ನವದೆಹಲಿ: ಮಹಾರಾಷ್ಟ್ರ ಅಭಿವೃದ್ಧಿ ನಿಗಮ ರಚಿಸಿರುವ ಹಾಗೂ ರಾಜ್ಯ ಸರ್ಕಾರದ ಕನ್ನಡ ವಿರೋಧಿ ಧೋರಣೆಗಳನ್ನು ಖಂಡಿಸಿ ಡಿಸೆಂಬರ್ 5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮರಾಠ ಅಭಿವೃದ್ಧಿ ನಿಗಮ (Marathi development authority) ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡರಲ್ಲದೆ ಯಾರಾದರೂ ಬಲವಂತದಿಂದ ಬಂದ್ ಮಾಡಲು ಪ್ರಯತ್ನಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜನ ಕಷ್ಟದಲ್ಲಿರುವಾಗ ಈ ನಿಗಮ-ಪ್ರಾಧಿಕಾರಗಳಿಗೆ ಹಣ ಎಲ್ಲಿಂದ ತರುತ್ತೀರಿ?: ಸಿದ್ದರಾಮಯ್ಯ
ಇದಲ್ಲದೆ ಮರಾಠಿಗರು ಕಟ್ಟಾ ಹಿಂದುತ್ವವಾದಿಗಳು, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮರಾಠಿಗರು ಸಹಕಾರ ಕೊಟ್ಟಿದ್ದಾರೆ ಎಂದು ಮರಾಠಿಗರ ಪರವಾಗಿಯೇ ಮಾತನಾಡಿದರು. ನಂತರ ಇಂಥ ನಿರ್ಧಾರ ತೆಗೆದುಕೊಂಡಾಗ ಟೀಕೆ ಟಿಪ್ಪಣಿಗಳು ಬರುವುದು ಸಹಜ ಎಂದು ಹೇಳಿ ಜಾರಿಕೊಂಡರು.
ಮಹಾರಾಷ್ಟ್ರ ಡಿಸಿಎಂಗೆ 'ಖಡಕ್ ಎಚ್ಚರಿಕೆ' ನೀಡಿದ ಸಿಎಂ ಬಿಎಸ್ವೈ!
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವರ್ ಅನಗತ್ಯಚಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಆದರೆ ಮಹಾಜನ್ ಆಯೋಗದ ವರದಿಯೇ ಅಂತಿಮ. ಅದರನ್ವಯ ಕನ್ನಡಿಗರು ಮತ್ತು ಮರಾಠಿಗರು ಅನ್ಯೋನ್ಯವಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಅವರು ಡಿಸೆಂಬರ್ 7 ರಿಂದ ರಾಜ್ಯ ವಿಧಾನಸಬೆ ಅಧಿವೇಶನ ನಡೆಸುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದರು.