ಕಿದ್ವಾಯಿ ಆಸ್ಪತ್ರೆಯಲ್ಲಿ ಒಂದು ಸಾವಿರ ರೋಬೋಟಿಕ್ ಶಸ್ತ್ರಚಿಕಿತ್ಸೆ :ಕ್ಯಾನ್ಸರ್ ರೋಗಿಗಳಿಗೆ ಉಚಿತ, ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ

ಮೊದಲ ಬಾರಿಗೆ ರೋಬೊಟಿಕ್ ಯಂತ್ರ ಅಳವಡಿಕೆ ಮಾಡಿಕೊಂಡ ಏಕೈಕ ಆಸ್ಪತ್ರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಾಗಿದೆ. ಇದುವರೆಗೆ ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ವಿಶೇಷ ಮೈಲುಗಲ್ಲು ಸಾಧಿಸಿದೆ.   

Written by - Ranjitha R K | Last Updated : Jan 24, 2025, 03:19 PM IST
  • ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಹಾಗೂ ದೇಶದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ
  • ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ 1 ಸಾವಿರ ರೊಬೊಟಿಕ್ ಶಸ್ತ್ರ ಚಿಕಿತ್ಸೆ
ಕಿದ್ವಾಯಿ  ಆಸ್ಪತ್ರೆಯಲ್ಲಿ ಒಂದು ಸಾವಿರ ರೋಬೋಟಿಕ್ ಶಸ್ತ್ರಚಿಕಿತ್ಸೆ  :ಕ್ಯಾನ್ಸರ್ ರೋಗಿಗಳಿಗೆ ಉಚಿತ, ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ  title=

ಬೆಂಗಳೂರು : ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಹಾಗೂ ದೇಶದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು 1 ಸಾವಿರ ರೊಬೊಟಿಕ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ  ಮತ್ತೊಂದು ಇತಿಹಾಸ ಸೃಷ್ಟಿಸಿದೆ.

ಮೊದಲ ಬಾರಿಗೆ ರೋಬೊಟಿಕ್ ಯಂತ್ರ ಅಳವಡಿಕೆ ಮಾಡಿಕೊಂಡ ಏಕೈಕ ಆಸ್ಪತ್ರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಾಗಿದೆ. ಅತ್ಯಾಧುನಿಕ ಡಾ. ವಿನ್ಸಿ ರೋಬೊಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇದುವರೆಗೆ ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ವಿಶೇಷ ಮೈಲುಗಲ್ಲು ಸಾಧಿಸಿದೆ. 

ಇದನ್ನೂ ಓದಿ : ನಡುರಸ್ತೆಯಲ್ಲಿ ಜೋಡಿ ಕರಡಿಗಳ ಓಡಾಟ... ಚೆಲ್ಲಾಟ..: ಅಪರೂಪದ ವಿಡಿಯೋ ವೈರಲ್

 ಸರಕಾರಿ ಸಂಸ್ಥೆಗಳ ಪೈಕಿ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಮಾತ್ರ ರೋಬೋಟಿಕ್ ಸರ್ಜರಿ ಸೌಕರ್ಯ ಇರುವುದು ಮತ್ತೊಂದು ಹೆಗ್ಗಳಿಕೆ.

. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ  ಹೆಚ್ಚು ಚಿಕಿತ್ಸೆ ನೀಡಿದ ಆಸ್ಪತ್ರೆಯಾಗಿ ಹೊರಹೊಮ್ಮಿದೆ. 

ರಾಜ್ಯದಲ್ಲೇ ಏಕೈಕ  ಬೋನ್ ಮ್ಯಾರೋ (ಅಸ್ತಿಮಜ್ಜೆ ಶಸ್ತ್ರಚಿಕಿತ್ಸಾ) ಘಟಕ ಕಿದ್ವಾಯಿಯಲ್ಲಿ ಇದ್ದು, ಅಲೋಜೆನಿಕ್, ಆಟೋಲೋಗಸ್ ಅಸ್ತಿಮಜ್ಜೆ ಕಸಿ ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ. 

ಇದನ್ನೂ ಓದಿ : ರಾಮುಲು, ಜನಾರ್ದನ ರೆಡ್ಡಿ ಮಧ್ಯೆ ಭುಗಿಲೆದ್ದ ವಾಕ್ಸಮರ..!

ಏನಿದು ಡಾ ವಿಂಚಿ ಸರ್ಜಿಕಲ್ ಸಿಸ್ಟಮ್? : 
- ಅಮೆರಿಕಾದ ಇನ್ಸಿಟ್ಯೂಟ್ ಸರ್ಜಿಕಲ್  ರೀಸರ್ಚ್ ಸಂಸ್ಥೆಯು ಡಾ.ವಿಂಚಿ ಸರ್ಜಿಕಲ್ ಸಿಸ್ಟಮ್ ರೋಬೊಟಿಕ್ ಯಂತ್ರವನ್ನು ಅಭಿವೃದ್ಧಿಪಡಿಸಿದೆ.
-  ಡಾ.ವಿಂಚಿ ಎಕ್ಸ್ಐ ಎಂಬುದು ಸುಧಾರಿತ ಆವೃತ್ತಿಯಾಗಿದೆ. ಈ ಯಂತ್ರವನ್ನು ಕಿದ್ವಾಯಿ ಸಂಸ್ಥೆಯಲ್ಲಿ ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಸರ್ಜನ್ ಕನ್ಸೋಲ್, ಪೇಷಂಟ್ ಕಾರ್ಟ್, ವಿಷನ್ ಕಾರ್ಟ್ ಎಂಬ ವಿಭಾಗಗಳಿವೆ. ಪೇಷೆಂಟ್ ಕಾರ್ಟ್ ಯಂತ್ರವನ್ನು ಬಳಸಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. 
- ಹೇಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂಬ ಸೂಚನೆಗಳನ್ನು ಸರ್ಜನ್ ಕನ್ಸೋಲ್‌ ನಲ್ಲಿ ಕುಳಿತ ವೈದ್ಯರು ನೀಡುತ್ತಾರೆ. 
- ವೈದ್ಯರ ಸೂಚನೆ ಮೇರೆಗೆ ಪೇಷಂಟ್ ಕಾರ್ಟ್ ಯಂತ್ರವು ಕಾರ್ಯ ನಿರ್ವಹಿಸುತ್ತದೆ. ಶಸ್ತ್ರ ಚಿಕಿತ್ಸೆಯ  ಪ್ರತಿಯೊಂದು ಮಾಹಿತಿಯೂ ವಿಷನ್ ಕಾರ್ಟ್‌ ನಲ್ಲಿ ದಾಖಲಾಗುತ್ತದೆ. 
- ಎಲ್ಇಡಿ ಪರದೆಯಲ್ಲಿ ಕಾಣಿಸುತ್ತದೆ. ಪೇಷಂಟ್ ಕಾರ್ಟ್ ಯಂತ್ರವನ್ನು ರೋಗಿಯ ದೇಹದ ನಿರ್ದಿಷ್ಟ ಭಾಗದಲ್ಲಿ ಇಡಲಾಗುತ್ತದೆ. 
- ಈ ಯಂತ್ರದಲ್ಲಿರುವ ಕೈಗಳ ಸಹಾಯದಿಂದ ಸಣ್ಣ ರಂಧ್ರಗಳನ್ನು ಕೊರೆಯಲಾಗುತ್ತದೆ.
-  ಈ ರಂಧ್ರಗಳ ಮೂಲಕ ದೇಹಕ್ಕೆ ಸ್ಟೀಲ್ ರಾಡ್‌ ಗಳನ್ನು ಅಳವಡಿಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News