ನವದೆಹಲಿ: ಅಬುಧಾಬಿಯಲ್ಲಿನ ಶೇಕ್ ಜಾಯೆದ್ ಸ್ಟೇಡಿಯಂ ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 48 ರನ್ ಗಳ ಸುಲಭ ಗೆಲುವನ್ನು ಸಾಧಿಸಿದೆ.
IPL 2020 KKR vs RR: ಗೆಲುವಿನ ನಂತರ ಮಹತ್ವದ ವಿಷಯ ಹಂಚಿಕೊಂಡ ದಿನೇಶ್ ಕಾರ್ತಿಕ್
ಟಾಸ್ ಗೆದ್ದು ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಮುಂಬೈ ಬ್ಯಾಟಿಂಗ್ ಅವಕಾಶವನ್ನು ನೀಡಿತು. ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಗೆ ಆರಂಭದಲ್ಲಿಯೇ ಶೂನ್ಯಕ್ಕೆ ಡಿಕಾಕ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತಕ್ಕೆ ಒಳಗಾಯಿತು.ಆದರೆ ನಾಯಕ ರೋಹಿತ್ ಶರ್ಮಾ 70 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಗೆ ತಂದರು. ಇವರ ನಂತರ ಬಂದಂತಹ ಪೋಲ್ಲಾರ್ದ್ ಅಜೇಯ 47 ಹಾಗೂ ಹಾರ್ದಿಕ್ ಪಾಂಡ್ಯ ಅಜೇಯ 30 ರನ್ ಗಳಿಸುವ ಮೂಲಕ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
Another victory in the bag for @mipaltan as they beat #KXIP by 48 runs in Match 13 of #Dream11IPL.#KXIPvMI pic.twitter.com/PXN2K3cy2O
— IndianPremierLeague (@IPL) October 1, 2020
192 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಕಿಂಗ್ಸ್ ಇಲೆವನ್ ತಂಡವೂ ಚೇಸ್ ಮಾಡುವ ಭರವಸೆ ಮೂಡಿಸಿತ್ತಾದರೂ ಕೂಡ ಯಾವಾಗ ಮಾಯಾಂಕ್ ಅಗರವಾಲ್ 38-1 ವಿಕೆಟ್ ಒಪ್ಪಿಸಿದರೂ ತದನಂತರ 39ಕ್ಕೆ ಕರುಣ್ ನಾಯರ್ ವಿಕೆಟ್ ಕಳೆದುಕೊಂಡಿತ್ತು. ಇನ್ನೊಂದೆಡೆಗೆ ತಳವೂರುವ ಭರವಸೆ ಮೂಡಿಸಿದ್ದ ಕೆ.ಎಲ್.ರಾಹುಲ್ ಕೂಡ ವಿಕೆಟ್ ಒಪ್ಪಿಸಿ ಹೊರನಡೆದರು. ನಿಕೊಲಸ್ ಪೂರನ್ 27 ಎಸೆತಗಳಲ್ಲಿ 44 ರನ್ ಗಳಿಸಿದರೂ ಕೂಡ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.