ನೈಸರ್ಗಿಕ ವಿಕೋಪ ತಡೆಗಟ್ಟಲು ಹನುಮಾನ್ ಚಾಲಿಸಾ ಪಠಿಸಿ ಎಂದ ಬಿಜೆಪಿ ನಾಯಕ..!

       

Last Updated : Feb 12, 2018, 06:23 PM IST
ನೈಸರ್ಗಿಕ ವಿಕೋಪ ತಡೆಗಟ್ಟಲು ಹನುಮಾನ್ ಚಾಲಿಸಾ ಪಠಿಸಿ ಎಂದ ಬಿಜೆಪಿ ನಾಯಕ..!  title=
Photo Courtsey:ANI

ನವದೆಹಲಿ:ನೈಸರ್ಗಿಕ ವಿಕೋಪಗಳನ್ನು ನಿಭಾಯಿಸಲು ಹನುಮಾನ್ ಚಾಲಿಸಾ ಮಂತ್ರ ಪಠಣೆ ಮಾಡಿ ಎಂದು ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕ ರಮೇಶ್ ಸಕ್ಸೇನಾ ಸಲಹೆ ನೀಡಿದ್ದಾರೆ. 

ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ಸೆಹೋರ್ನಲ್ಲಿ ಅಕಾಲಿಕ ಮಳೆ ಬಿಳುತ್ತಿದ್ದು ಇದರಿಂದ ಭಾರಿ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ಈ ನೈಸರ್ಗಿಕ ಅನಾಹುತಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಪ್ರತಿದಿನ  ಒಂದು ಗಂಟೆಯವರೆಗೆ ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸಲು ರಮೇಶ್ ಸಕ್ಸೇನಾ ಮನವಿ ಮಾಡಿದ್ದಾರೆ. 

ಮುಂದಿನ 4-5 ದಿನಗಳಲ್ಲಿ ಈ ನೈಸರ್ಗಿಕ ವಿಕೋಪ ಮುಂದುವರಿಯಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಆದ್ದರಿಂದ ಇದನ್ನು ನಿಭಾಯಿಸಲು ಇರುವ ಒಂದು ಮಾರ್ಗವೆಂದರೆ ಹನುಮಾನ್ ಚಾಲಿಸಾ! ಎಂದು ಬಿಜೆಪಿ ನಾಯಕ ಸಕ್ಸೇನಾ ತಿಳಿಸಿದ್ದಾರೆ.

ಹನುಮಾನ್ ಚಾಲೀಸಾವನ್ನು ಪ್ರತಿ ಹಳ್ಳಿಯಲ್ಲಿ ಒಂದು ಗಂಟೆಯವರೆಗೆ ಪಠಣೆ ಮಾಡಿದರೆ ಈ ನೈಸರ್ಗಿಕ ವಿಕೋಪವನ್ನು ತಡೆಗಟ್ಟಬಹುದೆಂದು ಎಂದು ತಿಳಿಸಿದ್ದಾರೆ. 

"ಹನುಮಾನ್ ಚಾಲಿಸಾವನ್ನು ಜನರನ್ನು ಪ್ರತಿ ಹಳ್ಳಿಯಲ್ಲಿ ಒಂದು ಗಂಟೆಯ ಕಾಲ ಓದಿದರೆ ಈ ನೈಸರ್ಗಿಕ ವಿಕೋಪವನ್ನು ನಿಭಾಯಿಸಬಹುದೆಂಬುದು ನಾನು ಹೇಳಬಲ್ಲೆ ,ಆದ್ದರಿಂದ ಮುಂದಿನ ಐದು ದಿನಗಳಲ್ಲಿ ಪ್ರತಿದಿನ ಒಂದು ಗಂಟೆ ಹನುಮಾನ್ ಚಾಲೀಸಾವನ್ನು ಪಠಣೆ ಮಾಡಬೇಕೆಂದು ನಾನು ಯುವಕರಲ್ಲಿ ಮನವಿ ಮಾಡುತ್ತೇನೆ" ಎಂದು ಮಾಜಿ ಬಿಜೆಪಿ ಶಾಸಕ ಸಕ್ಸೇನಾ ವಿನಂತಿಸಿಕೊಂಡಿದ್ದಾರೆ.

Trending News