ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ದೈತ್ಯ ಹಾವು ಪ್ರತ್ಯಕ್ಷ..! ಬೆಚ್ಚಿ ಬಿದ್ದ ಭಕ್ತರು.. ವಿಡಿಯೋ ವೈರಲ್‌

Maha Kumbh 2025:  ಪ್ರಯಾಗ್ ರಾಜ್‌ದಲ್ಲಿ ಮಹಾಕುಂಭಮೇಳ ಅದ್ಧೂರಿಯಾಗಿ ಜರುಗುತ್ತಿದೆ.. ಇದರ ನಡುವೆ ತ್ರಿವೇಣಿ ಸಂಗಮದಲ್ಲಿ ಅನಕೊಂಡದಂತಿರುವ ಬೃಹತ್ ಹಾವೊಂದು ಕಾಣಿಸಿಕೊಂಡಿದ್ದು.. ಇದೀಗ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.  

Written by - Krishna N K | Last Updated : Jan 24, 2025, 12:45 PM IST
    • ಪ್ರಯಾಗ್ ರಾಜ್‌ದಲ್ಲಿ ಮಹಾಕುಂಭಮೇಳ ಅದ್ಧೂರಿಯಾಗಿ ಜರುಗುತ್ತಿದೆ..
    • ಕುಂಭಮೇಳದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ.
    • ತ್ರಿವೇಣಿ ಸಂಗಮದಲ್ಲಿ ಅನಕೊಂಡದಂತಿರುವ ಬೃಹತ್ ಹಾವೊಂದು ಕಾಣಿಸಿಕೊಂಡಿದೆ
ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ದೈತ್ಯ ಹಾವು ಪ್ರತ್ಯಕ್ಷ..! ಬೆಚ್ಚಿ ಬಿದ್ದ ಭಕ್ತರು.. ವಿಡಿಯೋ ವೈರಲ್‌ title=

Maha Kumbh 2025 viral : ಕುಂಭಮೇಳದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಕೋಟ್ಯಾನು ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಪ್ರಪಂಚದಾದ್ಯಂತದ ಭಕ್ತರು ಪ್ರಯಾಗ್ ರಾಜ್‌ಗೆ ಗುಂಪು ಗುಂಪಾಗಿ ಆಗಮಿಸುತ್ತಿದ್ದಾರೆ. ಭಕ್ತರಿಗೆ ತೊಂದರೆಯಾಗದಂತೆ ಯೋಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸುಮಾರು 144 ವರ್ಷಗಳ ನಂತರ ರೂಪುಗೊಂಡ ಮಹಾಕುಂಭ ಮೇಳವಾದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಈ ಕ್ರಮದಲ್ಲಿ 13 ಅಖಾಡಗಳ ಸಾಧುಗಳು, ಸಂತರು ಮತ್ತು ಅಘೋರಿಗಳು ಕುಂಭಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಕುಂಭಮೇಳಕ್ಕೆ ಸಂಬಂಧಿಸಿದ ಆಘಾತಕಾರಿ ವಿಡಿಯೋ ಇದೀಗ ವೈರಲ್ ಆಗಿದೆ. ಇದರಲ್ಲಿ ತ್ರಿವೇಣಿ ಸಂಗಮ ನದಿಯಲ್ಲಿ ಬೃಹತ್ ಅನಕೊಂಡ ಕಾಣಿಸಿಕೊಂಡಿದೆ. ಅಲ್ಲಿ ಸ್ನಾನ ಮಾಡುತ್ತಿದ್ದವರು ಬೃಹತ್ ಹಾವನ್ನು ನೋಡಿ ಹೆದರಿದ್ದಾರೆ.. 

ಇದನ್ನೂ ಓದಿ:ಲಿಫ್ಟ್‌ ಬಿಟ್ಟು ಮೆಟ್ಟಿಲು ಹತ್ತಿ.. ಜಿಮ್‌ಗೆ ಹೋದರೂ ಸಿಗದ ಈ ಅದ್ಭುತ ಆರೋಗ್ಯ ಪ್ರಯೋಜನಗಳು ನಿಮ್ಮದಾಗುತ್ತವೆ.!

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿರುವ ಟ್ವಿಸ್ಟ್ ಏನೆಂದರೆ.. ಇದು AI ನಿಂದ ಸೃಷ್ಟಿಯಾದ ಹಾವು. ಇತ್ತೀಚೆಗೆ ಕೆಲ ಕಿಡಿಗೇಡಿಗಳು AI ತಂತ್ರಜ್ಞಾನದಿಂದ ನಟ-ನಟಿಯರ ಅಶ್ಲೀಲ ಫೋಟೋಗಳನ್ನು ರಚಿಸಿ ವೈರಲ್‌ ಮಾಡುತ್ತಿದ್ದಾರೆ.. ಈ ಕ್ರಮದಲ್ಲಿ ಇದೀಗ ಕುಂಭಮೇಳದಲ್ಲಿ ಹಾವು ಪ್ರತ್ಯಕ್ಷವಾದಂತೆ ವಿಡಿಯೋ ಸೃಷ್ಟಿಸಿ ಭಕ್ತರನ್ನು ಎದುರಿಸುವ ಪ್ರಯತ್ನ ಮಾಡಿದ್ದಾರೆ.. 

ಮೊದಮೊದಲು ಈ ವಿಡಿಯೋ ನೋಡಿದ ನೆಟ್ಟಿಗರು ಇದು ನಿಜವಾದ ಹಾವೇ ಎಂದು ಬೆಚ್ಚಿಬಿದ್ದರು. ನಿಜ ವಿಷಯ ತಿಳಿದ ನಂತರ ಸಮಾಧಾನಗೊಂಡಿದ್ದಾರೆ.. ಅಲ್ಲದೆ, ಈ ರೀತಿ ಮಾಡಿ ಪವಿತ್ರ ಕುಂಭಮೇಳದ ಹೆಸರನ್ನು  ಕೆಡಿಸಬೇಡಿ ಅಂತ ಕಿಡಿಗೇಡಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News