ಶಾಲಾ ನಿರ್ದೇಶಕನಿಂದಲೇ ವಿದ್ಯಾರ್ಥಿಗೆ ಸತತ 3 ವರ್ಷಗಳ ಲೈಂಗಿಕ ಕಿರುಕುಳ

ವಿದ್ಯಾರ್ಥಿಯು ಆ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು, ಶಾಲಾ ನಿರ್ದೇಶಕ ಕಳೆದ ಮೂರು ವರ್ಷಗಳಿಂದ ಸತತವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿಯ ಸಂಬಂಧಿಗಳು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Last Updated : Jan 28, 2018, 11:39 AM IST
ಶಾಲಾ ನಿರ್ದೇಶಕನಿಂದಲೇ ವಿದ್ಯಾರ್ಥಿಗೆ ಸತತ 3 ವರ್ಷಗಳ ಲೈಂಗಿಕ ಕಿರುಕುಳ title=

ಬಿಹಾರ : ಶಾಲಾ ನಿರ್ದೇಶಕರೊಬ್ಬರು 6ನೇ ತರಗತಿ ವಿದ್ಯಾರ್ಥಿಗೆ ಸತತ 3 ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿರುವ ಆತಂಕಕಾರಿ ಘಟನೆಯೊಂದು ಇತ್ತೀಚಿಗೆ ಬೆಳಕಿಗೆ ಬಂದಿದೆ. 

ಈ ಕುರಿತು ಆರೋಪಿ ಶಾಲಾ ನಿರ್ದೇಶಕ, ಆತನ ತಂದೆ ಓಂಪ್ರಕಾಶ್ ಸಿಂಗ್, ಸಹೋದರ ವಿಕ್ಕಿ ಕುಮಾರ್ ಮತ್ತು ಆತನ ಪತ್ನಿ ನಿರ್ಮಲಾ ದೇವಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಆರೋಪಿಯ ತಂದೆ, ಸಹೋದರ್ ಮತ್ತು ಪತ್ನಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆರೋಪಿ ನಿರ್ದೇಶಕ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ವಿದ್ಯಾರ್ಥಿಯು ಆ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು, ಶಾಲಾ ನಿರ್ದೇಶಕ ಕಳೆದ ಮೂರು ವರ್ಷಗಳಿಂದ ಸತತವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿಯ ಸಂಬಂಧಿಗಳು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ವಿಚಾರವನ್ನು ಬಹಿರಂಗಪಡಿಸಿದರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಜೀವ ಬೆದರಿಕೆಯನ್ನೂ ಒಡ್ಡಿದ್ದ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಯಾವ ವಿಚಾರವನ್ನೂ ಮನೆಯಲ್ಲಿ ಹೇಳಿರದ ಆ ಬಾಲಕ ಕಳೆದ ಶುಕ್ರವಾರ ಶಾಲೆಯಿಂದ ಮನೆಗೆ ಹಿಂದಿರುಗಿದ ಬಳಿಕ ತನ್ನ ಪೋಷಕರಿಗೆ ಎಲ್ಲವನ್ನೂ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ಈ ವಿಚಾರವನ್ನು ಯಾರ ಬಳಿಯೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ ನಿರ್ದೇಶಕ, ಬಾಲಕನಿಗೆ ಆಗಾಗ ಥಳಿಸುತ್ತಿದ್ದ ಎನ್ನುವುದನ್ನೂ ಹೇಳಿದ್ದಾನೆ. 

ಅಷ್ಟೇ ಅಲ್ಲದೆ, ನಿರ್ದೇಶಕ ಅಪರಾಧ ಎಸಗುವ ಮುನ್ನ ಬಾಲಕನಿಗೆ ಮತ್ತು ಬರಿಸುವ ವಸ್ತುವನ್ನು ನೀಡುತ್ತಿದ್ದಲ್ಲದೆ, ಬಾಲಕನ ದೇಹಕ್ಕೆ ರಾಸಾಯನಿಕವನ್ನು ಲೇಪಿಸುತ್ತಿದ್ದ. ಈ ವಿಚಾರವನ್ನು ಮನೆಯಲ್ಲಿ ತಿಳಿಸಿದರೆ ಬಾಲಕನನ್ನು ಮತ್ತು ಆತನ ಪೋಷಕರನ್ನೂ ಕೊಲ್ಲುವುದಾಗಿ ಆತ ಬೆದರಿಕೆ ಹಾಕುತ್ತಿದ್ದ ಎಂಬುದನ್ನು ಬಾಲಕ ತಿಳಿಸಿದ್ದಾನೆ. ಈ ವಿಚಾರ ಪೋಷಕರನ್ನು ಆಘಾತಕ್ಕೀಡುಮಾಡಿದೆ. 

ಮತ್ತೊಂದು ಆತಂಕಕಾರಿ ವಿಚಾರವೆಂದರೆ, ಈ ವಿಚಾರ ತಿಳಿದ ಪೋಷಕರು ಶಾಲೆಗೆ ತೆರಳಿ ಪ್ರಶ್ನಿಸಿದಾಗ ಅವರ ಮೇಲೂ ದೌರ್ಜನ್ಯ ನಡೆಸಿದ್ದಲ್ಲದೆ, ಜೀವ ಬೆದರಿಕೆ ಒಡ್ಡಲಾಗಿದೆ.

ಪ್ರಧಾನ ಆರೋಪಿಯ ಬಂಧುಗಳನ್ನು ಶುಕ್ರವಾರ ಬಂಧಿಸಲಾಗಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ನಿರ್ದೇಶಕನನ್ನು ಪೊಲೀಸರು ಹುಡುಕುತ್ತಿದ್ದಾರೆ. 

Trending News