ನವದೆಹಲಿ: ಇಂದು ಬಾಲಿವುಡ್ ನಟಿ ಮಹಿಮಾ ಚೌಧರಿ (Mahima Chaudhry) ಅವರ ಜನ್ಮದಿನ. ಮಹೀಮಾ ಸೆಪ್ಟೆಂಬರ್ 13, 1973 ರಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಜನಿಸಿದರು. 90 ರ ದಶಕದ ಆರಂಭದಲ್ಲಿ, ಮಹಿಮಾ ಮಿಸ್ ಇಂಡಿಯಾ ಕಿರೀಟ ತನ್ನದಾಗಿಸಿಕೊಂಡಿದ್ದಾರೆ. ನಂತರ ಅವರು ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಮಹೀಮಾ ಅವರ ಪೆಪ್ಸಿ ಜಾಹೀರಾತು ಬಹಳ ಜನಪ್ರೀಯತೆ ಪಡೆದುಕೊಂಡಿತ್ತು. ಇದರಲ್ಲಿ ಅವರು ನಟರಾದ ಅಮೀರ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅವರ ಜೀವನಕ್ಕೆ ಸಂಬಂಧಿಸಿದ 10 ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ ಬನ್ನಿ ...
1 1997 ರಲ್ಲಿ, ನಿರ್ದೇಶಕ ಸುಭಾಷ್ ಘಾಯ್ ಅವರ 'ಪರದೇಸ್' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ. ಇದರಲ್ಲಿ ಅವರು ಶಾರುಖ್ ಖಾನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.ಈ ಚಿತ್ರಕ್ಕಾಗಿ ಮಹಿಮಾ ಫಿಲ್ಮ್ಫೇರ್ ಅತ್ಯುತ್ತಮ ಚೊಚ್ಚಲ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದರ ನಂತರ ಮಹೀಮಾ 'ದಾಗ್: ದಿ ಫೈರ್', 'ಪ್ಯಾರ್ ಕೊಯಿ ಖೇಲ್ ನಹಿ', 'ಕುರುಕ್ಷೇತ್ರ', 'ಲಜ್ಜಾ', 'ಯೆ ತೇರಾ ಘರ್ ಯೆ ಮೇರಾ ಘರ್' ಮತ್ತು 'ಓಂ ಜೈ ಜಗದೀಶ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
2 ಅನೇಕ ಹಿಟ್ಗಳ ನಂತರವೂ ಮಹೀಮಾ ಅವರಿಗೆ ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಮಹೀಮಾ ಕೊನೆಯ ಬಾರಿಗೆ 2016 ರ ಚಲನಚಿತ್ರ 'ಡಾರ್ಕ್ ಚಾಕೊಲೇಟ್' ನಲ್ಲಿ ಕಾಣಿಸಿಕೊಂಡಿದ್ದರು.
3 ಚಲನಚಿತ್ರಗಳನ್ನು ತೊರೆದ ನಂತರ, ಮಹಿಮಾ ಚೌಧರಿ ರಿಯಾಲಿಟಿ ಟಿವಿ ಕಾರ್ಯಕ್ರಮಗಳನ್ನು ಮಾಡಲು ಪ್ರಾರಂಭಿಸಿದರು. ಸಂದರ್ಶನವೊಂದರಲ್ಲಿ, ಅವರು ತಮ್ಮ ವೈಯಕ್ತಿಕ ಜೀವನವನ್ನು ತಮ್ಮ ವೃತ್ತಿಜೀವನದ ಅಂತ್ಯಕ್ಕೆ ಕಾರಣ ಎಂದು ಹೇಳಿದ್ದಾರೆ.
4 ಮಹಿಮಾ ಚೌಧರಿ ತನ್ನ ಅಫೇರ್ ಗಳ ಮೂಲಕ ತುಂಬಾ ಹೆಡ್ಲೈನ್ ಗಿಟ್ಟಿಸಿದ್ದಾರೆ. ಖ್ಯಾತ ಟೆನ್ನಿಸ್ ತಾರೆ ಲಿಯಾಂಡರ್ ಪೇಸ್ ಜೊತೆಗೆ ಮಹಿಮಾ ಹೆಸರು ತೊಡಕುಹಾಕಿಕೊಂಡಿತ್ತು. ಸುಮಾರು ಆರು ವರ್ಷಗಳ ಕಾಲ ಅವರೊಂದಿಗೆ ಮಹಿಮಾ ರಿಲೇಶನ್ ಶಿಪ್ ನಲ್ಲಿದ್ದರು. ಆದರೆ ಅವರ ಈ ಸಂಬಂಧ ಹೆಚ್ಚು ಕಾಲ ಮುಂದುವರೆಯಲ್ಲಿಲ್ಲ ಹಾಗೂ ಶೀಘ್ರದಲ್ಲಿಯೇ ಇಬ್ಬರು ಬೇರ್ಪಟ್ಟರು
5 ಲಿಯಾಂಡರ್ ನಿಂದ ಬೇರ್ಪಟ್ಟ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಹಿಮಾ ಹಲವು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದರು. ಲಿಯಾಂಡರ್ ಪೇಸ್ ಉತ್ತಮ ಟೆನಿಸ್ ಆಟಗಾರನಾಗಿದ್ದರೂ, ಮನುಷ್ಯನಾಗಿ ಅವನು ಒಳ್ಳೆಯವನಲ್ಲ ಎಂದು ಮಹೀಮಾ ಹೇಳಿದ್ದರು. ಅವರು ನನಗೆ ಮೋಸ ಮಾಡಿದ್ದಾರೆ ಎಂದು ಮಹಿಮಾ ಹೇಳಿದ್ದರು.
6 ಬಳಿಕ 2006 ರಲ್ಲಿ ಮಹಿಮಾ ವಿವಾಹವಾಗಿರುವ ಕುರಿತು ಹಠಾತ್ ಸುದ್ದಿಯೊಂದು ಪ್ರಕಟಗೊಂಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ಪ್ರೆಗ್ನೆನ್ಸಿಯ ಕಾರಣದಿಂದಾಗಿ ಮಹೀಮಾ ಅವಸರದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಅವರು ಆರ್ಕಿಟೆಕ್ಟ್ ಮತ್ತು ಉದ್ಯಮಿ ಬಾಬಿ ಮುಖರ್ಜಿ ಅವರನ್ನು ವಿವಾಹವಾಗಿದ್ದರು. ಅವರಿಬ್ಬರಿಗೂ ಅರಿಯನ್ನಾ ಎಂಬ ಮಗಳು ಇದ್ದಾಳೆ.
7 ಮಹೀಮಾ ಮತ್ತು ಬಾಬಿಯ ವಿವಾಹವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು 2013 ರಿಂದ ಅವಳು ತನ್ನ ಗಂಡನಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದಳು.
8 ಮಹಿಮಾ ಚೌಧರಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನ್ನ 'ಪರದೇಸ್' ಚಿತ್ರದ ನಿರ್ದೇಶಕ ಸುಭಾಷ್ ಘೈ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸುಭಾಷ್ ಘೈ ಅವರು ದೊಡ್ಡ ಪ್ರಮಾಣದಲ್ಲಿ ಬೆದರಿಕೆ ನೀಡಿ, ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
9 ಮಹೀಮಾ ಚೌಧರಿ ಸಂದರ್ಶನವೊಂದರಲ್ಲಿ, 'ನನ್ನನ್ನು ಸುಭಾಷ್ ಘೈ ಬೆದರಿಸಿದ್ದರು. ಅವರು ನನ್ನನ್ನು ನ್ಯಾಯಾಲಯಕ್ಕೆ ಕರೆದೊಯ್ದರು ಮತ್ತು ನನ್ನ ಮೊದಲ ಪ್ರದರ್ಶನವನ್ನು ರದ್ದುಗೊಳಿಸಬೇಕೆಂದು ಅವರು ಬಯಸಿದ್ದರು. ಇದು ತುಂಬಾ ಒತ್ತಡದಿಂದ ಕೂಡಿತ್ತು. ಎಂದು ಆರೋಪಿಸಿದ್ದಾರೆ.
10 ಮಹೀಮಾ ಚೌಧರಿ ಮತ್ತೊಬ್ಬ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರ ಮೇಲೂ ಆರೋಪ ಮಾಡಿದ್ದಾರೆ. 'ಸತ್ಯ' ಚಿತ್ರದಲ್ಲಿ ರಾಮಗೋಪಾಲ್ ವರ್ಮಾ ತನ್ನ ಜಾಗವನ್ನು ಉರ್ಮಿಳಾ ಮಾತೊಂಡ್ಕರ್ ಅವರಿಗೆ ಪಾತ್ರ ನೀಡಿದ್ದರು ಎಂದು ಆರೋಪಿಸಿದ್ದಾರೆ.