ಬೆಂಗಳೂರು: ಆಪ್ತ ವಲಯದಿಂದಲೇ ಕುರ್ಚಿಗೆ ಆಪತ್ತು ಎಂಬುದನ್ನು ಆರಿತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸದ್ಯದಲ್ಲೇ ಮತ್ತೊಂದು ವಿಕೆಟ್ ಉರುಳಿಸಲು ಮುಂದಾಗಿದ್ದಾರೆ. ಈಗಾಗಲೇ ರಾಜಕೀಯ ಸಲಹೆಗಾರರು ಹಾಗೂ ಮಾಧ್ಯಮ ಸಲಹೆಗಾರರನ್ನು ತೆಗೆದುಹಾಕಿರುವ ಸಿಎಂ ಬಿಎಸ್ ವೈ ಅವರು, ಸದ್ಯದ ತಮ್ಮ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಅವರನ್ನು ಹುದ್ದೆಯಿಂದ ಕಿತ್ತುಹಾಕುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ.
ಸಿಎಂ ಬಿಎಸ್ ವೈ(CM B.S.Yediyurappa) ಅವರ ಪರಮಾಪ್ತ ಎರಡು ವಿಕೆಟ್ ಬಿದ್ದ ಬಿನ್ನಲ್ಲೇ ಅವರ ಪರಮಾಪ್ತ ಮತ್ತೊಂದು ವಿಕೆಟ್ ಬೀಳುವ ಸಂಗತಿ ಹೊರ ಬಿದ್ದಿದೆ. ತಮ್ಮ ಕುಟುಂಬದ ಸದಸ್ಯರು ಆಗಿರುವ ಸಂತೋಷ್‍ಗೆ ನೀಡಿರುವ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ರದ್ದು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಶಾಲೆ ತೆರೆಯಬೇಡಿ: ರಾಜ್ಯ ಸರ್ಕಾರಕ್ಕೆ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಶಿಫಾರಸು
ಈಗಾಗಲೇ ಅಕಾರಿಗಳ ಜೊತೆ ಮಾತುಕತೆ ನಡೆಸಲಾಗಿದ್ದು, ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ ತಮ್ಮ ಕಚೇರಿಯಲ್ಲಿರುವ ಅನಗತ್ಯ ಹುದ್ದೆಗಳನ್ನು ರದ್ದು ಮಾಡುವಂತೆ ಅಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಂತಹಂತವಾಗಿ ಕಚೇರಿಯ ಸಿಬ್ಬಂದಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಿಎಂ ಬಿಎಸ್ ವೈ ಅವರು ಈ ಕ್ರಮಕ್ಕೆ ಬಂದಿದ್ದಾರೆ.
ಗುಡ್ ನ್ಯೂಸ್ : ಶೀಘ್ರವೇ ಈ ಇಲಾಖೆಯಲ್ಲಿ ಖಾಲಿ ಇರುವ 16,000 ಹುದ್ದೆಗಳಿಗೆ ನೇಮಕಾತಿ
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊಣವಿನ ಕೆರೆ ಎನ್.ಆರ್. ಸಂತೋಷ್ ಅವರನ್ನು ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿದ್ದು ಕೆಲವರ ಅಸಮಾಧಾನಕ್ಕೂ ಕಾರಣವಾಗಿತ್ತು.
IMA ಹಗರಣ: ರೋಷನ್ ಬೇಗ್‌ಗೆ ಮುಟ್ಟಿದ CBI ಶಾಕ್!