ನವದೆಹಲಿ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಸುದ್ದಿ ಆರಂಭವಾದಾಗಿನಿಂದಲೂ ಬಹಳ ಚರ್ಚೆಯಲ್ಲಿದ್ದಾರೆ. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಇಬ್ಬರೂ ಲಾಕ್ಡೌನ್ನಲ್ಲಿ ಬಹಳ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದು ಆಗಾಗ್ಗೆ ತಮ್ಮ ಜೀವನ ಶೈಲಿಯ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅನುಷ್ಕಾ ಅವರು 2017 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ವಿವಾಹವಾದರು, ಆದರೆ ಮದುವೆಯ ನಂತರ 6 ತಿಂಗಳಲ್ಲಿ ಈ ದಂಪತಿಗಳು ಕೇವಲ 21 ದಿನವಷ್ಟೇ ಜೊತೆಗಿರಲು ಸಾಧ್ಯವಾಯಿತು ಎಂಬುದು ನಿಮಗೆ ತಿಳಿದಿದೆಯೇ? ಹೌದು, ನಮ್ಮ ಸಹಾಯಕ ವೆಬ್ಸೈಟ್ ಡಿಎನ್ಎಯ ಸುದ್ದಿ ವರದಿಯ ಪ್ರಕಾರ, ಅನುಷ್ಕಾ ಶರ್ಮಾ ತಮ್ಮ ಸಂದರ್ಶನವೊಂದರಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ.
ಅನುಷ್ಕಾ ಶರ್ಮಾ (Anushka Sharma) ತಮ್ಮ ಸಂದರ್ಶನದಲ್ಲಿ, 'ನಮ್ಮಿಬ್ಬರಿಗೂ ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ನೀಡಿದ ಲಾಕ್ಡೌನ್ಗೆ ನಾನು ಕೃತಜ್ಞಳಾಗಿದ್ದೇನೆ, ಅಂತಹ ಅವಕಾಶ ನಮಗೆ ಹಿಂದೆಂದೂ ಸಿಗಲಿಲ್ಲ. ವಿರಾಟ್ ನನ್ನನ್ನು ಭೇಟಿಯಾಗಲು ಬಂದಾಗ ಅಥವಾ ನಾನು ಅವರನ್ನು ಭೇಟಿಯಾಗಲು ಹೋದರೆ, ನಾವು ರಜೆಯನ್ನು ಆಚರಿಸುತ್ತಿದ್ದೇವೆ ಎಂದು ಜನರು ಭಾವಿಸುತ್ತಾರೆ. ನಮ್ಮಲ್ಲಿ ಒಬ್ಬರು ಯಾವಾಗಲೂ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದೆವು. ಇದು ಮಾತ್ರವಲ್ಲ, ನಾವು ಮದುವೆಯಾದಾಗ ಮೊದಲ 6 ತಿಂಗಳಲ್ಲಿ ನಾವು 21 ದಿನಗಳಷ್ಟೇ ಜೊತೆಗಿರಲು ಸಾಧ್ಯವಾಯಿತು. ವಾಸ್ತವವಾಗಿ ನಾನು ಅದನ್ನು ಲೆಕ್ಕ ಹಾಕಿದ್ದೇನೆ. ನಾನು ಅವರನ್ನು ಭೇಟಿಯಾಗಲು ವಿದೇಶಕ್ಕೆ ಹೋದಾಗ, ನಾವು ಒಟ್ಟಿಗೆ ಭೋಜನ ಮಾಡುತ್ತಿದ್ದೆವು. ಇದು ನಮಗೆ ಬಹಳ ಅಮೂಲ್ಯ ಸಮಯವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಲಾಕ್ಡೌನ್ನಲ್ಲಿ ಪತಿ ವಿರಾಟ್ ಕೊಹ್ಲಿ (Virat Kohli) ಜೊತೆಗೆ ಸಮಯ ಕಳೆಯುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅನುಷ್ಕಾ ಶರ್ಮಾ ಈ ಸಮಯ ನಮ್ಮಿಬ್ಬರಿಗೂ ತುಂಬಾ ವಿಶೇಷವಾಗಿದೆ. ನಾವು ಈ ಮೊದಲು ಅಂತಹ ಸುಂದರ ಸಮಯವನ್ನು ಒಟ್ಟಿಗೆ ಕಳೆಯಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.
ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ತುಂಬಾ ಹಾಟ್ ಜೋಡಿ. ಅವರ ರೊಮ್ಯಾಂಟಿಕ್ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿವೆ. ಅನುಷ್ಕಾ ಅವರ ಚಲನಚಿತ್ರ ವೃತ್ತಿಜೀವನದ ಮಟ್ಟಿಗೆ, ಅವರು ಈ ದಿನಗಳಲ್ಲಿ ಚಲನಚಿತ್ರ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ 'ಬುಲ್ಬುಲ್' ಚಿತ್ರ 0TT ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಯಿತು.