ಬೆಂಗಳೂರು: ಪಿಎಂ ಕೇರ್ಸ್ ಫಂಡ್‌ಗೆ (PM Cares Fund) ಎಷ್ಟು ಬಂದಿದೆ? ಅದರಲ್ಲಿ ಎಷ್ಟು ದುಡ್ಡು ರಾಜ್ಯಕ್ಕೆ ಬಂದಿದೆ ಎನ್ನುವುದು ಗೊತ್ತಿಲ್ಲ. ಅದೇ ರೀತಿ ರಾಜ್ಯದಲ್ಲಿ ಸಿಎಂ ಪರಿಹಾರ ನಿಧಿಗೆ (CM Relief Fund) ಎಷ್ಟು ಬಂದಿದೆ ಎಂಬುದು ಗೊತ್ತಿಲ್ಲ. ಯಾವುದೂ ಪಾರದರ್ಶಕವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತರಾಟೆಗೆ ತೆಗೆದುಕೊಂಡರು.
ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ COVID-19 ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ವಿಫಲವಾದ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದ ನಡೆಗಳನ್ನು ಬಿಡಿಸಿ ಹೇಳಿದರು. ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕೊರೋನಾ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಅಭಿವ್ಯಕ್ಕಿ ಸ್ವಾತಂತ್ರ್ಯ ಹತ್ತಿಕ್ಕಿ ರೈತ ವಿರೋಧಿ ಕೃಷಿ ಮಸೂದೆಗೆ ಅಂಗೀಕಾರ ಪಡೆದಿರುವ ಕೇಂದ್ರ ಸರ್ಕಾರ: ಸಿದ್ದರಾಮಯ್ಯ
COVID-19 ಪರಿಕರಗಳ ಖರೀದಿ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಸಿದ್ದರಾಮಯ್ಯ ಖಡಕ್ ಆಗಿ ಒತ್ತಾಯಿಸಿದರು.
ಕೊರೊನಾ ಓಡಿಸಲು ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದರು. ಚಪ್ಪಾಳೆ ತಟ್ಟಿದ್ರೆ ಹೋಗ್ಬಿಡುತ್ತೇನೋ ಅಂದ್ಕೊಂಡಿದ್ದೆ. ಅದ್ರಲ್ಲಿ ಏನೋ ದೈವಿಕಶಕ್ತಿ ಇದೆ ಅಂದುಕೊಂಡಿದ್ದೆ. ಆದರೂ ನಾನು ಮಾತ್ರ ಚಪ್ಪಾಳೆ ತಟ್ಟಲಿಲ್ಲ. ನಮ್ಮವರೂ ಕೆಲವರು ದೀಪ ಹಚ್ಚಿದ್ರು. ನೀವೂ ಹಚ್ಚಿದ್ದರೆ ಕೊರೊನಾ ಓಡಿಹೋಗ್ತಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಕಾಲೆಳೆದರು.