ನವದೆಹಲಿ: ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ಹಿಂಸಾತ್ಮಕ ಮುಖಾಮುಖಿಯಾದ ನಂತರ, ಚೀನಾ ಈಗ ತನ್ನ ಸೈನ್ಯವನ್ನು ಡೆಪ್ಸಾಂಗ್ ನಲ್ಲಿನ ಎಲ್ಎಸಿಯಲ್ಲಿ ಇರಿಸಿದೆ. ಆ ಮೂಲಕ ಚೀನಾ ಗಡಿ ವಿಚಾರದಲ್ಲಿ ತನ್ನ ನಿಲುವನ್ನು ಬಲಪಡಿಸುವ ನಿಳುವನ್ನುನ್ ಹೊಂದಿದೆ ಎನ್ನಲಾಗಿದೆ.
ಭಾರತವು ಈಗಾಗಲೇ ಡಿಎಸ್ಡಿಬಿಒ ರಸ್ತೆಯ ನಿರ್ಮಾಣವನ್ನು ಪೂರ್ಣಗೊಳಿಸಿದೆ, ಎಲ್ಎಸಿ ಉದ್ದಕ್ಕೂ ಡ್ರುಬುಕ್ನಿಂದ ಡಿಬಿಒಗೆ ರಸ್ತೆ ನಿರ್ಮಿಸುವುದರ ಜೊತೆಗೆ, ಸೂಕ್ತ ಉತ್ತರ ನೀಡುತ್ತಿದೆ. ಇದು ಈಗ ಚೀನಾ-ಭಾರತ ಗಡಿಯಲ್ಲಿ ಹಲವಾರು ರಂಗಗಳನ್ನು ತೆರೆಯುತ್ತಿದೆ. ಭಾರತವು ಈಗ ದೌಲತ್ ಬೇಗ್ ಓಲ್ಡಿ (ಡಿಬಿಒ) ಯಿಂದ ಚೀನಾದ ಚಟುವಟಿಕೆಗಳ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ತನ್ನ ಸೈನಿಕರ ಸಾವಿನ ಬಗ್ಗೆ ಕೊನೆಗೂ ಬಾಯಿಬಿಟ್ಟ ಚೀನಾ ಹೇಳಿದ್ದೇನು ಗೊತ್ತೇ?
ಗಡಿಯಲ್ಲಿ ಚೀನಾದ ಆಕ್ರಮಣಶೀಲತೆಯ ಬಗ್ಗೆ ಮಾತನಾಡುತ್ತಾ, ವೀರ್ ಚಕ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಕ್ಯಾಪ್ಟನ್ ತಾಶಿ ಮಾತನಾಡಿ , ಗಾಲ್ವಾನ್ ಕಣಿವೆಯಲ್ಲಿ ಭಾರತವು ಸೇತುವೆಯನ್ನು ನಿರ್ಮಿಸುತ್ತದೆ ಎಂದು ಚೀನಾ ಎಂದಿಗೂ ನಿರೀಕ್ಷಿಸಿರಲಿಲ್ಲ. ಎಲ್ಎಸಿ ಕುರಿತ ತನ್ನ ಕ್ರಮಕ್ಕೆ ಭಾರತ ಸೂಕ್ತ ಉತ್ತರ ನೀಡುತ್ತದೆ ಎಂದು ನಿರ್ಣಯಿಸುವಲ್ಲಿ ಚೀನಾ ವಿಫಲವಾಗಿದೆ, ”ಎಂದು ಅವರು ಹೇಳಿದರು.
ಭಾರತೀಯ ಸೇನೆಯು ಇತ್ತೀಚೆಗೆ ಕೇವಲ 72 ಗಂಟೆಗಳಲ್ಲಿ ಗಾಲ್ವಾನ್ ಕಣಿವೆಯಲ್ಲಿ ಸೇತುವೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಚೀನಾ ಈ ಕ್ರಮವನ್ನು ತಡೆಯಲು ಪ್ರಯತ್ನಿಸಿತು. ಆದರೆ ಭಾರತವು ಇದಕ್ಕ ಸೂಕ್ತ ರೀತಿಯಲ್ಲಿ ನಿಭಾಯಿಸಿತು.ಡಿಬಿಒಗೆ ಭಾರತೀಯ ರಸ್ತೆ ಚೀನಾಕ್ಕೆ ಗೋಚರಿಸುತ್ತದೆ, ಮತ್ತು ಈ ಸ್ಥಳದಿಂದ, ಚೀನಾದ ಭೂಪ್ರದೇಶದ ಪ್ರತಿಯೊಂದು ಚಟುವಟಿಕೆಯನ್ನು ವೀಕ್ಷಿಸಬಹುದು.
ಆದಾಗ್ಯೂ, ಭಾರತೀಯ ಸೇನೆಯು ಎಲ್ಎಸಿಯಲ್ಲಿ ತನ್ನ ಪ್ರದೇಶವನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಬದ್ಧವಾಗಿದೆ. ಚೀನಾದ ಯಾವುದೇ ದುಷ್ಕೃತ್ಯದ ವಿರುದ್ಧ ಸೈನ್ಯವು ಡಿಬಿಒದಿಂದ ಗಾಲ್ವಾನ್ ವ್ಯಾಲಿ, ಪೈಗ್ಯಾಂಗ್ ಮತ್ತು ಡೆಮ್ಚೋಕ್ಗೆ ಹೆಚ್ಚಿನ ಎಚ್ಚರಿಕೆಯನ್ನು ಹೊಂದಿದೆ.
ಮತ್ತೊಂದು ಬೆಳವಣಿಗೆಯಲ್ಲಿ, ಲಡಾಖ್ನ ಗಡಿ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಸುಧಾರಣೆಗೆ ಗಮನಹರಿಸಲು ಸರ್ಕಾರ ಇಂದು ನಿರ್ಧರಿಸಿದೆ. ಎಲ್ಎಸಿ ಬಳಿ ಡೆಮ್ಚಾಕ್ನಲ್ಲಿ ಮೊಬೈಲ್ ಟವರ್ ನಿರ್ಮಿಸುವುದರ ಜೊತೆಗೆ ಲಡಾಖ್ನಲ್ಲಿ 54 ಮೊಬೈಲ್ ಟವರ್ಗಳ ನಿರ್ಮಾಣ ಪ್ರಾರಂಭವಾಗಿದೆ.