ನವದೆಹಲಿ: ರಕ್ಷಣಾ ಒಪ್ಪಂದದಲ್ಲಿನ ಭ್ರಷ್ಟಾಚಾರ(Corruption) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸಮತಾ ಪಕ್ಷದ ಮಾಜಿ ಅಧ್ಯಕ್ಷ ಜಯಾ ಜೇಟ್ಲಿಗೆ (Jaya Jaitly) ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಪರಾಧಿ ಪರ ವಕೀಲರು ಈ ಮಾಹಿತಿಯನ್ನು ನೀಡಿದ್ದಾರೆ. ಜಯಾ ಜೇಟ್ಲಿಯ ಮಾಜಿ ಪಕ್ಷ ಸಹೋದ್ಯೋಗಿ ಗೋಪಾಲ್ ಪಚರ್ವಾಲ್, ಮೇಜರ್ ಜನರಲ್ (ನಿವೃತ್ತ) ಎಸ್. ಪಿ.ಮುರ್ಗೈ ಅವರಿಗೂ ಕೂಡ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸುಮಾರು 20 ವರ್ಷಗಳಷ್ಟು ಹಳೆಯದಾದ ಈ ರಕ್ಷಣಾ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪದ ಮೇಲೆ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಪಕ್ಷದ ಇತರೆ ಇಬ್ಬರಿಗೆ ಗರಿಷ್ಠ ಅಂದರೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಸಿಬಿಐ ಕೋರಿತ್ತು.
ಥರ್ಮಲ್ ಇಮೇಜರ್ ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ್ದಕ್ಕಾಗಿ ಜೇಟ್ಲಿ ಮತ್ತು ಅವರ ಪಕ್ಷದ ಇಬ್ಬರು ಮಾಜಿ ಸಹೋದ್ಯೋಗಿಗಳಾಗಿದ್ದ ಗೋಪಾಲ್ ಪಚೇರ್ವಾಲ್ ಮತ್ತು ಮೇಜರ್ ಜನರಲ್ (ನಿವೃತ್ತ) ಎಸ್ಪಿ ಮುರ್ಗೈ ಅವರನ್ನು ದೋಷಿ ಎಂದು ಪರಿಗಣಿಸಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ವೀರೇಂದ್ರ ಭಟ್ ಗುರುವಾರಕ್ಕೆ ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.
2001 ರಲ್ಲಿ ಸುದ್ದಿ ಪೋರ್ಟಲ್ ತೆಹಲ್ಕಾದಲ್ಲಿ ಪ್ರಸಾರವಾದ 'ಆಪರೇಷನ್ ವೆಸ್ಟೆಂಡ್' ಮೂಲಕ ಜನವರಿಯಲ್ಲಿ ಈ ವಿಷಯ ಬೆಳಕಿಗೆ ಬಂದಿತ್ತು. ಇದೊಂದು ಕುಟುಕು ಕಾರ್ಯಾಚರಣೆಯಾಗಿತ್ತು . ಸೈನ್ಯಕ್ಕೆ ಥರ್ಮಲ್ ಇಮೇಜರ್ ಪೂರೈಸಲು ಶಂಕಿತ ಕಂಪನಿಯ ಪ್ರತಿನಿಧಿಯಾಗಿ ಬಂದ ಪತ್ರಕರ್ತನಿಂದ ಆರೋಪಿ ಲಂಚ ಸ್ವೀಕರಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಶಂಕಿತ ಕಂಪನಿ ವೆಸ್ಟೆಂಡ್ ಇಂಟರ್‌ನ್ಯಾಷನಲ್‌ನ ಪ್ರತಿನಿಧಿ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರಿಂದ ಜೇಟ್ಲಿ ಕಾನೂನುಬಾಹಿರವಾಗಿ 2 ಲಕ್ಷ ರೂ. ಸಂಗ್ರಹಿಸಿದ್ದರೆ, ಮುರ್ಗೈಗೆ 20,000 ರೂ. ಸ್ವೀಕರಿಸಿದ್ದರು. ಮೂವರು ಆರೋಪಿಗಳ ಜೊತೆಗೆ ಸುರೇಂದ್ರ ಕುಮಾರ್ ಪಕ್ಷಕಾರರಾಗಿದ್ದರು. ಆದರೆ ನಂತರ ನಡೆದ ಬೆಳವಣಿಗೆಯಲ್ಲಿ ಸುರೇಖಾ ಸರ್ಕಾರಿ ಸಾಕ್ಷಿಯಾಗಿ ಬದಲಾಗಿದ್ದರು.
ಭ್ರಷ್ಟಾಚಾರ-ವಿರೋಧಿ ಕಾಯ್ದೆಯ ಕ್ರಿಮಿನಲ್ ಪಿತೂರಿ (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ) ಮತ್ತು ಸೆಕ್ಷನ್ 9 (ಸಾರ್ವಜನಿಕ ಸೇವಕರ ಮೇಲೆ ಸಾರ್ವಜನಿಕ ಪ್ರಭಾವವನ್ನು ಬಳಸಲು ಲಂಚ ತೆಗೆದುಕೊಳ್ಳುವುದು) ಅಡಿಯಲ್ಲಿ ಮೂವರು ಆರೋಪಿಗಳಾದ ಜೈಟ್ಲಿ, ಪಚರ್ವಾಲ್ ಮತ್ತು ಮುರ್ಗೈ ಅವರನ್ನು ನ್ಯಾಯಾಲಯ ಇದೀಗ ಶಿಕ್ಷೆಗೆ ಒಳಪಡಿಸಿದೆ.