ಬೆಂಗಳೂರು: ಕರ್ನಾಟಕ ಸರ್ಕಾರವು ನವ ಕರ್ನಾಟಕ ನಿರ್ಮಿಸಲು ಸದಾ ಬದ್ಧ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಎಷ್ಟರಮಟ್ಟಿಗೆ ಸತ್ಯ ಎನ್ನುವುದನ್ನು ನಾವು ಕೆಲವು ಅಂಕಿ-ಅಂಶಗಳ ಮೂಲಕ ನೋಡಬಹುದು.
ಸಿದ್ದರಾಮಯ್ಯ ಸರ್ಕಾರದ ಸಾಧನೆಯ ಅಂಕಿ-ಅಂಶಗಳು ಹೀಗಿವೆ;
1. ಬಜೆಟ್ ಗಾತ್ರ
2013ರಲ್ಲಿ ರೂ.1,17,005 ಕೋಟಿ
2018ರಲ್ಲಿ ರೂ. 2,09,181 ಕೋಟಿ
2. ಅಭಿವೃದ್ಧಿಪಡಿಸಲಾದ ರಾಜ್ಯ ಹೆದ್ದಾರಿಗಳ ಉದ್ದ(ಕಿ.ಮೀನಲ್ಲಿ)
2008-13ರಲ್ಲಿ 8,048 ಕಿ.ಮೀ
2013-18ರಲ್ಲಿ 11,580 ಕಿ.ಮೀ
3. ಕರ್ನಾಟಕದಲ್ಲಿ ವಾರ್ಷಿಕ ಹಾಲು ಉತ್ಪಾದನೆ
2013ರಲ್ಲಿ 57.18 ಲಕ್ಷ ಟನ್
2018ರಲ್ಲಿ 68.24 ಲಕ್ಷ ಟನ್
4. ಕರ್ನಾಟಕದಲ್ಲಿ ವಾರ್ಷಿಕ ಮೀನುಗಾರಿಕೆ
2013ರಲ್ಲಿ 5.25 ಲಕ್ಷ ಮೆಟ್ರಿಕ್ ಟನ್
2018ರಲ್ಲಿ 6 ಲಕ್ಷ ಮೆಟ್ರಿಕ್ ಟನ್
5. ಸಣ್ಣ ನೀರಾವರಿ ಸೌಲಭ್ಯ ವಿಸ್ತರಣೆ
2008-13 ಅವಧಿಯಲ್ಲಿ 1.89 ಲಕ್ಷ ಎಕರೆಗೆ ವಿಸ್ತರಣೆ
2013-18 ಅವಧಿಯಲ್ಲಿ 3.43 ಲಕ್ಷ ಎಕರೆಗೆ ವಿಸ್ತರಣೆ
6. ಕರ್ನಾಟಕದಲ್ಲಿ ತೋಟಗಾರಿಕಾ ಉತ್ಪಾದನೆ
2013ರಲ್ಲಿ 162.56 ಲಕ್ಷ ಮೆಟ್ರಿಕ್ ಟನ್
2018ರಲ್ಲಿ 191.24 ಲಕ್ಷ ಮೆಟ್ರಿಕ್ ಟನ್
7. ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ
2008-13 ಅವಧಿಯಲ್ಲಿ 5,032 ಶಿಕ್ಷಕರ ನೇಮಕ
2013-18 ಅವಧಿಯಲ್ಲಿ 9,594 ಶಿಕ್ಷಕರ ನೇಮಕ
8. ಕರ್ನಾಟಕದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ
2013ರಲ್ಲಿ 1,350
2018ರಲ್ಲಿ 2,750
9. ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆ
2013ರಲ್ಲಿ 430
2018ರಲ್ಲಿ 643
10. ನಿರ್ಮಾಣಗೊಂಡ ಸರ್ಕಾರಿ ವಸತಿಶಾಲೆಗಳ ಸಂಖ್ಯೆ
2008-12 ಅವಧಿಯಲ್ಲಿ 196
2013-18 ಅವಧಿಯಲ್ಲಿ 270
11. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
2008-13 ಅವಧಿಯಲ್ಲಿ ರೂ. 150 ಕೋಟಿ
2013-18 ಅವಧಿಯಲ್ಲಿ ರೂ. 768 ಕೋಟಿ
12. ಕರ್ನಾಟಕದಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ
2013ರಲ್ಲಿ 10.97 ಲಕ್ಷ
2017ರಲ್ಲಿ 7.67 ಲಕ್ಷ
13. ಕರ್ನಾಟಕದಲ್ಲಿ ಗಂಭೀರ ಶಿಶು ಅಪೌಷ್ಠಿಕತೆ
2013ರಲ್ಲಿ 1.32%
2018ರಲ್ಲಿ 0.44%
14. ನಿರ್ಮಾಣಗೊಂಡ ಗ್ರಾಮೀಣ ರಸ್ತೆಗಳು
2008-13 ಅವಧಿಯಲ್ಲಿ 3,032 ಕಿ.ಮೀ
2013-18 ಅವಧಿಯಲ್ಲಿ 9,983 ಕಿ.ಮೀ
15. ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡ ಶುದ್ಧ ನೀರು ಘಟಕಗಳ ಸಂಖ್ಯೆ
2008-13 ಅವಧಿಯಲ್ಲಿ 675
2013-18 ಅವಧಿಯಲ್ಲಿ 10,204
16. ಶೌಚಾಲಯ ಹೊಂದಿದ ಗ್ರಾಮೀಣ ಕುಟುಂಬಗಳ ಪ್ರತಿಶತ
2013ರಲ್ಲಿ 33%
2018ರಲ್ಲಿ 87%
17. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳ ಸಂಖ್ಯೆ
2008-13 ಅವಧಿಯಲ್ಲಿ 49,040
2013-18 ಅವಧಿಯಲ್ಲಿ 67,600
18. ನಿರ್ಮಿಸಲಾದ ಮನೆಗಳ ಸಂಖ್ಯೆ
2008-13 ಅವಧಿಯಲ್ಲಿ 11.3 ಲಕ್ಷ
2013-18 ಅವಧಿಯಲ್ಲಿ 15.5 ಲಕ್ಷ
19. ಇಂಧನ ಸಾಮರ್ಥ್ಯ ಅನುಸ್ಥಾಪನೆ
2013ರಲ್ಲಿ 12,506 ಮೆಗಾವ್ಯಾಟ್
2018ರಲ್ಲಿ 21,340 ಮೆಗಾವ್ಯಾಟ್
20. ನಮ್ಮ ಮೆಟ್ರೊ ಕಾರ್ಯವ್ಯಾಪ್ತಿ ಉದ್ದ
2013ರಲ್ಲಿ 6.7 ಕಿ.ಮೀ
2018ರಲ್ಲಿ 42.3 ಕಿ.ಮೀ; 72 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ.