ಶಾಲೆಗಳು ತೆರೆಯಲಿವೆ! ದೇಶಾದ್ಯಂತ ಶಾಲೆಗಳನ್ನು ತೆರೆಯಲು ನಡೆದಿದೆಯೇ ಸಿದ್ಧತೆ, ಇದನ್ನು ಓದಿ

ಸಿಬಿಎಸ್‌ಇ 10 ಮತ್ತು 12 ನೇ ತರಗತಿಗಳಿಗೆ ಲಿಖಿತ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುವುದು ಎಂದು ಹೇಳಿದೆ.

Written by - Yashaswini V | Last Updated : Dec 4, 2020, 10:40 AM IST
  • ಮಂಡಳಿಯ ಪರೀಕ್ಷೆಗಳನ್ನು ಸಮಯಕ್ಕೆ ನಡೆಸಲಾಗುವುದು ಎಂದು ಸಿಬಿಎಸ್‌ಇ ಸೇರಿದಂತೆ ಎಲ್ಲಾ ಮಂಡಳಿಗಳು ತಿಳಿಸಿವೆ.
  • ಸಿಬಿಎಸ್‌ಇ 10 ಮತ್ತು 12 ನೇ ತರಗತಿಗಳಿಗೆ ಲಿಖಿತ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುವುದು
  • ಅಂದರೆ ಆನ್‌ಲೈನ್ ಪರೀಕ್ಷೆ ಇರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಶಾಲೆಗಳು ತೆರೆಯಲಿವೆ! ದೇಶಾದ್ಯಂತ ಶಾಲೆಗಳನ್ನು ತೆರೆಯಲು ನಡೆದಿದೆಯೇ ಸಿದ್ಧತೆ, ಇದನ್ನು ಓದಿ title=
Image courtesy: Zeebiz

ಬೆಂಗಳೂರು: Board Exams 2021: ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ 9 ತಿಂಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ಆದಾಗ್ಯೂ ಆನ್‌ಲೈನ್ ಅಧ್ಯಯನಗಳು ನಡೆಯುತ್ತಿವೆ.  ಈ ಮಧ್ಯೆ ಬೋರ್ಡ್ ಪರೀಕ್ಷೆಗಳು ಸಹ ಸನಿಹ ಬರುತ್ತಿವೆ. ಮಂಡಳಿಯ ಪರೀಕ್ಷೆಗಳನ್ನು ಸಮಯಕ್ಕೆ ನಡೆಸಲಾಗುವುದು ಎಂದು ಸಿಬಿಎಸ್‌ಇ ಸೇರಿದಂತೆ ಎಲ್ಲಾ ಮಂಡಳಿಗಳು ತಿಳಿಸಿವೆ.

ಬೋರ್ಡ್ ಪರೀಕ್ಷೆ (Board Exam) ಹತ್ತಿರ ಬರುತ್ತಿದ್ದಂತೆ 10 ಮತ್ತು 12 ನೇ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಒಂದು ರೀತಿಯ ಆತಂಕ ಕಂಡುಬರುತ್ತದೆ. ಆದರೆ ಪ್ರಸಕ್ತ ವರ್ಷದಲ್ಲಿ ಈ ಆತಂಕ ಕೊಂಚ ಹೆಚ್ಚಾಗಿಯೇ ಇದೆ. ಯಾಕೆಂದರೆ ಈ ಬಾರಿ ವಿದ್ಯಾರ್ಥಿಗಳು ಒಂದು ದಿನವೂ ಶಾಲೆಯ ಮುಖವನ್ನೇ ನೋಡಿಲ್ಲ. ಕೆಲವು ರಾಜ್ಯಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ತೆರೆಯಲಾಯಿತಾದರೂ ಬಳಿಕ ಕೋವಿಡ್ 19 (Covid 19) ಹೆಚ್ಚಾದ್ದರಿಂದ ಶಾಲೆಗಳನ್ನು ಮತ್ತೆ ಮುಚ್ಚಲಾಯಿತು. ಇದಲ್ಲದೆ ಟ್ಯೂಶನ್ ಗಳನ್ನೂ ಕೂಡ ಮುಚ್ಚಲಾಗಿದೆ.

ಆದರೆ ಆನ್‌ಲೈನ್ ತರಗತಿಯಲ್ಲಿ (Online Class) ತಮ್ಮ ಪರೀಕ್ಷೆಗೆ ಬೇಕಾದಂತೆ ತಯಾರಿ ಮಾಡಿಕೊಳ್ಳುವುದು ಕಷ್ಟ ಎಂದು ಹಲವು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಮತ್ತೊಂದೆಡೆ ಬೋರ್ಡ್ ಪರೀಕ್ಷೆಯ ಪ್ರಾಯೋಗಿಕ ಪರೀಕ್ಷೆಗಳು ಜನವರಿಯಲ್ಲಿ ಪ್ರಾರಂಭವಾಗುತ್ತವೆ. ಆದ್ದರಿಂದ ಶಾಲೆಗೆ ಹಾಜರಾಗದೆಯೇ ಮುಕ್ತ ಪರೀಕ್ಷೆ ನಡೆಸುವುದು ಸಹ ಒಂದು ಸವಾಲಾಗಿದೆ.

CBSE ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಇದು ಬೆಸ್ಟ್ ಟ್ರಿಕ್

ಏತನ್ಮಧ್ಯೆ ಮುಂದಿನ ವರ್ಷದ ಜನವರಿ 4 ರಿಂದ ಶಾಲೆಯನ್ನು ತೆರೆಯಬೇಕೆಂದು ಒತ್ತಾಯಿಸಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಜನವರಿ 4 ರಿಂದ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಹಾಜರಾಗಲು ಅನುವು ಮಾಡಿಕೊಡಬೇಕು ಎಂದು ಕೌನ್ಸಿಲ್ ರಾಜ್ಯಗಳಿಗೆ ಪತ್ರ ಬರೆದಿದೆ.

ಬೋರ್ಡ್ ಪರೀಕ್ಷೆ ಲಿಖಿತವಾಗಿ ಮಾತ್ರ ಇರುತ್ತದೆ:
ಸಿಬಿಎಸ್‌ಇ 10 ಮತ್ತು 12 ನೇ ತರಗತಿಗಳಿಗೆ ಲಿಖಿತ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುವುದು ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಹೇಳಿದೆ. ಅಂದರೆ ಆನ್‌ಲೈನ್ ಪರೀಕ್ಷೆ ಇರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಆದರೆ ಪರೀಕ್ಷೆಯ ದಿನಾಂಕಗಳಿಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

CBSE ಬೋರ್ಡ್ ಪರೀಕ್ಷೆಯ ಪಠ್ಯ ಕಡಿಮೆಯಾಗುವ ನಿರೀಕ್ಷೆ, ಪರೀಕ್ಷೆಗಳು ಯಾವಾಗ ಇಲ್ಲಿದೆ ಮಾಹಿತಿ

ಮುಂದಿನ ತಿಂಗಳು ಜನವರಿಯಲ್ಲಿ 10 ಮತ್ತು 12 ನೇ ತರಗತಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ ಮಂಡಳಿಯು ತನ್ನದೇ ಆದ ವೇಳಾಪಟ್ಟಿಯಲ್ಲಿ ಪರೀಕ್ಷೆಯನ್ನು ನಡೆಸಲಿದೆ ಎಂಬುದು ಇನ್ನೂ ಚರ್ಚೆಯಲ್ಲಿದೆ.
 

Trending News