Child PAN Card: ಅಧಿಕಮೊತ್ತದ ಹಣಕಾಸಿನ ವಹಿವಾಟುಗಳಿಗೆ ಹಾಗೂ ಪ್ರಮುಖ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ತುಂಬಾ ಮುಖ್ಯ. ಪ್ಯಾನ್ ಸಂಖ್ಯೆಯು ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಪ್ರಮುಖ ಗುರುತಿನ ಚೀಟಿಯಾಗಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆ 18ವರ್ಷ ಮೇಲ್ಪಟ್ಟವರು ಪ್ಯಾನ್ ಕಾರ್ಡ್ ಮಾಡಿಸುತ್ತಾರೆ. ಆದರೆ, ಎನ್ಎಸ್ಡಿಎಲ್ ವೆಬ್ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ, ದೊಡ್ಡವರಷ್ಟೇ ಅಲ್ಲ ಮಕ್ಕಳ ಹೆಸರಿನಲ್ಲಿಯೂ (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಸಹ ಪ್ಯಾನ್ ಕಾರ್ಡ್ ಮಾಡಿಸಬಹುದು. ಇದನ್ನು 'ಮೈನರ್ ಪ್ಯಾನ್ ಕಾರ್ಡ್' ಎಂದು ಹೆಸರಿಸಲಾಗಿದೆ.
ಮೈನರ್ ಪ್ಯಾನ್ ಕಾರ್ಡ್ ಪಡೆಯುವುದರ ಪ್ರಯೋಜನಗಳು:
ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಪಡೆಯುವುದು ಒಂದು ಪ್ರಮುಖ ಆರ್ಥಿಕ ಸಾಧನವಾಗಿದೆ. ಈ ಮೈನರ್ ಪ್ಯಾನ್ ಕಾರ್ಡ್ಮಕ್ಕಳ ಆರ್ಥಿಕ ವ್ಯವಹಾರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪೋಷಕರಿಗೆ ಸಹಕಾರಿ ಆಗಿದೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಅವರ ಹಣಕಾಸು ಚಟುವಟಿಕೆಗಳನ್ನು ನಿರ್ವಹಿಸಲು ಸಹ ಇದು ಮಾನ್ಯವಾಗಿರುತ್ತದೆ.
ಇದನ್ನೂ ಓದಿ- ಮೋದಿ ಸರ್ಕಾರದಿಂದ ರೈತರಿಗೆ ಪ್ರತಿ ತಿಂಗಳು ಸಿಗುತ್ತೆ 3 ಸಾವಿರ ರೂ.: ಈ ಯೋಜನೆಗೆ ಈಗಲೇ ಅಪ್ಲೇ ಮಾಡಿ
ಲಭ್ಯವಿರುವ ಮಾಹಿತಿಗಳ ಪ್ರಕಾರ, ಅಪ್ರಾಪ್ತ ವಯಸ್ಕರಿಗೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಅವರ್ ಆ ಪೋಷಕರು/ಕಾನೂನು ಪಾಲಕರು ಪ್ಯಾನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸುತ್ತಾರೆ. ಇದಕ್ಕಾಗಿ ಹೆಚ್ಚುವರಿ ದಾಖಲೆಗಳ ಅಗತ್ಯವಿದ್ದರೂ ಪ್ಯಾನ್ ಕಾರ್ಡ್ ಮಾಡಿಸುವ ಪ್ರಕ್ರಿಯೆ ಒಂದೇ ಆಗಿರುತ್ತದೆ.
ಅಪ್ರಾಪ್ತರಿಗೆ ಪ್ಯಾನ್ ಕಾರ್ಡ್ ಮಾಡಿಸಲು ಅಗತ್ಯ ದಾಖಲೆಗಳು:
ವಯಸ್ಸಿನ ಪುರಾವೆ:
ಇದಕ್ಕಾಗಿ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಥವಾ ಶಾಲೆಯ ಅಂಕಪಟ್ಟಿಯನ್ನು ನೀಡಬಹುದು.
ವಿಳಾಸ ಪುರಾವೆ:
ಅಪ್ರಾಪ್ತ ವಯಸ್ಕರ ಪೋಷಕರು/ಕಾನೂನು ಪಾಲಕರ ಪಾಸ್ ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡ್, ಯುಟಿಲಿಟಿ ಬಿಲ್ ನೀಡಬಹುದು.
ಇದನ್ನೂ ಓದಿ- ಹೊಸ ಮಾರ್ಗಸೂಚಿ: ಬ್ಯಾಂಕಿಂಗ್ ಹೆಸರಿನಲ್ಲಿ ಕರೆ ವಂಚನೆ ತಪ್ಪಿಸಲು ಬಹುದೊಡ್ಡ ಕ್ರಮ ಕೈಗೊಂಡ ಆರ್ಬಿಐ
ಮಕ್ಕಳ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ಹಂತ ಹಂತದ ಪ್ರಕ್ರಿಯೆ:
ಮೈನರ್ ಪ್ಯಾನ್ ಕಾರ್ಡ್ಗೆ ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಧಾನಗಳಲ್ಲೂ ಅರ್ಜಿ ಸಲ್ಲಿಸಬಹುದು.
ಮೈನರ್ ಪ್ಯಾನ್ ಕಾರ್ಡ್ಗೆ ಆನ್ಲೈನ್ ನಲ್ಲಿ ಅರ್ಜಿಸಲ್ಲಿಸಲು ಹಂತ-ಹಂತದ ವಿಧಾನ:
ಹಂತ-1: ಮೊದಲಿಗೆ NSDL ವೆಬ್ಸೈಟ್ ಗೆ ಭೇಟಿ ನೀಡಿ NSDL ಪ್ಯಾನ್ ಸೇವೆಗಳು ವಿಭಾಗಕ್ಕೆ ಹೋಟಿ
ಹಂತ-2: ಹೊಸ ಪ್ಯಾನ್-ಭಾರತೀಯ ನಾಗರೀಕ (ಫಾರ್ಮ್ 49A) ಆಯ್ಕೆಮಾಡಿ ಮತ್ತು ವೈಯಕ್ತಿಕ ಆಯ್ಕೆಯನ್ನು ಆರಿಸಿ.
ಹಂತ-3: ನಿಗದಿತ ಜಾಗದಲ್ಲಿ ಅಪ್ರಾಪ್ತರ ಹೆಸರು, ಪೋಷಕರ ಸಂಪರ್ಕ ವಿವರಗಳನ್ನು ಭರ್ತಿ ಮಾಡಿ, ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಿ
ಹಂತ-4: ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡುವ ಆಯ್ಕೆಯನ್ನು ಆರಿಸಿ, ಭೌತಿಕ ಪ್ಯಾನ್ ಕಾರ್ಡ್ ಅಗತ್ಯವಿದೆ ಎಂಬ ಆಯ್ಕೆಯನ್ನು ಆರಿಸಿ.
ಹಂತ-5: ಅಪ್ರಾಪ್ತ ವಯಸ್ಕರ ಪೋಷಕರ ವಿವರಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಹಂತ-6: ಆನ್ಲೈನ್ ಪೆಮೆಂಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ. ನಂತರ ಗುರುತಿನ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.
ಮೈನರ್ ಪ್ಯಾನ್ ಕಾರ್ಡ್ಗೆ ಆಫ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಗಾಗಿ ಕೆಳಗಿನ ಹಂತಗಳನ್ನು ಅನುಸರಿಸಿ:
ಮೊದಲಿಗೆ ಎನ್ಎಸ್ಡಿಎಲ್ ವೆಬ್ಸೈಟ್ ನಿಂದ ಫಾರ್ಮ್ 49ಏ ಅನ್ನು ಡೌನ್ಲೋಡ್ ಮಾಡಿ. ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಗುರುತಿನ ಪುರಾವೆ, ವಿಳಾಸ ಪುರಾವೆ, ಜನ್ಮ ಪುರಾವೆ ಮತ್ತು ಎರಡು ಪಾಸ್ಪೋರ್ಟ್ ಗಾತ್ರದ ಭಾವಚಿತ್ರಗಳೊಂದಿಗೆ ಡಾಕ್ಯುಮೆಂಟ್ ಅನ್ನು ಲಗತ್ತಿಸಿ. ಅದನ್ನು ಹತ್ತಿರದ PAN ಕೇಂದ್ರದಲ್ಲಿ (TIN ಫೆಸಿಲಿಟೇಶನ್ ಸೆಂಟರ್) ಸಲ್ಲಿಸಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.