ಇಂದು ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳ ಸಾರಾಂಶ ಇಲ್ಲಿದೆ
- ಇಲ್ಲಿರುವ ಎಲ್ಲರಿಗೂ ನನ್ನ ಹೃದಯ ಪೂರ್ವ ನಮಸ್ಕಾರಗಳು. ನಮ್ಮ ಎದುರಿಗೆ ಕರ್ನಾಟಕದ ಚುನಾವಣಾ ಇದೆ. ಒಂದು ಕಡೆ ಕಾಂಗ್ರೆಸ್ ಪಕ್ಷದ ನಾನು ಮತ್ತು ಸಿದ್ದರಾಮಯ್ಯ. ಇನ್ನೊಂದೆಡೆಗೆ ಸುಳ್ಳು ಹೇಳುವ ಬಿಜೆಪಿ ಪಕ್ಷವಿದೆ ನೀವೇ ಹೇಳಿ ಯಾರ ಮೇಲೆ ನಂಬಿಕೆ ಇಡಬೇಕು.
- ನಾವು ಯಾವತ್ತು ಸುಳ್ಳಿನ ಆಶ್ವಾಸನೆ ಕೊಡುವುದಿಲ್ಲ, ಆದರೆ ಬಿಜೆಪಿ ಪಕ್ಷವು ಸುಳ್ಳಿನ ಆಶ್ವಾಸನೆ ನೀಡುತ್ತಿದೆ. ಈಗಾಗಲೇ ನಾವು ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ ತಿದ್ದುಪಡಿಯ ಮೂಲಕ 371 ಜೆ ಸ್ಥಾನವನ್ನು ನೀಡುವುದರ ಮೂಲಕ ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ.
- ಈಗ ಬಿಜೆಪಿಯವರು ಭಾಷಣ ಮಾಡುತ್ತಾರೆ ಆದರೆ ಹಿಂದೆ ಈ ಸ್ಥಾನಮಾನ ನೀಡಲು ಬಿಜೆಪಿಯವರು ವಿರೋಧಿಸಿದ್ದರು. ಈ ತಿದ್ದುಪಡಿಯಿಂದಾಗಿ 359 ಕೋಟಿಯಿಂದ ಈಗ 4 ಸಾವಿರ ಕೋಟಿ ರೂಪಾಯಿಗಳ ಅನುದಾನ ಈ ಭಾಗಕ್ಕೆ ಹರಿದು ಬರುತ್ತಿದೆ. ಈ ತಿದ್ದುಪಡಿಯಿಂದ ಈ ಭಾಗದ ವೈದಕೀಯ ಮತ್ತು ಎಂಜನಿಯರಗಳಿಗೆ ಉದ್ಯೋಗ ಸಿಗುತ್ತಿದೆ. ಕೊಪ್ಪಳ, ಬೀದರ್, ಗುಲ್ಬುರ್ಗ ಜಿಲ್ಲೆಯಲ್ಲಿ ಮೂರು ವೈದಕೀಯ ಕಾಲೇಜುಗಳು ದೊರೆತಿವೆ.
- ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆಯ ಸಂದರ್ಭದಲ್ಲಿ ನಿಮಗೆಲ್ಲರಿಗೂ ಕೂಡಾ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿದ್ದರು. ಆದರೆ ಎಲ್ಲಿದೆ? ಒಂದು ರೂಪಾಯಿಯಾದರೂ ನಿಮ್ಮ ಅಕೌಂಟ್ ಗೆ ಬಂದಿದೆಯಾ?
- ಇನ್ನೊಂದು ಸುಳ್ಳಿನ ಮಾತನ್ನು ನರೇಂದ್ರ ಮೋದಿ ಆಡಿದ್ದಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು ಆದರೆ ಅಷ್ಟು ಉದ್ಯೋಗಗಳು ಎಲ್ಲಿವೆ? .....
- ಈ ವಿಷಯಕ್ಕೆ ಕುರಿತಾಗಿ ನಾವು ಸಂಸತ್ತಿನಲ್ಲಿ ಪ್ರಶ್ನಿಸಿದಾಗ 24 ಗಂಟೆಯಲ್ಲಿ 450 ಯುವಕರಿಗೆ ಉದ್ಯೋಗ ನೀಡಿವೆ ಎಂದು ಸರ್ಕಾರ ಹೇಳುತ್ತಿದೆ. ಸಂಸ್ತತ್ತಿನಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕದ ಪಾಲುದಾರಿಕೆಯೇ ಹೆಚ್ಚು ಇದೆ ಎಂದು ಸ್ವತಃ ಮೋದಿಯವರೇ ಹೇಳಿದ್ದಾರೆ.
- ಮಾನ್ಯ ಪ್ರಧಾನಿಯವರೇ ಕರ್ನಾಟಕವು ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದೆ. ನಿಮ್ಮ ಕೆಲಸ ಯಾವಾಗ ಮಾಡುತ್ತಿರಾ?
- ದೇಶದ ಎದುರು ಉದ್ಯೋಗ, ರೈತ, ಮತ್ತು ಆದಿವಾಸಿಗಳ ಪ್ರಮುಖ ಸಮಸ್ಯೆಗಳಿವೆ. ದೇಶದ ನಗರ ಭಾಗದಲ್ಲಿ ಕಾರ್ಮಿಕ ವರ್ಗಗಳ ಸಮಸ್ಯೆಗಳಿವೆ. ಆದರೆ ವಿಪರ್ಯಾಸವೆಂದರೆ ಮೊನ್ನೆ ದಿನ ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ವೇಳೆಯಲ್ಲಿ ಒಂದು ಘಂಟೆಯ ಭಾಷಣದಲ್ಲಿ ಇದರ ಬಗ್ಗೆ ಯಾವುದೇ ಒಂದು ಮಾತು ಆಡಲಿಲ್ಲ, ಆದರೆ ಒಂದು ಗಂಟೆಯಲ್ಲಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡುವುದರಲ್ಲೇ ಸಮಯ ಕಳೆದಿದ್ದಿರಿ.
- ಪ್ರಧಾನಿಗಳೇ ನಾವು ಇತಿಹಾಸದಲ್ಲಿ ಹಿಂದೆ ಏನಾಗಿದೆ ಎನ್ನುವುದರ ಬಗ್ಗೆ ನಿಮ್ಮನ್ನು ಕೇಳುತ್ತಿಲ್ಲ ಬದಲಾಗಿ ಮುಂದೆ ಆಗ ಬೇಕಾಗಿರುವುದರ ಬಗ್ಗೆ ಕೇಳುತ್ತಿದ್ದೇವೆ.
- ಕರ್ನಾಟಕದಲ್ಲಿ ಸಿದ್ದರಾಮಯ್ಯ ನವರು ಗಾಡಿಯನ್ನು ಮುಂದೆ ನೋಡಿಕೊಂಡು ಬಗ್ಗೆ ಚಾಲನೆ ಮಾಡುತ್ತಿದ್ದಾರೆ ಆದರೆ ನೀವು ಕನ್ನಡಿ ಯಲ್ಲಿ ನೋಡಿಕೊಂಡು ಚಾಲನೆ ಮಾಡುತ್ತಿದ್ದಿರಿ ಹೀಗಾದರೆ ಅಪಘಾತ ಖಂಡಿತ. ಆದ್ದರಿಂದ ಮೋದಿಯವರೇ ನೀವು ಮುಂದೆ ನೋಡಿಕೊಂಡು ಗಾಡಿ ಚಾಲನೆ ಮಾಡಬೇಕಾಗಿದೆ. ಆದ್ದರಿಂದ ಇಂತಹ ಸಂಗತಿಗಳನ್ನು ನೀವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಿ ಕಲಿಯಿರಿ.
- ಮೋದಿಜಿಯವರು ತಾವು ಗುಜರಾತನ್ನು ಬದಲಾಯಿಸಿದ್ದೇನೆ ಎಂದು ಹೇಳುತ್ತಿದ್ದರು. ನಾನು ಗುಜರಾತ ಚುನಾವಣೆಯ ವೇಳೆ ಅಲ್ಲಿನ ಪ್ರತಿಯೊಂದು ಜಿಲ್ಲೆಗಳನ್ನು ನೋಡಿದ್ದೇನೆ. ಆಗ ನನಗೆ ಅಲ್ಲಿಗೆ ಹೋದ ನಂತರ ಅಲ್ಲಿನ ನಿಜವಾದ ಸತ್ಯ ಏನೆಂದು ತಿಳಿಯಿತು... ನೀವೇನು ಗುಜರಾತನು ಬದಲಾಯಿಸಿಲ್ಲ ಬದಲಾಗಿ ಅಲ್ಲಿನ ಕೂಲಿ ಕಾರ್ಮಿಕರು,ವ್ಯಾಪಾರಸ್ತರು ಗುಜರಾತನ್ನು ಬದಲಾಯಿಸಿದ್ದಾರೆ.
- ಅಲ್ಲಿನ ಜನರನ್ನು ನಾನು ವಿಚಾರಿಸಿದಾಗ ಇಡಿ ಗುಜರಾತನ್ನು ಕೇವಲ 10 ಉದ್ಯಮಪತಿಗಳಿಗೆ ನೀಡಿದ್ದಾರೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಅಲ್ಲಿ ದೊಡ್ಡ ಉದ್ಯಮಿಗಳಿಗೆ ಒಂದು ರೂಪಾಯಿ ದರದಲ್ಲಿ ಒಟ್ಟು 40 ಸಾವಿರ ಹೆಕ್ಟರ್ ಭೂಮಿಯನ್ನು ಮೋದಿಯವರು ನೀಡಿದ್ದಾರೆ. ಟಾಟಾ ನ್ಯಾನೋ ಕಂಪನಿ ಗೆ 33 ಸಾವಿರ ಕೋಟಿ ರೂಪಾಯಿ ಸಾವಿರಾರು ಎಕರೆ ಜಮೀನು ವಿದ್ಯುತ್ ಎಲ್ಲವನ್ನು ನೀಡಿದ್ದಾರೆ ಇದಕ್ಕಿಂತ ಮೋಸ ಯಾವುದಿದೆ ನೀವೇ ಹೇಳಿ.
- ಬಿಜೆಪಿಯ ಮೋದಿ ಸರ್ಕಾರ ಸಮಾಜ ಕಲ್ಯಾಣ ಕಾರ್ಯಕ್ರಮಕ್ಕೆ ಇಡಿ ದೇಶಕ್ಕೆ 55 ಸಾವಿರ ಕೋಟಿ ನೀಡುತ್ತಿದ್ದಾರೆ ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೋಬ್ಬರೆ ಸರ್ಕಾರಿ ಬೊಕ್ಕಸದಿಂದ 27 ಸಾವಿರ ಕೋಟಿ ನೀಡುತ್ತಿದ್ದಾರೆ.ನಿಮಗೆ ಹಿಂದುಳಿದವರ ಬಗ್ಗೆ ದಲಿತರ ಬಗ್ಗೆ ಬದ್ದತೆ ಇಲ್ಲ.
- ಭ್ರಷ್ಟಾಚಾರದಲ್ಲಿ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವದಾಖಲೆ ಮಾಡಿದೆ.
- ಇವತ್ತು ರಾಫೆಲ್ ವಿಮಾನ ಖರೀದಿಯು ದೇಶದ ಅತಿ ದೊಡ್ಡ ಹಗರಣ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಫ್ರಾನ್ಸ್ ಗೆ ಹೋಗಿ ಹಿಂದೆ ಆಗಿದ್ದ ಒಪ್ಪಂದವನ್ನು ಬದಲಾಯಿಸಿದ್ದಾರೆ.
- ನಾವು ಅಧಿಕಾರದಲ್ಲಿದ್ದಾಗ ಈ ರಾಫೆಲ್ ಒಪ್ಪಂದವನ್ನು ಎಚ್.ಎ.ಎಲ್ ಜೊತೆ ಒಪ್ಪಂದ ಮಾಡಲಾಗಿತ್ತು..ಇವತ್ತು ಬೆಂಗಳೂರಿಗೆ ದೊಡ್ಡ ಹೆಸರು ಬರಲು ಎಚ್ಎಎಲ್ ನ ಕೊಡುಗೆ ದೊಡ್ಡದು ಆದರೆ ನೀವು ಈಗ ಸರ್ಕಾರಿ ಕಂಪನಿಯಾಗಿದ್ದ ಎಚ್ಎಎಲ್ ಜೊತೆ ಇದ್ದಂತಹ ಒಪ್ಪಂದವನ್ನು ನಿಮ್ಮ ಮಿತ್ರರಿಗೆ ಈ ಒಪ್ಪಂದದ ಪಾಲನ್ನು ನೀಡಿದ್ದಿರಿ ಆ ಮೂಲಕ ಬೆಂಗಳೂರಿನ ಯುವಕರ ಭವಿಷ್ಯದ ಜೊತೆ ಆಟವಾಡುತ್ತಿದ್ದಿರಿ. ಆದ್ದರಿಂದ ನಾನು ನಿಮ್ಮಲ್ಲಿ ಕೆಳುವುದಿಷ್ಟೇ ನಿಮ್ಮ ಮಿತ್ರರಿಗೆ ಯಾವ ಆಧಾರದ ಮೇಲೆ ಈ ಒಪ್ಪಂದದ ಪಾಲನ್ನು ನೀಡಿದ್ದಿರಿ? ಮತ್ತು ಈ ರಾಫೆಲ್ ಒಪ್ಪಂದದ ಬೆಲೆಯನ್ನು ಹೇಳಿ? ಇಂತಹ ತಿರ್ಮಾನಕ್ಕೆ ಬರಬೇಕಾದಾಗ ತಾವು ರಕ್ಷಣಾ ಮಂತ್ರಿ ಮತ್ತು ಅದರ ಸ್ಥಾಯಿ ಸಮಿತಿಯ ಒಪ್ಪಿಗೆಯನ್ನು ಪಡೆದಿದ್ದಿರಾ? ಈ ಕುರಿತಾಗಿ ಮೊನ್ನೆ ತಮ್ಮ ಒಂದು ಘಂಟೆಯ ಭಾಷಣದಲ್ಲಿ ಯಾವ ಅಂಶಗಳನ್ನು ಪ್ರಸ್ಥಾಪಿಸಲಿಲ್ಲ.
- ಪಕ್ಕದಲ್ಲಿ ತಮ್ಮ ಪಕ್ಷದ ಯಡಿಯೂರಪ್ಪನವರ ಸರ್ಕಾರದ ಭೂಹಗರಣ, ರೇಪ್ ಹಗರಣ, ಗಣಿ ಹಗರಣ,ಅನೇಕ ಹಗರಣ ಬಗ್ಗೆ ಏನು ತಾವು ಏನು ಮಾತನಾಡಲಿಲ್ಲ ಆದರೆ ಈಗಿನ ಸಿದ್ದರಾಮಯ್ಯ ಸರ್ಕಾರ ಯಾವುದೇ ಹಗರಣ ಇಲ್ಲದ ಸರ್ಕಾರದ ಬಗ್ಗೆ ಆರೋಪಗಳನ್ನು ಮಾಡಿದ್ದಿರಿ.
- ಕೊನೆಯಲ್ಲಿ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೇ ಯಾರು ಸತ್ಯವನ್ನು ಮಾತನಾಡುತ್ತಾರೆ ಮತ್ತು ಅದನ್ನು ನಿರ್ವಹಿಸುತ್ತಾರೋ ಅವರಿಗೆ ನೀವು ಬೆಂಬಲ ನೀಡಬೇಕು. ನಾವು ಗಾಡಿ ಯನ್ನು ಮುಂದೆ ನೋಡಿಕೊಂಡು ಗಾಡಿ ಓಡಿಸುತ್ತೇವೆ ಹೊರತು ಹಿಂದೆ ಅಲ್ಲ.
- ಪ್ರಧಾನಿಗಳು ನೀಡಿದಂತೆ ಸುಳ್ಳು ಭರವಸೆಯನ್ನು ನಾವು ಕೊಟ್ಟಿಲ್ಲ
- ಮತ್ತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬರುತ್ತೇವೆ..ಕರ್ನಾಟಕವು ಕೇವಲ ಒಬ್ಬ ವ್ಯಕ್ತಿ ಯಿಂದ ಬದಲಾಯಿತು ಎಂದು ಹೇಳುವುದಿಲ್ಲ ಬದಲಾಗಿ ಇದರ ಪ್ರಗತಿಗೆ ರೈತರು, ಯುವಕರು, ವ್ಯಾಪಾರಸ್ತರು ಕೂಡಾ ಪ್ರಗತಿಯಲ್ಲಿ ಪಾಲುದಾರರಿದ್ದಾರೆ. ಆದ್ದರಿಂದ ನಿಮ್ಮ ಒಗ್ಗಟ್ಟಿನ ಶಕ್ತಿಯನ್ನು ನೀಡಿದರೆ, ಕರ್ನಾಟಕವು ನಿಮ್ಮ ಬೆಂಬಲದಿಂದ ರಾಜ್ಯ ಮುಂದೆ ಸಾಗುತ್ತಿದೆ.
- ನೀವು ಯಾವಾಗ ನನ್ನ ಅವಶ್ಯ ಎಂದು ಹೇಳುತ್ತಿರೋ ಆಗ ನಾನು ಇಲ್ಲಿ ಹಾಜರಾಗಿತ್ತೇನೆ.