ಬೀಜಿಂಗ್: ಕರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ಚೀನಾ (China)ದ ಶ್ರೀಮಂತ ಕೈಗಾರಿಕೋದ್ಯಮಿ ಜ್ಯಾಕ್ ಮಾ ಅವರ ಸಂಪತ್ತು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. ಇ-ಕಾಮರ್ಸ್ ದೈತ್ಯ ಅಲಿಬಾಬಾ (Alibaba) ಸಂಸ್ಥಾಪಕ ಜಾಕ್ ಮಾ ಕೂಡ ಈ ವರ್ಷ ಚೀನಾದ ಶ್ರೀಮಂತ ಕೈಗಾರಿಕೋದ್ಯಮಿ.
ಸಾಂಕ್ರಾಮಿಕ ಸಮಯದಲ್ಲಿ ಆನ್ಲೈನ್ ಶಾಪಿಂಗ್ (Online Shopping) ಮತ್ತು ಇತರ ಸೇವೆಗಳ ಬೇಡಿಕೆಯು ಇಂಟರ್ನೆಟ್ ಸಂಪರ್ಕಿತ ಉದ್ಯಮಿಗಳ ಸಂಪತ್ತಿನಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಸಮೀಕ್ಷೆಯೊಂದು ತಿಳಿಸಿದೆ.
Tiktok ಮೇಲಿನ ನಿಷೇಧವನ್ನು ಹತ್ತೇ ದಿನದಲ್ಲಿ ಹಿಂಪಡೆದ ಪಾಕಿಸ್ತಾನ
ಜ್ಯಾಕ್ ದಿ ಮೋಸ್ಟ್ ರಿಚ್:
ಹುರುನ್ ರಿಸರ್ಚ್ ಇನ್ಸ್ಟಿಟ್ಯೂಟ್ನ ವರದಿಯ ಪ್ರಕಾರ ಈ ವರ್ಷ ಮಾ ಆಸ್ತಿಯು 2019ಕ್ಕೆ ಹೋಲಿಸಿದರೆ 45 ಪ್ರತಿಶತದಷ್ಟು ಹೆಚ್ಚಳಗೊಂಡು 58.8 ಬಿಲಿಯನ್ ಡಾಲರ್ಗಳಿಗೆ ತಲುಪಿದೆ. ಹುರುನ್ ವಿಶ್ವದ ವಿವಿಧ ದೇಶಗಳ ಬಿಲಿಯನೇರ್ಗಳ ಬಗ್ಗೆ ಸಮೀಕ್ಷೆ ನಡೆಸಿ ಪಟ್ಟಿಯನ್ನು ತಯಾರಿಸುವ ಒಂದು ಸಂಸ್ಥೆಯಾಗಿದೆ. ಸಮೀಕ್ಷೆಯ ಪ್ರಕಾರ ಜನಪ್ರಿಯ ವೀಚಾಟ್ ಮೆಸೇಜಿಂಗ್ ಸೇವೆಯನ್ನು ನಿರ್ವಹಿಸುವ ಟೆನ್ಸೆಂಟ್ ಸಂಸ್ಥಾಪಕ ಮಾ ಹುವಾಟೆಂಗ್ 57.4 ಬಿಲಿಯನ್ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಆಸ್ತಿ ಶೇ. 50 ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಕಡಲ ಶಕ್ತಿಯನ್ನು ಹೆಚ್ಚಿಸಲು ಭಾರತದ ದೊಡ್ಡ ಹೆಜ್ಜೆ, ಚೀನಾಕ್ಕೆ ಹೆಚ್ಚಿದ ಆತಂಕ
53.7 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿರುವ ಬಾಟಲ್ ವಾಟರ್ ಬ್ರಾಂಡ್ ನಾಂಗ್ಫು ಸ್ಪ್ರಿಂಗ್ನ ಅಧ್ಯಕ್ಷ ಜಾಂಗ್ ಶನ್ಶಾನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಷೇರು ಬೆಲೆಗಳ ಹೆಚ್ಚಳವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರತಿ ವಾರ ಕನಿಷ್ಠ ಒಂದು ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಹೊಂದಿರುವ ಸರಾಸರಿ ಐದು ಚೀನಾದ ಕೈಗಾರಿಕೋದ್ಯಮಿಗಳ ಸಂಪತ್ತು ಹೆಚ್ಚಾಗಲು ಕಾರಣವಾಗಿದೆ ಎಂದು ಹುರುನ್ ಸಂಸ್ಥಾಪಕ ರೂಪರ್ಟ್ ಹೂಗ್ವರ್ಫ್ ಹೇಳಿದ್ದಾರೆ.