BREAKING NEWS: Kanpur Encounter ಪ್ರಮುಖ ಆರೋಪಿ ವಿಕಾಸ್ ದುಬೆ ಬಂಧನ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕಾನ್ಪುರ್ ಎನ್ಕೌಂಟರ್ನ ಮುಖ್ಯ ಆರೋಪಿ ವಿಕಾಸ್ ದುಬೆ ಅವರನ್ನು ಉಜ್ಜಯಿನಿಯಿಂದ ಬಂಧಿಸಲಾಗಿದೆ. ಮಧ್ಯಪ್ರದೇಶದ ಉಜ್ಜೈನ್ ಮಹಾಕಾಲ್ ದೇವಸ್ಥಾನಕ್ಕೆ ದರ್ಶನಕ್ಕಾಗಿ ತೆರಳಿದ್ದ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ವಿಕಾಸ್ ದುಬೆನನ್ನು ಮೊದಲು ಗುರುತಿಸಿದ್ದ ಮಹಾಕಾಲ್ ದೇವಾಲಯದ ಕಾವಲುಗಾರರು ಗುರುತಿಸಿದ್ದಾರೆ. ಬಳಿಕ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Last Updated : Jul 9, 2020, 11:26 AM IST
BREAKING NEWS: Kanpur Encounter ಪ್ರಮುಖ ಆರೋಪಿ ವಿಕಾಸ್ ದುಬೆ ಬಂಧನ title=

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕಾನ್ಪುರ್ ಎನ್ಕೌಂಟರ್ನ ಮುಖ್ಯ ಆರೋಪಿ ವಿಕಾಸ್ ದುಬೆ ಅವರನ್ನು ಉಜ್ಜಯಿನಿಯಿಂದ ಬಂಧಿಸಲಾಗಿದೆ. ಮಧ್ಯಪ್ರದೇಶದ ಉಜ್ಜೈನ್ ಮಹಾಕಾಲ್ ದೇವಸ್ಥಾನಕ್ಕೆ ದರ್ಶನಕ್ಕಾಗಿ ತೆರಳಿದ್ದ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ವಿಕಾಸ್ ದುಬೆನನ್ನು ಮೊದಲು ಗುರುತಿಸಿದ್ದ ಮಹಾಕಾಲ್ ದೇವಾಲಯದ ಕಾವಲುಗಾರರು. ಬಳಿಕ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಕಾಸ್ ದುಬೆನನ್ನು ಬಂಧಿಸಲು ಒಟ್ಟು ಐದು ರಾಜ್ಯಗಳ ಪೊಲೀಸರು ಜಾಲ ಬೀಸಿದ್ದರು.

ವೃತ್ತಿಯಲ್ಲಿ ಕುಖ್ಯಾತ ಗ್ಯಾಂಗ್ ಸ್ಟರ್ ಬಂಧನದ ಕುರಿತು ದೃಢಪಡಿಸಿರುವ ಮಧ್ಯ ಪರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, "ವಿಕಾಸ್ ದುಬೆ ಸದ್ಯ ಮಧ್ಯ ಪ್ರದೇಶದ ಪೋಲೀಸ್ ಕಸ್ಟಡಿಯಲ್ಲಿರಿಸಲಾಗಿದೆ. ಆತನ ಬಂಧನ ಹೇಗೆ ನಡೆಸಲಾಗಿದೆ ಎಂಬುದನ್ನು ಹೇಳುವುದು ಉಚಿತವಲ್ಲ. ದೇವಸ್ಥಾನದ ಒಳಗೆ ಅಥವಾ ಹೊರಗೆ ಎಲ್ಲಿ ಆತನನ್ನು ಬಂಧಿಸಲಾಗಿದೆ ಹೇಳುವುದು ಉಚಿತವಲ್ಲ. ಕ್ರೂರತೆಯ ಎಲ್ಲ ಎಲ್ಲೇಯನ್ನು ವಿಕಾಸ್ ದುಬೆ ಮೀರಿದ್ದ, ಕಾನ್ಪುರ್ ಎನ್ಕೌಂಟರ್ ಬಳಿಕ ನಾವು ಮಧ್ಯ ಪ್ರದೇಶದ ಪೋಲೀಸರನ್ನು ಹೈ ಅಲರ್ಟ್ ಮೇಲೆ ಇರಿಸಿದ್ದೆವು" ಎಂದು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಇಂದು ಎನ್‌ಕೌಂಟರ್‌ನಲ್ಲಿ ಪೊಲೀಸರು ಮಟ್ಟ ಹಾಕಿದ್ದಾರೆ. ಪ್ರಭಾತ್ ಮಿಶ್ರಾ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದು, ನಂತರ ಅವರನ್ನು ಎನ್‌ಕೌಂಟರ್‌ ಮಾಡಲಾಗಿದೆ. ಪ್ರಭಾತ್ ಮಿಶ್ರಾ ಅವರನ್ನು ಫರಿದಾಬಾದ್‌ನಿಂದ ಬುಧವಾರ ಬಂಧಿಸಲಾಗಿತ್ತು. ಇದಲ್ಲದೆ, ವಿಕಾಸ್ ದುಬೆ ಗ್ಯಾಂಗ್‌ನ ಮತ್ತೊಬ್ಬ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಬನ್ ಶುಕ್ಲಾ ಕೂಡ ಇಟವಾದಲ್ಲಿ ಮಟ್ಟ ಹಾಕಲಾಗಿದೆ.

ಗುರುವಾರ ಬೆಳಗ್ಗೆ ಫರಿದಾಬಾದ್ ಬಂಧಿಸಲಾಗಿರುವ ವಿಕಾಸ್ ದುಬೆ ಸಹಚರ ಪ್ರಭಾತ್ ಮಿಶ್ರಾ ನನ್ನು ಪೊಲೀಸರು ಟ್ರಾನ್ಸಿಟ್ ರಿಮಾಂಡ್ ಮೇಲೆ ಕಾನ್ಪುರ್ ಗೆ ಕೊಂಡೊಯ್ಯಲಾಗುತ್ತಿತ್ತು. ಇದೇ ವೇಳೆ STF ಪೊಲೀಸರು ಎಸ್ಕಾರ್ಟ್ ನಲ್ಲಿ ನಿರತರಾಗಿದ್ದರು. ಈ ವೇಳೆ ಪನಕಿ ಠಾಣಾ ಪೊಲೀಸರ ವಾಹನ ಪಂಕ್ಚರ್ ಆದ ಕಾರಣ ವಿಕಾಸ್ ದುಬೆ ಅಲ್ಲಿಯೇ ಇದ್ದ ಪೋಲೀಸ್ ಪೆದೆಯೋರ್ವನ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತ ಪೊಲೀಸರ ಮೇಲೆ ಫೈರಿಂಗ್ ನಡೆಸಿದ್ದು, ಈ ದಾಳಿಯಲ್ಲಿ STFನ ಇಬ್ಬರು ಪೇದೆಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದು, ಈ ಎನ್ಕೌಂಟರ್ ನಲ್ಲಿ ಪ್ರಭಾತ್ ಮಿಶ್ರಾ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಭುಧವಾರ ಪೊಲೀಸರು ಪ್ರಭಾತ್ ಮಿಶ್ರಾನನ್ನು ಆತನ ಇಬ್ಬರು ಸಹಚರರೊಂದಿಗೆ ಬಂಧಿಸಿದ್ದರು. ಆತನ ಬಳಿಯಿಂದ 4 ಪಿಸ್ತೂಲ್ ವಶಪಡಿಸಿಕೊಂಡಿದ್ದು, ಇವುಗಳಲ್ಲಿ ಪೊಲೀಸರಿಂದ ಲೂಟಿ ಮಾಡಿದ್ದ 9mm ನ 2 ಪಿಸ್ತೂಲ್ ಗಳು ಕೂಡ ಶಾಮೀಲಾಗಿವೆ.
 

Trending News