ಭಾರತೀಯ ರೇಲ್ವೆ ಇಲಾಖೆಯ Private Train ಯೋಜನೆಗೆ ಜಬರ್ದಸ್ತ್ ರೆಸ್ಪಾನ್ಸ್

ಭಾರತೀಯ ರೇಲ್ವೆ ಇಲಾಖೆಯ ಮೊದಲ ಪ್ರಿಬಿಡ್ ಸಭೆಯಲ್ಲಿ ಒಟ್ಟು 16 ದೊಡ್ದ ಕಂಪನಿಗಳು ಭಾಗಿಯಾಗಿವೆ. ಭಾರತ ಸರ್ಕಾರದ ಒಟ್ಟು 3 ಪ್ರೈವೇಟ್ ಸೆಕ್ಟರ್ ಯುನಿಟ್ ಗಳೂ ಸೇರಿದಂತೆ ಆಸ್ಟ್ರೇಲಿಯದ ಸಂಸ್ಥೆಯೊಂದಕ್ಕೆ ರೈಲು ಹಳಿಗಳ ಮೇಲೆ ಖಾಸಗಿ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲು ರೇಲ್ವೆ ಇಲಾಖೆ ಆಸಕ್ತಿ ತೋರಿದೆ ಎನ್ನಲಾಗಿದೆ.

Last Updated : Jul 22, 2020, 03:24 PM IST
ಭಾರತೀಯ ರೇಲ್ವೆ ಇಲಾಖೆಯ Private Train ಯೋಜನೆಗೆ ಜಬರ್ದಸ್ತ್ ರೆಸ್ಪಾನ್ಸ್  title=

ನವದೆಹಲಿ: ಖಾಸಗಿ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧಾರ ಕೈಗೊಂಡ ನಂತರ, ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ತಮ್ಮ ಖಾಸಗಿ ರೈಲುಗಳನ್ನು ಹಳಿಗಳಿಗೆ ಇಳಿಸಲು ಭಾರಿ ಆಸಕ್ತಿ ತೋರಿಸುತ್ತಿವೆ. ರೈಲ್ವೆ ಕರೆದ ಮೊದಲ ಪೂರ್ವ ಬಿಡ್ ಸಭೆಯಲ್ಲಿ 16 ದೊಡ್ಡ ಕಂಪನಿಗಳು ಭಾಗವಹಿಸಿದ್ದವು. ಭಾರತ ಸರ್ಕಾರದ ಒಟ್ಟು 3 ಪ್ರೈವೇಟ್ ಸೆಕ್ಟರ್ ಯುನಿಟ್ ಗಳೂ ಸೇರಿದಂತೆ ಆಸ್ಟ್ರೇಲಿಯದ ಫರ್ಮ್ ವೊಂದರ ರೈಲುಗಳನ್ನು ಹಳಿಗಳ ಮೇಲೆ ಇಳಿಸಲು  ರೇಲ್ವೆ ಇಲಾಖೆ ಆಸಕ್ತಿ ತೋರಿದೆ.

ಇಲ್ಲಿದೆ 16 ಕಂಪನಿಗಳ ಪಟ್ಟಿ
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೊದಲ ಪೂರ್ವ ಬಿಡ್ ಸಭೆಯಲ್ಲಿ ಮೂರು ಪಿಎಸ್ಯುಗಳಾದ ಐಆರ್ಸಿಟಿಸಿ (IRCTC), ಭೆಲ್ (BHEL) ಮತ್ತು ರೈಟ್ಸ್ (RITES) ಭಾಗವಹಿಸಿದ್ದವು ಎನ್ನಲಾಗಿದೆ. ಇದಲ್ಲದೆ ಭರತ್ ಫೊರ್ಜ್ (BHARAT FORGE), ಬಾಂಬಾರ್ಡಿಯರ್ ಇಂಡಿಯಾ (BOMBARDIER INDIA), ಜಿಎಂಆರ್ ಗ್ರೂಪ್ (GMR GROUP), ಗೇಟ್‌ವೇ ರೈಲು (GATEWAY RAIL), ವೆದಾಂತಾ (VEDANATA), ಮೇಧಾ(MEDHA) ಮತ್ತು ಆಸ್ಟ್ರೇಲಿಯಾದ ಕಂಪನಿ ಸಿಎಎಫ್ (CAF)  ಭಾಗವಹಿಸಿದ್ದವು.

ಆದರೆ ಇಲ್ಲಿ ಆಶ್ಚರ್ಯದ ಸಂಗತಿ ಎಂದರೆ ಮೂಲಗಳ ಪ್ರಕಾರ, ಟಾಟಾ ಸನ್ಸ್ ಮತ್ತು ಅದಾನಿ ಗ್ರೂಪ್ ಮೊದಲ ಪೂರ್ವ ಬಿಡ್ ಸಭೆಯಲ್ಲಿ ವಹಿಸಿಲ್ಲ ಎನ್ನಲಾಗಿದೆಮೊದಲ ಪೂರ್ವ ಬಿಡ್ ಸಭೆಯಲ್ಲಿ ಈ ಎರಡು ಕಂಪನಿಗಳು ಭಾಗಿಯಾಗುತ್ತವೆ ಎಂದು ಈ ಮೊದಲು ಹೇಳಲಾಗುತ್ತು. ಇದಲ್ಲದೆ, ಸ್ಪೈಸ್‌ಜೆಟ್, ಇಂಡಿಗೊ ಮತ್ತು ಮೇಕ್‌ಮೈಟ್ರಿಪ್ ಬಗ್ಗೆಯೂ ಚರ್ಚೆ ಕೇಳಿಬಂದಿದ್ದವು. ಆದರೆ ಈ ಕಂಪನಿಗಳನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮೊದಲ ಸ್ಥಾನದಲ್ಲಿ ಸೇರಿಸಲಾಗಿಲ್ಲ. ಖಾಸಗಿ ಪ್ಲೇಯರ್ ರೈಲು ಯೋಜನೆಯ ಮುಂದಿನ ಪೂರ್ವ ಬಿಡ್ ಸಭೆ ಆಗಸ್ಟ್ 7 ರಂದು ನಡೆಯಲಿದೆ ಎಂದು ತಜ್ಞರು ಹೇಳಿದ್ದಾರೆ.

ಖಾಸಗಿ ಕಂಪೆನಿಗಳು ತನ್ನ ನೆಟ್‌ವರ್ಕ್‌ನಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡುವ ಯೋಜನೆಯನ್ನು ಔಪಚಾರಿಕವಾಗಿ ಮುನ್ನಡೆಸಲು, ಭಾರತೀಯ ರೈಲ್ವೆ ಈ ತಿಂಗಳ ಆರಂಭದಲ್ಲಿ ದೇಶಾದ್ಯಂತ ಒಟ್ಟು 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಪ್ರಸ್ತಾವನೆಯನ್ನು ಆಹ್ವಾನಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

Trending News