ಗುಡ್ ನ್ಯೂಸ್: ಕೊರೋನಾ ಲಸಿಕೆ ಮಾರುಕಟ್ಟೆಗೆ ಯಾವಾಗ ಬರಲಿದೆ ಗೊತ್ತಾ?

ಕರೋನಾ ಯುಗದಲ್ಲಿ ದೊಡ್ಡ ಒಳ್ಳೆಯ ಸುದ್ದಿ ಬಂದಿದೆ, ಹೌದು . ಕರೋನಾ ಲಸಿಕೆ ಬಹುತೇಕ ಸಿದ್ಧವಾಗಿದೆ.   

Last Updated : Jul 22, 2020, 11:30 AM IST
ಗುಡ್ ನ್ಯೂಸ್:  ಕೊರೋನಾ ಲಸಿಕೆ ಮಾರುಕಟ್ಟೆಗೆ ಯಾವಾಗ ಬರಲಿದೆ ಗೊತ್ತಾ? title=

ನವದೆಹಲಿ: ಕರೋನಾ ಲಸಿಕೆ ಬಗ್ಗೆ ವಿಶ್ವದಾದ್ಯಂತ ಸಂಶೋಧನೆ ನಡೆಯುತ್ತಿದೆ. ಪ್ರಪಂಚದಾದ್ಯಂತ ಕನಿಷ್ಠ 33 ಅತ್ಯುತ್ತಮ ಸಂಸ್ಥೆಗಳು ಈ ಸಾಂಕ್ರಾಮಿಕ ಲಸಿಕೆಗಾಗಿ ನಡೆಸುತ್ತಿವೆ. ಏತನ್ಮಧ್ಯೆ  ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಗುಡ್ ನ್ಯೂಸ್ ಒಂದನ್ನು ನೀಡಿದ್ದು ಶೀಘ್ರದಲ್ಲೇ ಕರೋನಾ ಲಸಿಗೆ (Corona Vaccine) ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದೆ.

ಕರೋನಾ ಲಸಿಕೆ :
ಕರೋನಾ ಲಸಿಕೆ ಬಗ್ಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಕ್ಕು ಸಾಧಿಸಿದ್ದು ಕರೋನಾ ಲಸಿಕೆಯ ಮೊದಲ ಮಾನವ ಪ್ರಯೋಗ ಯಶಸ್ವಿಯಾಗಿದೆ ಎಂದು ಹೇಳಿದೆ.

Covaxin: ಇಂದಿನಿಂದ ಏಮ್ಸ್‌ನಲ್ಲಿ ಕರೋನಾ ಲಸಿಕೆ ಪ್ರಯೋಗ, ಇಲ್ಲಿದೆ 5 ಪ್ರಮುಖ ವಿಷಯಗಳು

ಏಪ್ರಿಲ್ 23 ರಿಂದ ಮೇ 21 ರವರೆಗೆ ಈ ಪ್ರಯೋಗ ನಡೆದಿದ್ದು,  AZD1222 ಹೆಸರಿನ ಲಸಿಕೆಯನ್ನು 1077 ಜನರನ್ನು ಈ ಪ್ರಯೋಗದಲ್ಲಿ ಒಳಪಡಿಸಲಾಗಿದೆ. ಎಲ್ಲರ ಮೇಲೂ 28 ದಿನಗಳ ಕಾಲ ಮೇಲ್ವಿಚಾರಣೆ ಮಾಡಲಾಗಿದ್ದು ಅವರೆಲ್ಲರಿಗೂ ಪ್ರತೀಕಾಯ ಶಕ್ತಿ ಹೆಚ್ಚಾಗಿದೆ ಎಂದು  ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿತು.

ಇದಲ್ಲದೆ ಕರೋನಾ ಲಸಿಕೆಯ ಮೊದಲ ಹಂತದ ಮಾನವ ಪ್ರಯೋಗಗಳು ಯಶಸ್ವಿಯಾಗಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹೇಳಿದೆ. ಏಪ್ರಿಲ್ 23 ಮತ್ತು ಮೇ 21 ರ ನಡುವೆ ಈ ಪ್ರಯೋಗ ನದ್ವಾಲಾಗಿದ್ದು, ಪ್ರಯೋಗದಲ್ಲಿ ಭಾಗಿಯಾಗಿದ್ದ 1077 ಜನರಲ್ಲಿ 28 ದಿನಗಳಲ್ಲಿ ಪ್ರತಿಕಾಯಗಳು ರೂಪುಗೊಂಡಿವೆ ಎಂದು ಅದು ಹೇಳಿಕೊಂಡಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಒಂದು ಟ್ವೀಟ್ ಮಾಡಲಾಗಿದ್ದು ಇದರಲ್ಲಿ AZD1222 ಹೆಸರಿನ ಲಸಿಕೆ ಬಳಸುವುದರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಲಾಗಿದೆ.

Fact-check: ರಷ್ಯಾ ನಿಜವಾಗಿಯೂ ಕರೋನಾ ಲಸಿಕೆಯನ್ನು ಸಿದ್ಧಪಡಿಸಿದೆಯೇ?

ಲಸಿಕೆಯ ಅಡ್ಡಪರಿಣಾಮಗಳು?
ಈ ಪ್ರಯೋಗದ ಸಮಯದಲ್ಲಿ ಯಾವುದೇ ಭಯಾನಕ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಆದರೆ ಮೈ-ಕೈ ನೋವು, ತಲೆನೋವು, ಆಯಾಸದಂತಹ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬಂದಿವೆ.

ಈ ಲಸಿಕೆ ಸೆಪ್ಟೆಂಬರ್ ವೇಳೆಗೆ ಮಾರುಕಟ್ಟೆಗೆ ಬರಬಹುದು ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹೇಳಿಕೊಂಡಿದೆ. ಎಲ್ಲವೂ ಸರಿಯಾಗಿ ನಡೆದರೆ ಮುಂಬರುವ ಮೂರು ತಿಂಗಳಲ್ಲಿ ಕರೋನಾದ ಔಷಧದ ಮಾರುಕಟ್ಟೆಗೆ ಬರಲಿದೆ ಎಂದು ಆಶಿಸಲಾಗಿದೆ.
 

Trending News