ನವದೆಹಲಿ: ಭಾರತವು ಬಾಹ್ಯಾಕಾಶದ ಹೊಸ ಸೂಪರ್ ಪವರ್ ಆಗಿ ಹೊರಹೊಮ್ಮಿದೆ. ಇಸ್ರೋ (ISRO) ವಿಜ್ಞಾನಿಗಳು ಈ ನಿಟ್ಟಿನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ ಮತ್ತು ಈ ಪ್ರಕ್ರಿಯೆಯು ನಿರಂತರವಾಗಿ ಮುಂದುವರೆಯುತ್ತಲೇ ಇದೆ. 'ಮೇಕ್ ಇನ್ ಇಂಡಿಯಾ' ಮತ್ತು 'ಮೇಕ್ ಫಾರ್ ವರ್ಲ್ಡ್' ಮಂತ್ರದ ನಡುವೆ ಭಾರತೀಯ ಕಂಪನಿಯೊಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡಲಿದೆ. ಭಾರತದ ಏರೋಸ್ಪೇಸ್ ಕಂಪನಿ ಸ್ಕೈರೂಟ್ ಇಸ್ರೋ ಸಹಾಯದಿಂದ ಡಿಸೆಂಬರ್ 2021 ರೊಳಗೆ ಬಾಹ್ಯಾಕಾಶಕ್ಕೆ ರಾಕೆಟ್ಗಳನ್ನು ಉಡಾಯಿಸಲಿದೆ. ಸ್ಕೈರೂಟ್ ತನ್ನ ಮೊದಲ ಉಡಾವಣಾ ವಾಹನಕ್ಕೆ ವಿಕ್ರಮ್- I ಎಂದು ಹೆಸರಿಸಿದೆ. ದೇಶದ ಮೊದಲ ಖಾಸಗಿ ರಾಕೆಟ್ ಎಂಜಿನ್ 'ರಾಮನ್' ಅನ್ನು ಯಶಸ್ವಿಯಾಗಿ ಪರೀಕ್ಷಿಸಿದ ಮೊದಲ ಭಾರತೀಯ ಸ್ಟಾರ್ಟ್ ಆಪ್ ಎಂಬ ಹೆಗ್ಗಳಿಕೆಗೆ ಸ್ಕೈರೂಟ್ ಏರೋಸ್ಪೇಸ್ ಪಾತ್ರವಾಗಿದೆ.
ರಾಕೆಟ್ ಇಂಜಿನ್ ಕ್ಷೇತ್ರದಲ್ಲಿ, ಇದನ್ನು ಮುಂದಿನ ಪ್ರಮುಖ ಮತ್ತು ಮಹತ್ವದ ಹಂತವೆಂದು ಪರಿಗಣಿಸಲಾಗಿದೆ. ರಾಕೆಟ್ ಇಂಜಿನ್ ಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವು ಅನೇಕ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತವೆ, ಅವುಗಳು ಪ್ರತಿ ಹಂತಕ್ಕೂ ಪ್ರತ್ಯೇಕ ಇಂಜಿನ್ ಜೋಡಿಸಲಾಗುತ್ತದೆ. ಕೆಲವು ಇಂಜಿನ್ ಗಳು ದ್ರವ ಇಂಧನವನ್ನು ಬಳಸುತ್ತವೆ. ಸಾಮಾನ್ಯ ಶಬ್ದಗಳಲ್ಲಿ ಹೇಳುವುದಾದರೆ ರಾಕೆಟ್ ಲಂಬವಾದ ಸಿಲಿಂಡರ್ ಆಕಾರದ ವಾಹನವಾಗಿದ್ದು, ಇದು ತನ್ನ ಇಂಜಿನ್ ಸಹಾಯದಿಂದ ವೇಗವಾಗಿ ಚಲಿಸುತ್ತದೆ.
ಕಂಪನಿಯು ಈಗಾಗಲೇ ರಾಕೆಟ್ನ ಅಪ್ಪರ್ ಸ್ಟೇಜ್ ಇಂಜಿನ್ ಅನ್ನು ಪರೀಕ್ಷಿಸಿದೆ, ಇದರ ಆರಂಭಿಕ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ. ಈ ಕುರಿತು ಝೀ ಮಿಡಿಯಾ ಜೊತೆಗೆ ಮಾತನಾಡಿರುವ ಸ್ಕೈರೂಟ್ ತಂಡ, 2021 ರ ಡಿಸೆಂಬರ್ ವೇಳೆಗೆ ಇಸ್ರೋ ಮಾರ್ಗದರ್ಶನದಲ್ಲಿ ರಾಕೆಟ್ನ ಮೊದಲ ಉಡಾವಣೆಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದೆ. ಭಾರತದಲ್ಲಿ ಮೊದಲ ಬಾರಿಗೆ ಖಾಸಗಿ ವಲಯವಾಗಿ ನಾವು ದ್ರವ ಇಂಜಿನ್ ಬಳಕೆಯ ಯಶಸ್ವಿ ಪರೀಕ್ಷೆ ನಡೆಸಿದ್ದೇವೆ. ಕಂಪನಿಯ ಎರಡು ರಾಕೆಟ್ ಹಂತಗಳು ಆರು ತಿಂಗಳಲ್ಲಿ ಪರೀಕ್ಷೆಗೆ ಸಿದ್ಧವಾಗುತ್ತಿವೆ ಎಂದು ಹೇಳಿದೆ.
ವಿಕ್ರಂನ ಸಾರಥಿ ರಾಮನ್
ಇತ್ತೀಚಿನ ಇಂಜಿನ್ ಪರೀಕ್ಷೆಗೆ ಸಂಬಂಧಿಸಿದಂತೆ, ಕಂಪನಿಯು 3 ರಾಕೆಟ್ಗಳ ಕಾರ್ಯನಿರ್ವಹಿಸಲಾಗುತ್ತದೆ ಎಂದು ಹೇಳಿತ್ತು. ಇಸ್ರೋ ಸಂಸ್ಥಾಪಕ ಸ್ಮರಣಾರ್ಥ ಅವುಗಳ ಹೆಸರನ್ನು ವಿಕ್ರಮ್ I, II ಮತ್ತು III ಎಂದು ಹೆಸರಿಸಲಾಗಿದೆ. ವಿಕ್ರಮ್ ನಾಲ್ಕು ಹಂತದ ರಾಕೆಟ್ ಆಗಿದ್ದು ಅದು ಅಂತಿಮ ಹಂತವನ್ನು ತಲುಪಿದೆ. ಪರೀಕ್ಷೆಯ ಸಮಯದಲ್ಲಿ ಇಂಜಿನ್ ನಲಿ ದ್ರವ ಇಂಧನವನ್ನು ಬಳಸಲಾಗಿದೆ. ಎಂಜಿನ್ ರಾಮನ್ ಹೆಸರನ್ನು ಇಟ್ಟಿರುವ ಕಂಪನಿಯು ತನ್ಮೂಲಕ ನೊಬೆಲ್ ಪ್ರಶಸ್ತಿ ವಿಜೇತ ಸರ್ ಸಿ.ವಿ.ರಾಮನ್ ಅವರಿಗೆ ಗೌರವ ಸಲ್ಲಿಸಲು ಪ್ರಯತ್ನಿಸಿದೆ. ರಾಮನ್ ಎಂಜಿನ್ಗಳು UDMH ಮತ್ತು NTO ದ್ರವ ಇಂಧನವನ್ನು ಬಳಸುತ್ತವೆ, ಈ 4 ಇಂಜಿನ್ ಗಳ ಕ್ಲಸ್ಟರ್ 3.4kN ಒತ್ತಡವನ್ನು ಉತ್ಪಾದಿಸುತ್ತದೆ. ಈ ಇಂಜಿನ್ ಹಲವು ಉಪಗ್ರಹಗಳನ್ನು ವಿವಿಧ ಕಕ್ಷೆಗಳಲ್ಲಿ ಏಕಕಾಲದಲ್ಲಿ ಸ್ಥಾಪಿಸುವ ಸಾಮರ್ಥ್ಯ ಹೊಂದಿವೆ.