ಕರ್ನಾಟಕ ಸೇರಿದಂತೆ 10 ಹೈಕೋರ್ಟ್​ಗಳಿಗೆ ಸಿಜೆಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

 10 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ/ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನ ಕೊಲಿಜಿಯಂ ಶಿಫಾರಸು ಮಾಡಿದೆ.

Last Updated : Feb 2, 2018, 10:56 AM IST
ಕರ್ನಾಟಕ ಸೇರಿದಂತೆ 10 ಹೈಕೋರ್ಟ್​ಗಳಿಗೆ ಸಿಜೆಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು title=
pic : barandbench.com

ನವ ದೆಹಲಿ: ಕರ್ನಾಟಕ ಸೇರಿದಂತೆ 10 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ/ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ನ ಕೊಲಿಜಿಯಂ ಶಿಫಾರಸು ಮಾಡಿದೆ.

ಮೇಘಾಲಯ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್​ಗೆ ಹಾಗೂ ಛತ್ತೀಸ್​ಗಢ ಹೈಕೋರ್ಟ್​ನ ಸಿಜೆ ಟಿ.ಬಿ. ರಾಧಾಕೃಷ್ಣನ್ ಅವರನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶ ಹೈಕೋರ್ಟ್​ಗೆ ವರ್ಗಾಯಿಸಲು ಪ್ರಸ್ತಾಪಿಸಿದೆ. 

ಉಳಿದಂತೆ ದೆಹಲಿ, ಮೇಘಾಲಯ, ಛತ್ತೀಸ್​ಗಢ, ಕೋಲ್ಕತ್ತಾ, ತ್ರಿಪುರಾ, ಹಿಮಾಚಲ ಪ್ರದೇಶ, ಕೇರಳ ಹೈಕೋರ್ಟ್​ಗಳಿಗೆ ಸಿಜೆಗಳನ್ನು ನೇಮಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ ಜ.11ರಂದು ಶಿಫಾರಸು ಮಾಡಿತ್ತು. ಈ ಪಟ್ಟಿ ಸುಪ್ರೀಂಕೋರ್ಟ್ ವೆಬ್​ಸೈಟ್​ನಲ್ಲಿ ಗುರುವಾರ ಪ್ರಕಟವಾಗಿದೆ.

ಹೈಕೋರ್ಟ್ ನೂತನ ನ್ಯಾಯಮೂರ್ತಿಗಳ
ಕಲ್ಕತ್ತಾ ನ್ಯಾಯಮೂರ್ತಿ ಜ್ಯೋತಿರ್ಮಾಯ್ ಭಟ್ಟಾಚಾರ್ಯ
ಛತ್ತೀಸ್ಗರ್ ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ
ದೆಹಲಿ  ನ್ಯಾಯಮೂರ್ತಿ ಅನಿರುದ್ಧ ಬೋಸ್
ಹಿಮಾಚಲ್ ಪ್ರದೇಶ್ ನ್ಯಾಯಮೂರ್ತಿ ಸೂರ್ಯಕಾಂತ್
ಕರ್ನಾಟಕ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ
ಕೇರಳ ನ್ಯಾಯಮೂರ್ತಿ ಆಂಟೋನಿ ಡೋಮಿನಿಕ್
ಮಣಿಪುರ ನ್ಯಾಯಮೂರ್ತಿ ಅಭಿಲಾಷ ಕುಮಾರಿ
ಮೇಘಾಲಯ ನ್ಯಾಯಮೂರ್ತಿ ತರುಣ್ ಅಗರವಾಲ್
ತೆಲಂಗಾಣ ಮತ್ತು ಆಂಧ್ರಪ್ರದೇಶ ನ್ಯಾಯಮೂರ್ತಿ ಟಿ.ಬಿ. ರಾಧಾಕೃಷ್ಣನ್
ತ್ರಿಪುರ ನ್ಯಾಯಮೂರ್ತಿ ಅಜಯ್ ರಾಷ್ಟೋಗಿ

 

Trending News