EPFO ಪಿಂಚಣಿದಾರರಿಗೆ ಇಲ್ಲಿದೆ ಒಂದು ನೆಮ್ಮದಿಯ ಸುದ್ದಿ

ನೌಕರರ ಭವಿಷ್ಯನಿಧಿ ಸಂಘಟನೆಯ (EPFO) ಪಿಂಚಣಿದಾರರು  ಇನ್ಮುಂದೆ ವರ್ಷದ ಯಾವುದೇ ಸಮಯದಲ್ಲಿ ತಮ್ಮ ಜೀವನ ಪ್ರಮಾಣ ಪತ್ರವನ್ನು ಸಂಬಂಧಿತ ಕಚೇರಿಗೆ ಕಳುಹಿಸಬಹುದಾಗಿದೆ.

Last Updated : Nov 4, 2020, 05:42 PM IST
  • ನೌಕರರ ಭವಿಷ್ಯನಿಧಿ ಸಂಘಟನೆ ಪಿಂಚಣಿದಾರರಿಗೆ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.
  • ಇನ್ಮುಂದೆ ಪಿಂಚಣಿದಾರರು ವರ್ಷದ ಯಾವುದೇ ಸಮಯದಲ್ಲಿ ತಮ್ಮ ಜೀವನ ಪ್ರಮಾಣಪತ್ರ ಸಲ್ಲಿಸಬಹುದು.
  • ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಉಂಟಾಗುವ ಜನಸಂದಣಿ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.
EPFO ಪಿಂಚಣಿದಾರರಿಗೆ ಇಲ್ಲಿದೆ ಒಂದು ನೆಮ್ಮದಿಯ ಸುದ್ದಿ title=

ನವದೆಹಲಿ: ನೌಕರರ ಭವಿಷ್ಯನಿಧಿ ಸಂಘಟನೆಯ (EPFO) ಪಿಂಚಣಿದಾರರು  ಇನ್ಮುಂದೆ ವರ್ಷದ ಯಾವುದೇ ಸಮಯದಲ್ಲಿ ತಮ್ಮ ಜೀವನ ಪ್ರಮಾಣ ಪತ್ರವನ್ನು ಸಂಬಂಧಿತ ಕಚೇರಿಗೆ ಕಳುಹಿಸಬಹುದಾಗಿದೆ.

ಇದನ್ನು ಓದಿ- EPF ಖಾತೆಯ ಎಲ್ಲಾ ಮಾಹಿತಿ Whatsappನಲ್ಲಿ ಲಭ್ಯ, ಇಲ್ಲಿದೆ ಸಹಾಯವಾಣಿ ನಂಬರ್

ಕೇವಲ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಪಿಂಚಣಿದಾರರು ಜೀವನ ಪ್ರಮಾಣಪತ್ರಗಳನ್ನು ಏಕಕಾಲಕ್ಕೆ ಸಲ್ಲಿಸಲು ಮುಂದಾಗುವುದನ್ನು ತಡೆಯಲು ಈ ನಿಬಂಧನೆ ಮಾಡಲಾಗಿದೆ ಎಂದು ಕೇಂದ್ರ ದೆಹಲಿ-ಇಪಿಎಫ್‌ಒ ಕಚೇರಿಯ ಕೇಂದ್ರ ಭವಿಷ್ಯ ನಿಧಿ ಆಯುಕ್ತ ಅಲೋಕ್ ಯಾದವ್ ಬುಧವಾರ ತಿಳಿಸಿದ್ದಾರೆ. ಪ್ರತಿ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ, ಇಪಿಎಫ್‌ಒ ಪಿಂಚಣಿ ಹೊಂದಿರುವವರು ತಮ್ಮ ಜೀವನ ಪ್ರಮಾಣಪತ್ರವನ್ನು ಇಪಿಎಫ್‌ಒ ಕಚೇರಿ ಅಥವಾ ಬ್ಯಾಂಕ್‌ಗೆ ಸಲ್ಲಿಸಬೇಕು.

ಇದನ್ನು ಓದಿ- ESIC ಸದಸ್ಯರಿಗೆ ಗುಡ್ ನ್ಯೂಸ್, ಪ್ರತಿ ತಿಂಗಳು ಸಿಗಲಿದೆ ಈ ಪ್ರಯೋಜನ

ಪ್ರಮಾಣಪತ್ರದ ಅವಧಿಯು ಸಲ್ಲಿಕೆಯ ದಿನಾಂಕದಿಂದ ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ. ಪಿಂಚಣಿ ಹೊಂದಿರುವವರು ಜನವರಿ 1 ರಂದು ಜೀವ ಪ್ರಮಾಣಪತ್ರವನ್ನು ಸಲ್ಲಿಸಿದ್ದರೆ, ಅದು ಮುಂದಿನ ವರ್ಷದ ಅದೇ ದಿನಾಂಕದವರೆಗೆ ಮಾನ್ಯವಾಗಿರುತ್ತದೆ. ಹೊಸ ನಿಬಂಧನೆಯ ಪ್ರಕಾರ, ಪಿಂಚಣಿ ಹೊಂದಿರುವವರು ವರ್ಷದ ಯಾವುದೇ ಸಮಯದಲ್ಲಿ ತಮ್ಮ ಜೀವನ ಪ್ರಮಾಣಪತ್ರವನ್ನು ನೀಡಬಹುದಾಗಿದೆ ಎಂದು ಯಾದವ್ ಹೇಳಿದ್ದಾರೆ.

ಇದನ್ನು ಓದಿ- ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್

ದೇಶಾದ್ಯಂತ  ಸರಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳು-ಸಿಎಸ್‌ಸಿಗಳಿಗೆ ಜೀವ ಪ್ರಮಾಣಪತ್ರಗಳನ್ನು ತಯಾರಿಸುವ ಅಧಿಕಾರ ನೀಡಲಾಗಿದೆ. ಇಪಿಎಫ್‌ಒ ಪಿಂಚಣಿ ಹೊಂದಿರುವವರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಿಂದ ಈ ಸೇವೆಯನ್ನು ಪಡೆಯಬಹುದು. ಇದಲ್ಲದೆ ಬ್ಯಾಂಕುಗಳಲ್ಲಿಯೂ ಕೂಡ  ಈ ಸೇವೆ ಎಂದಿನಂತೆ ಮುಂದುವರಿಯಲಿದೆ. 2020 ರಲ್ಲಿ ಪಿಪಿಒ ನೀಡಲಾಗಿರುವ ಪಿಂಚಣಿ ಹೊಂದಿರುವವರು ಜೀವ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಯಾದವ್ ಹೇಳಿದ್ದಾರೆ.

Trending News