ಖ್ಯಾತ ಬಾಲಿವುಡ್ ನಟ ಹಾಗೂ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಡೆಲ್

ನಟ-ನಿರ್ಮಾಪಕ ಸಾಜಿದ್ ಖಾತ ಮೇಲೆ ವ್ರುತಿಯಲ್ಲಿ ಮಾಡೆಲ್ ಆಗಿರುವ ಮಹಿಳೆಯೋರ್ವಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

Last Updated : Sep 11, 2020, 09:12 PM IST
  • ನಟ-ನಿರ್ಮಾಪಕ ಸಾಜಿದ್ ಖಾನ್ ಮೇಲೆ ಮಾಡೆಲ್ ವೋರ್ವಳಿಂದ ಲೈಂಗಿಕ ಕಿರುಕುಳ ಆರೋಪ.
  • ಡಿಂಪಲ್ ಪಾಲ್ ಹೆಸರಿನ ಮಾಡೆಲ್ ನಿಂದ ಈ ಆರೋಪ
  • ಸಾಮಾಜಿಕ ಮಾಧ್ಯಮದ ಮೇಲೆ ಭುಗಿಲೆದ್ದ ಆಕ್ರೋಶ, ಸಾಜಿದ್ ಬಂಧನಕ್ಕೆ ಆಗ್ರಹ.
ಖ್ಯಾತ  ಬಾಲಿವುಡ್ ನಟ ಹಾಗೂ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಡೆಲ್  title=

ನವದೆಹಲಿ: ನಟ-ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರ ಮೇಲೆ ಮಾಡೆಲ್ ವೋರ್ವಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ, ಇದಾದ ಬಳಿಕ  ಅರೆಸ್ಟ್ ಸಾಜಿದ್ಖಾನ್ ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಶುಕ್ರವಾರ ಟ್ರೆಂಡ್ ಸೃಷ್ಟಿಸಿದ್ದು, ಸಾಜಿದ್ ಬಂಧನಕ್ಕೆ  ಒತ್ತಾಯಿಸಲಾಗುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಡಿಂಪಲ್ ಪಾಲ್ ಹೆಸರಿನ ಅನಧಿಕೃತ ಖಾತೆಯ ಮೂಲಕ ನೀಡಲಾಗಿರುವ ಮಾಹಿತಿ ಪ್ರಕಾರ  'ಮೀಟು ಚಳುವಳಿ ಪ್ರಾರಂಭವಾದಾಗ, ಅನೇಕ ಜನರು ಸಾಜಿದ್ ಖಾನ್ ಬಗ್ಗೆ ಮಾತನಾಡಿದ್ದರು. ಆದರೆ, ನನ್ನಿಂದ ಆ ಸಾಹಸ ತೋರಲಾಗಲಿಲ್ಲ. ಏಕೆಂದರೆ, ಉದ್ಯಮದಲ್ಲಿನ ಹಲವು ಕಲಾವಿದರಂತೆ ನಾನೂ ಕೂಡ ಯಾರೂ ಗಾಡ್ ಫಾದರ್ ಇಲ್ಲ ಹಾಗೂ ನನ್ನ ಕುಟುಂಬದ ಜವಾಬ್ದಾರಿಯೂ ಕೂಡ ನನ್ನ ಮೇಲಿತ್ತು. ಅದಕ್ಕಾಗಿ ಸುಮ್ಮನಿರಬೇಕಾಗಿತ್ತು. ಪ್ರಸ್ತುತ ನನ್ನ ತಂದೆ-ತಾಯಿ ನನ್ನೊಂದಿಗೆ ಇಲ್ಲ. ನಾನು ಇದೀಗ ಕೇವಲ ನನಗೋಸ್ಕರ ಸಂಪಾದಿಸಬೇಕು. ಇಂತಹುದರಲ್ಲಿ ನಾನು ಸಾಹಸ ಮಾಡಿದ್ದೇನೆ. ನಾನು 17ನೇ ವಯಸ್ಸಿನವಳಾಗಿದ್ದಾಗ ಸಾಜಿದ್ ನನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ" ಎಂದಿದ್ದಾಳೆ.

ಡಿಂಪಲ್ ಪಾಲ್ ವತಿಯಿಂದ ಗಂಭೀರ ಆರೋಪ
ಆಡಿಶನ್ ವೊಂದರ ವೇಳೆ ತಮ್ಮ ಜೊತೆಗೆ ಈ ಘಟನೆ ನಡೆದಿದೆ ಎಂದು ಡಿಂಪಲ್ ಪಾಲ್ ಹೇಳಿದ್ದಾರೆ. "ಸಾಜಿಕ್ ನನ್ನೊಂದಿಗೆ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾರೆ. ನನ್ನ ಮೈಮುಟ್ಟಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಚಿತ್ರ 'ಹೌಸ್ ಫುಲ್' ಕೆಲಸ ನೀಡುವುದಾಗಿ ಹೇಳಿ ತಮ್ಮ ಕಣ್ಣೆದುರಿಗೆ ನನಗೆ ನಿರ್ವಸ್ತ್ರರಾಗಲು ಕೂಡ ಹೇಳಿದ್ದರು" 

 
 
 
 

 
 
 
 
 
 
 
 
 

🙏🏼 Before democracy dies and there is no freedom of speech anymore I thought I should speak !

A post shared by Dimple paul (@paulaa__official) on

ತನ್ನ ಪೋಸ್ಟ್ ನ ಕೊನೆಯ ಭಾಗದಲ್ಲಿ ಹೇಳಿಕೊಂಡಿರುವ ಡಿಂಪಲ್, "ಈ ರೀತಿ ಸಾಜಿದ್ ಎಷ್ಟು ಯುವತಿಯರ ಜೊತೆಗೆ ಮಾಡಿದ್ದಾರೆ ಗೊತ್ತಿಲ್ಲ. ಸಹಾನುಭೂತಿ ಸಂಪಾದಿಸಲು ನಾನು ಇದನ್ನೆಲ್ಲಾ ಹೇಳುತ್ತಿಲ್ಲ, ಈ ಘಟನೆ ನನ್ನ ಮೇಲೆ ಗಂಭೀರ ಪರಿಣಾಮ ಬೀರಿರುವುದು ನನಗೆ ಅರಿವಾಗಿದೆ ಹಾಗೂ ಈ ಕುರಿತು ಆಗ ಹೇಳಲು ನನ್ನ ಬಳಿ ಯಾವುದೇ ಕಾರಣ ಇರಲಿಲ್ಲ. ಆದರೆ ಇದು ಸರಿಯಾದ ಸಮಯ. ಇಂತವರನ್ನು ಜೈಲಿಗಟ್ಟಬೇಕು. ಕೇವಲ ಕಾಸ್ಟಿಂಗ್ ಕೌಚ್ ಅಷ್ಟೇ ಅಲ್ಲ,  ಇಂತವರು ಜನರನ್ನು ತಮ್ಮ ಹೇಳಿಕೆಯಂತೆ ಕುಣಿಸುತ್ತಾರೆ ಹಾಗೂ ಅವರ ಕನಸುಗಳನ್ನು ಕಸಿದುಕೊಳ್ಳುತ್ತಾರೆ. ನಾನು ನನ್ನ ಜೀವನದಲ್ಲಿ ಮುಂದುವರೆದೆ. ಆದರೆ, ಆಗ ಸುಮ್ಮನಿದ್ದು ನಾನು ತಪ್ಪು ಮಾಡಿದೆ" ಎಂದಿದ್ದಾರೆ.

ಈ ಪೋಸ್ಟ್ ಗೆ ಅಡಿಬರಹ ಬರೆದಿರುವ ಡಿಂಪಲ್, " ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವವರೆಗೆ ನಾನು ಮಾತನಾಡಬೇಕೆಂದು ಯೋಚಿಸಿದೆ" ಎಂದು ಹೇಳಿದ್ದಾರೆ. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಟ್ವಿಟ್ಟರ್ ಬಳಕೆದಾರರು ಸಾಮಾಜಿಕ ಮಾಧ್ಯಮದ ಮೇಲೆ ಸಾಜಿ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರನ್ನು ಜೈಲಿಗಟ್ಟಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

Trending News