ಟಿ 20 ಕ್ರಿಕೆಟ್‌ ನಲ್ಲಿ ಈ ಆಟಗಾರನಿಂದ ಮಾತ್ರ ಡಬಲ್ ಸೆಂಚುರಿ ಸಾಧ್ಯ ಎಂದ ಮೊಹಮ್ಮದ್ ಕೈಫ್...!

ಫೆಬ್ರವರಿ 24, 2010 ರಂದು ಸಚಿನ್ ತೆಂಡೂಲ್ಕರ್ ಅವರು ಏಕದಿನ ಪಂದ್ಯಗಳಲ್ಲಿ  ದ್ವಿಶತಕ ಗಳಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Last Updated : Jun 12, 2020, 10:22 PM IST
ಟಿ 20 ಕ್ರಿಕೆಟ್‌ ನಲ್ಲಿ ಈ ಆಟಗಾರನಿಂದ ಮಾತ್ರ ಡಬಲ್ ಸೆಂಚುರಿ ಸಾಧ್ಯ ಎಂದ ಮೊಹಮ್ಮದ್ ಕೈಫ್...!  title=

ನವದೆಹಲಿ: ಫೆಬ್ರವರಿ 24, 2010 ರಂದು ಸಚಿನ್ ತೆಂಡೂಲ್ಕರ್ ಅವರು ಏಕದಿನ ಪಂದ್ಯಗಳಲ್ಲಿ  ದ್ವಿಶತಕ ಗಳಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದಕ್ಕೂ ಮೊದಲು ಹಲವು ಆಟಗಾರರು 170, 180 ಮತ್ತು 190  ರನ್ ಗಳಿಸಿರುವುದನ್ನು ನಾವು ಎಕದಿನದ ಕ್ರಿಕೆಟ್ ನಲ್ಲಿ ಕಾಣುತ್ತೇವೆ. ಇದಾದ ನಂತರ ಸಚಿನ್ ಯಾವಾಗ ದಕ್ಷಿಣ ಆಫ್ರಿಕಾದ ವಿರುದ್ಧ ಈ ಸಾಧನೆಗೈದರೋ ಆಗಿನಿಂದಲೂ ದ್ವಿಶತಕ ಎನ್ನುವುದು ಸುಲಭದ ಮಾತಾಗಿದೆ. ಇದುವರೆಗೆ ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಮಾರ್ಟಿನ್ ಗುಪ್ಟಿಲ್, ಕ್ರಿಸ್ ಗೇಲ್, ಮತ್ತು ಫಖರ್ ಜಮಾನ್ ಅವರಂತಹವರು ವಿಶ್ವ ಕ್ರಿಕೆಟ್‌ನಲ್ಲಿ 50 ಓವರ್‌ಗಳ ಸ್ವರೂಪದಲ್ಲಿ ದ್ವಿಶತಕ ಸಾಧಿಸಿದ ಆಟಗಾರರಾಗಿದ್ದಾರೆ.

 ಇದನ್ನೂ ಓದಿ: ಧೋನಿ ಕ್ರಿಕೆಟ್ ಗೆ ಕಾಲಿಟ್ಟಿದ್ದು ಹೀಗೆ.!...ರೋಚಕ ಕಥೆ ಬಿಚ್ಚಿಟ್ಟ ಮೊಹಮ್ಮದ್ ಕೈಫ್

ಆದರೆ ಟಿ20 ವಿಚಾರಕ್ಕೆ ಬರುವುದಾದಲ್ಲಿ ಈ ದಾಖಲೆಯನ್ನು ಯಾರೂ ಕೂಡ ಮಾಡಿಲ್ಲ, 2018 ರಲ್ಲಿ ಜಿಂಬಾಬ್ವೆ ವಿರುದ್ಧ 172 ರನ್ ಗಳಿಸಿದ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರನ್ ಫಿಂಚ್ ಅವರು ಟಿ 20 ಐಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.  ಒಟ್ಟಾರೆ ಟಿ 20 ಗಳಲ್ಲಿ,  ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧದ ವೈಯಕ್ತಿಕ ಸ್ಕೋರ್ (175 *) ಅನ್ನು ಗಳಿಸಿದ್ದಾರೆ.

ಆದರೆ ಈಗ ಈ ವಿಚಾರವಾಗಿ ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ಅವರು ಟಿ20 ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡುವ ಆಟಗಾರನೊಬ್ಬನಿದ್ದಾನೆ ಎಂದು ಹೇಳಿದ್ದಾರೆ.ಅಷ್ಟಕ್ಕೂ ಈ ಆಟಗಾರ ಯಾರು ಅಲ್ಲ ಅವರೇ ರೋಹಿತ್ ಶರ್ಮಾ.  ರೋಹಿತ್ ಶರ್ಮಾ ಅವರು ಈ ಸಾಮರ್ಥ್ಯವನ್ನು ಹೊಂದಿದ್ದಾರೆ ಏಕೆಂದರೆ ಅವರು ಶತಕ ಗಳಿಸಿದ ನಂತರ ಅವರ ಸ್ಟ್ರೈಕ್ ರೇಟ್ 250-300 ಕ್ಕೆ ತಲುಪುತ್ತದೆ. ನಮ್ಮ ದಿನಗಳಲ್ಲಿ, ಒಂದು ತಂಡವು 50 ಓವರ್‌ಗಳಲ್ಲಿ 200-250 ಸ್ಕೋರ್ ಮಾಡುವುದು ಕಠಿಣವಾಗಿತ್ತು, ಆದರೆ ಈಗ ಅನೇಕರು 400-500 ಸ್ಕೋರ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ ”ಎಂದು ಕೈಫ್ ಹೇಳಿದರು.

Trending News