ಕೇಂದ್ರ ಬಜೆಟ್ 2018 : ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶೇಷ ಸಂದರ್ಶನದ ಮುಖ್ಯಾಂಶಗಳು

ಈ ಬಜೆಟ್ ಹಣಕಾಸಿನ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಸೇವೆ ಸಲ್ಲಿಸುವುದರ ನಡುವೆ ಉತ್ತಮ ಸಮತೋಲನವನ್ನು ಉಳಿಸಿಕೊಂಡಿರುವುದಾಗಿ ಅವರು ಹೇಳಿದರು.

Last Updated : Feb 3, 2018, 07:25 PM IST
  • ದೇಶದ ಆರ್ಥಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರಗಳಲ್ಲಿ ಬಹಳಷ್ಟು ರಚನಾತ್ಮಕ ಸುಧಾರಣೆ.
  • ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಪಡೆಯದ ಶೇ.40ರಷ್ಟು ಜನರ ಜವಾಬ್ದಾರಿಯನ್ನು ಕೇಂದ್ರ ಸರ್ಕಾರದ್ದು.
  • ವೇತನ ವರ್ಗವು ಬಹಳ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದೆ.
ಕೇಂದ್ರ ಬಜೆಟ್ 2018 : ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶೇಷ ಸಂದರ್ಶನದ ಮುಖ್ಯಾಂಶಗಳು  title=

ನವದೆಹಲಿ : ಕೇಂದ್ರ ಬಜೆಟ್ 2018 ವೇತನ ವರ್ಗಕ್ಕೆ ಹಲವು ಅನುಕೂಲ ಮಾಡಿಕೊಟ್ಟಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜೀ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಬಜೆಟ್ ಹಣಕಾಸಿನ ಸವಾಲುಗಳನ್ನು ಪೂರೈಸುವಲ್ಲಿ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಸೇವೆ ಸಲ್ಲಿಸುವುದರ ನಡುವೆ ಉತ್ತಮ ಸಮತೋಲನವನ್ನು ಉಳಿಸಿಕೊಂಡಿರುವುದಾಗಿ ಅವರು ಹೇಳಿದರು.

ಸಂದರ್ಶನದ ಮುಖ್ಯ ಅಂಶಗಳು : 

ಸರ್ಕಾರದ ಖಜಾನೆಯ ಮೇಲಿನ ಮೊದಲ ಹಕ್ಕು ಬಡವರದ್ದು
ಕಳೆದ ಎರಡು ಮೂರೂ ವರ್ಷಗಳಿಂದ ನಾವು ದೇಶದ ಆರ್ಥಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರಗಳಲ್ಲಿ ಬಹಳಷ್ಟು ರಚನಾತ್ಮಕ ಸುಧಾರಣೆಗಳನ್ನು ಪರಿಚಯಿಸಿದ್ದೇವೆ. ಮುಂಬರುವ ಎರಡು ವರ್ಷಗಳಲ್ಲಿ ಈ ರಚನಾತ್ಮಕ ಸುಧಾರಣೆಗಳಿಂದ ಲಾಭವು ಏಕೀಕರಣಗೊಳ್ಳುತ್ತವೆ. ಅಲ್ಲದೆ ಸರ್ಕಾರದ ಖಜಾನೆಯ ಮೇಲಿನ ಮೊದಲ ಹಕ್ಕು ಬಡವರದ್ದು. ಹಾಗಾಗಿ ಜನರು ಈ ಬಜೆಟ್ ಸ್ವೀಕರಿಸಿದ್ದಾರೆ ಎಂದು ನಂಬುತ್ತೇನೆ ಎಂದು ಹಣಕಾಸು ಸಚಿವರು ಹೇಳಿದರು.

ಸವಾಲಿನ ಬಜೆಟ್
ಹಣಕಾಸಿನ ಕೊರತೆಯನ್ನು ಎದುರಿಸುವ ನಿಟ್ಟಿನಲ್ಲಿ ಇದು ಸವಾಲಿನ ಬಜೆಟ್ ಆಗಿತ್ತು. ಇನ್ನೂ ನಾವು ಉದ್ಯೋಗಗಳನ್ನು ಉತ್ಪಾದಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ನಡುವೆ ಸಮತೋಲನವನ್ನು ಉಳಿಸಿಕೊಳ್ಳಲು ನಿರ್ವಹಿಸುತ್ತಿದ್ದೇವೆ.

ವೇತನ ವರ್ಗಕ್ಕೆ ಹೆಚ್ಚಿನ ಪ್ರಯೋಜನ
ತೆರಿಗೆಗಳನ್ನು ಪಾವತಿಸುವ ವಿಚಾರಕ್ಕೆ ಬಂದಾಗ ವೇತನ ವರ್ಗವು ಬಹಳ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದೆ. ಆದ್ದರಿಂದ, ಕಳೆದ 3 ವರ್ಷಗಳಲ್ಲಿ ನಾನು ವೇತನ ವರ್ಗಕ್ಕೆ ಉತ್ತಮ ಪ್ರಯೋಜನಗಳನ್ನು ಮಾಡಿಕೊಡುತ್ತಾ ಬಂದಿದ್ದೇನೆ. ಹಾಗೆಯೇ ವೇತನ ವರ್ಗಕ್ಕೆ ಹೆಚ್ಚಿನ ತೆರಿಗೆ ವಿನಾಯಿತಿ ನೀಡುವುದು ಸರ್ಕಾರದ ಉದ್ದೇಶವಾಗಿತ್ತು. ಹಾಗಾಗಿ ವೇತನ ವರ್ಗಕ್ಕೆ 8,000 ಕೋಟಿ ರೂ. ಮೌಲ್ಯದ standard deduction ನೀಡಲಾಗಿದ್ದು, ಮಧ್ಯಮ ವರ್ಗದವರಿಗೆ 12 ಸಾವಿರ ಕೋಟಿ ರೂ. ಗಳ ಪ್ರಯೋಜನಗಳನ್ನು ನೀಡಲಾಗಿದೆ. ಇದು ಆರ್ಥಿಕತೆಯ ಹಿತಾಸಕ್ತಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಮೂಲಸೌಕರ್ಯಕ್ಕಾಗಿ 14.34 ಲಕ್ಷ ಕೋಟಿ ರೂ. 
ಸಂದರ್ಶನದಲ್ಲಿ, ವ್ಯವಹಾರ ಸಮುದಾಯಕ್ಕೆ ಸಹಾಯ ಮಾಡಲು ಕರ್ತವ್ಯದ ರಚನೆಯನ್ನು ವಿಸ್ತರಿಸಬೇಕೆಂದು ಜೇಟ್ಲಿ ಒತ್ತಾಯಿಸಿದರು. ಗ್ರಾಮೀಣ ಮೂಲಸೌಕರ್ಯಕ್ಕಾಗಿ 14.34 ಲಕ್ಷ ಕೋಟಿ ರೂ. ಹಣವನ್ನು ಸರ್ಕಾರ ನಿಗದಿಪಡಿಸಿದೆ. ಇದು ಭವಿಷ್ಯದಲ್ಲಿ MSP- ಕನಿಷ್ಟ ಬೆಂಬಲ ಬೆಲೆಯ ಸ್ಥಿರೀಕರಣದ ಅಗತ್ಯ ಮತ್ತು ತತ್ವಗಳನ್ನು ಆಧರಿಸಿರುತ್ತದೆ ಎಂದು ಅವರು ಹೇಳಿದರು.

ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ
ನೀವು ಹಳ್ಳಿಯ ಮೂಲಕ ಗ್ರಾಮವನ್ನು ಸಂಪರ್ಕಿಸಿದರೆ, ಆ ಗ್ರಾಮದಲ್ಲಿ ಮನೆಗಳಿಗೆ ವಿದ್ಯುತ್ ನೀಡಿ, ನಂತರ ಆ ಮನೆಗಳಿಗೆ ಸ್ವಚ್ಛ ಭಾರತದ ಅಡಿಯಲ್ಲಿ ಶೌಚಾಲಯಗಳನ್ನು ಒದಗಿಸಿ, ಇದು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯ ಮೇಲೆ ಉತ್ತಮ ಪರಿಣಾಮ ಬೀರಲಿದೆ. ನಂತರ ಉದ್ಯೋಗಾವಕಾಶ ಒದಗಿಸಲು MNREGA ಯೋಜನೆಗಳು ಸಹಾಯವಾಗುತ್ತದೆ.  ಒಟ್ಟಾರೆಯಾಗಿ ಇವೆಲ್ಲವೂ ಗ್ರಾಮೀಣ ಜನರ ಜೀವನಮಟ್ಟವನ್ನು ಸುಧಾರಿಸಲಿದೆ ಎಂದು ಅರುಣ್ ಜೇಟ್ಲಿ ಹೇಳಿದರು.

ಆರೋಗ್ಯ ಸೌಲಭ್ಯ
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಪಡೆಯದ ಶೇ.40ರಷ್ಟು ಜನರ ಜವಾಬ್ದಾರಿಯನ್ನು ನಮ್ಮ ಸರ್ಕಾರವು ನೋಡಿಕೊಳ್ಳುತ್ತದೆ. ಆದ್ದರಿಂದ, ಸರ್ಕಾರವು ಅವರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ.

ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆ 
ಜನರು ಕೇವಲ ಬೇಡಿಕೆಗಳನ್ನು ಒಡ್ಡುತ್ತಾರೆ. ಆದರೆ ರಾಷ್ಟ್ರದ ಅಭಿವೃದ್ಧಿಗಾಗಿ ಏನನ್ನಾದರೂ ನೀಡಬೇಕಾದುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅವರು ಸರ್ಕಾರಕ್ಕೆ ಪಾವತಿಸುವ ತೆರಿಗೆಯನ್ನು ಸಾರ್ವಜನಿಕ ಅಭಿವೃದ್ಧಿಗಾಗಿಯೇ ಸರ್ಕಾರ ಬಳಕೆ ಮಾಡುತ್ತದೆ. ಪ್ರತಿಯೊಬ್ಬರೂ ವಿಮಾನನಿಲ್ದಾಣ, ರಸ್ತೆಗಳು ಮತ್ತು ಹೆದ್ದಾರಿಗಳನ್ನು ಬಳಸುತ್ತಾರೆ ... ಆದ್ದರಿಂದ ನಾಗರಿಕರು ಅಲ್ಪ ತೆರಿಗೆ ಹೊರೆಯನ್ನು ಹೊರಬೇಕಾಗುತ್ತದೆ. ಏಕೆಂದರೆ ಇದು ದೇಶದ ಅಭಿವೃದ್ಧಿಗಾಗಿಯೇ ಹೊರತು, ದುರುಪಯೋಗವಾಗುವುದಿಲ್ಲ. 

ಸರಕಾರವು ಹೂಡಿಕೆಯ ಮುಂಭಾಗವನ್ನು ಚೆನ್ನಾಗಿ ಮಾಡಿಕೊಂಡಿದ್ದರೂ, ಗುರಿ ತಲುಪುವಲ್ಲಿ ಕೊಂಚ ಕಡಿಮೆಯಾಗಿದ್ದು, ಪ್ರತಿ ವರ್ಷ ಇದು ಕ್ರಮೇಣ ಹೆಚ್ಚಾಗಲಿದೆ.

ಅವಧಿಪೂರ್ವ ಚುನಾವಣೆ ಇಲ್ಲ 
ಅವಧಿ ಪೂರ್ವ ಚುನಾವಣೆಗಳ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರುಣ್ ಜೇಟ್ಲಿ ಅವರು, ಏಕಕಾಲಿಕ ಚುನಾವಣೆಯ ಕುರಿತ ಚರ್ಚೆ ಸಾಂವಿಧಾನಿಕ ಸಮಸ್ಯೆಯೆಂದು ಹೇಳಿದರು. ಚುನಾವಣೆ ಕುರಿತ ಊಹಾಪೋಹಗಳಿಗೆ ಉತ್ತರಿಸುತ್ತಾ, ಅವಧಿ ಪೂರ್ವ ಚುನಾವಣೆ ನಡೆಯುವ ಯಾವುದೇ ಸಾಧ್ಯತೆಯಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಫೆ.1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಕೇಂದ್ರ ಬಜೆಟ್ 2018-19 ಅನ್ನು ಸಂಸತ್ತಿನಲ್ಲಿ ಪ್ರಸ್ತುತಪಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಈ ಬಾರಿಯ ಬಜೆಟ್ ನಿಂದಾಗಿ ದೇಶವು 2.5 ಟ್ರಿಲಿಯನ್ ಡಾಲರ್ನಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಪಡೆದುಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. 

ಈ ಬಾರಿಯ ಬಜೆಟ್ನಲ್ಲಿ ಅರುಣ್ ಜೇಟ್ಲಿ ಅವರು ಶಿಕ್ಷಣ, ಆರೋಗ್ಯ ಮತ್ತು ಕೃಷಿ ವಿಷಯಗಳ ಮೇಲೆ ಹೆಚ್ಚು ಗಮನಹರಿಸಿದ್ದರು. 2017-18 ರ ದ್ವಿತೀಯಾರ್ಧದಲ್ಲಿ ಶೇ. 7.2 ರಿಂದ ಶೇ.7.5 ವರೆಗೆ ಅಭಿವೃದ್ಧಿ ಹೊಂದುವ ನಿರೀಕ್ಷೆಯಲ್ಲಿದ್ದು, ವ್ಯಾಪಾರವನ್ನು ಸುಲಭಗೊಳಿಸುವುದರಿಂದ, ಸರ್ಕಾರವು ಬಡ ಮತ್ತು ಮಧ್ಯಮ ವರ್ಗದವರಿಗೆ ಜೀವನವನ್ನು ಸರಾಗಗೊಳಿಸುವಂತೆ ಮಾಡಲಿದೆ ಎಂದು ಅವರು ಹೇಳಿದ್ದರು.

ಅಲ್ಲದೆ, ಈ ಬಾರಿಯ ಕೇಂದ್ರ ಬಜೆಟ್ 2018-19 ಜನಸಾಮಾನ್ಯರ ಬದುಕನ್ನು ಸುಲಭವಾಗಿಸುತ್ತದೆಯಲ್ಲದೆ ಎಲ್ಲ ವ್ಯವಹಾರಗಳನ್ನು ಸರಳೀಕರಣಗೊಳಿಸಲಿದೆ. ಅಲ್ಲದೆ ಈ ಬಜೆಟ್ 1.2 ಶತಕೋಟಿ ಭಾರತೀಯರ ಭರವಸೆಯನ್ನು ಬಲಪಡಿಸಲಿದ್ದು, ರೈತ ಪರ, ಜನ ಸಾಮಾನ್ಯ ಪರ, ವ್ಯವಹಾರ ಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಬಜೆಟ್ ಇದಾಗಿದೆ ಅವರು ಜೀ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅರುಣ್ ಜೇಟ್ಲಿ ಹೇಳಿದರು. 

Trending News