ಬೆಂಗಳೂರು: ದೇವರ ಹೆಸರಿನಲ್ಲಿ, ದೇಶದ ಹೆಸರಿನಲ್ಲಿ, ಸಂಸ್ಕೃತಿ ಹೆಸರಿನಲ್ಲಿ ಕೋಮು ಸೌಹಾರ್ದ ಕದುಡುವ ಕ್ರೌರ್ಯ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮನುಷ್ಯ ಮನುಷ್ಯನ ನಡುವಿನ ಪ್ರೀತಿ- ಗೌರವಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಸ್ಟೋರಿ ನಿದರ್ಶನ.
ಬೆಂಗಳೂರಿನ (Bengaluru) ಕಡುಗೋಡಿ ನಿವಾಸಿ ಎಚ್ಎಂಜಿ ಬಾಷಾ ಅವರು ಇಲ್ಲಿನ ಮೈಲಾಪುರದಲ್ಲಿ ಹನುಮಾನ್ ದೇವಾಲಯ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ನೀಡಿ ಹೃದಯ ವೈಶಾಲ್ಯ ಮೆರೆದಿದ್ದಾರೆ. ಹನುಮಾನ್ ದೇವಾಲಯ ನಿರ್ಮಾಣಕ್ಕಾಗಿ ಜಮೀನು ನೀಡಲು ಅವರು ಕೊಟ್ಟಿರುವ ಕಾರಣ ಕೂಡ ಬಹಳ ಮಹತ್ವದ್ದಾಗಿದೆ.
Karnataka: HMG Basha, a resident of Kadugodi in Bengaluru donated land for construction of a Hanuman Temple in Mylapura.
He says, "I used to see many people struggle while offering prayers as the temple is small. So, I decided to donate a part of my plot of land." pic.twitter.com/JaxR2DJaAv
— ANI (@ANI) December 8, 2020
ಹನುಮಾನ್ ದೇವಾಲಯ (Temple) ಬಹಳ ಚಿಕ್ಕದಾಗಿದೆ. ಇಲ್ಲಿಗೆ ಬರುವ ಭಕ್ತರು ಪ್ರಾರ್ಥನೆ ಸಲ್ಲಿಸುವಾಗ ಜಾಗ ಚಿಕ್ಕದಾಗಿದ್ದರಿಂದ ಪರದಾಡುತ್ತಿದ್ದರು. ಅವರ ಸಮಸ್ಯೆಗಳನ್ನು ನಾನು ನೋಡುತ್ತಿದ್ದೆ. ಆದ್ದರಿಂದ, ನನ್ನ ಜಮೀನಿನ ಒಂದು ಭಾಗವನ್ನು ದಾನ ಮಾಡಲು ನಿರ್ಧರಿಸಿದೆ ಎಂದು ಎಚ್ಎಂಜಿ ಬಾಷಾ ಹೇಳಿದ್ದಾರೆ. ದೇವಸ್ಥಾನವನ್ನು ದೊಡ್ಡದು ಮಾಡುವ ಮೂಲಕ ತಮ್ಮ ಹೃದಯ ಎಷ್ಟು ದೊಡ್ಡದು ಎಂದು ತೋರಿಸಿಕೊಟ್ಟಿದ್ದಾರೆ.
ಬ್ಯಾಂಕ್ ಸಾಲ ಪಡೆದು ಪ್ರಧಾನಿ ಅಭಿಮಾನಿ ಮಾಡಿದ್ದೇನು ಗೊತ್ತಾ?
HMG Basha donated the land for construction of temple wholeheartedly. Construction of the temple is underway We are very happy that a Muslim man donated land for the temple: Bhyre Gowda, Temple Trustee. #Karnataka https://t.co/vYuBTeZong pic.twitter.com/anAy41XlXE
— ANI (@ANI) December 8, 2020
ಸೂರ್ಯಗ್ರಹಣದ ಸಮಯದಲ್ಲೂ ತೆರೆದಿರುತ್ತೆ ಈ ದೇವಾಲಯ!
ಮುಸಲ್ಮಾನ ಸಮುದಾಯದವರಾದ ಎಚ್ಎಂಜಿ ಬಾಷಾ ಅವರಿಂದ ಜಮೀನು ಸ್ವೀಕರಿಸಿದ ಬಗ್ಗೆ ದೇವಾಲಯದ ಟ್ರಸ್ಟಿ ಭೈರೆಗೌಡ ಮನದುಂಬಿ ಮಾತನ್ನಾಡಿದ್ದಾರೆ. ಹನುಮಾನ್ ದೇವಾಲಯ ನಿರ್ಮಾಣಕ್ಕಾಗಿ ಎಚ್ಎಂಜಿ ಬಾಷಾ ತುಂಬು ಹೃದಯದಿಂದ ಜಾಗ ಕೊಟ್ಟಿದ್ದಾರೆ. ಈಗಾಗಲೇ ದೇವಾಲಯದ ನಿರ್ಮಾಣದ ಕಾರ್ಯಗಳು ನಡೆಯುತ್ತಿವೆ. ಮುಸ್ಲಿಂ ವ್ಯಕ್ತಿಯೊಬ್ಬರು ದೇವಸ್ಥಾನಕ್ಕಾಗಿ ಭೂಮಿಯನ್ನು ದಾನ ಮಾಡಿದ ಬಗ್ಗೆ ನಮಗೆ ಬಹಳ ಸಂತೋಷವಾಗಿದೆ ಎಂದಿದ್ದಾರೆ.