೇ...

2014ರ ಕಾಂಗ್ರೆಸ್ ಪಕ್ಷದ ಸೋಲಿಗೆ ಇವರೇ ಕಾರಣವಂತೆ - ಪ್ರಣಬ್ ಮುಖರ್ಜಿ ದೂಷಿಸಿದ್ದು ಇವರನ್ನೇ...
Caption: 
File Image
Yes
Is Blog?: 
No
Tags: 
Facebook Instant Article: 
Yes
Highlights: 

ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆ 'ಪ್ರೆಸಿಡೆನ್ಶಿಯಲ್ ಇಯರ್ಸ್'

ಪುಸ್ತಕದಲ್ಲಿ ದಿವಂಗತ ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಗೆ ಕನ್ನಡಿ ಹಿಡಿದಿದ್ದಾರೆ 

Mobile Title: 
2014ರ ಕಾಂಗ್ರೆಸ್ ಪಕ್ಷದ ಸೋಲಿಗೆ ಇವರೇ ಕಾರಣವಂತೆ - ಪ್ರಣಬ್ ಮುಖರ್ಜಿ ದೂಷಿಸಿದ್ದು ಇವರನ್ನೇ...
Yashaswini V
Publish Later: 
No
Publish At: 
Saturday, December 12, 2020 - 08:02
Created By: 
Yashaswini V
Updated By: 
Yashaswini V
Published By: 
Yashaswini V
Request Count: 
9