Vajramuni: ರೇಪ್ ಸೀನ್ ಆದಮೇಲೆ ವಜ್ರಮುನಿಯವರು ಆಯಾ ಕಲಾವಿದೆಯರ ಬಳಿ ತೆರಳಿ ಕ್ಷಮೆ ಕೇಳುತ್ತಿದ್ದರಂತೆ. ʼನಾನು ಇಲ್ಲಿವರೆಗೂ ಮಾಡಿರೋದು ಒಂದು ಪಾತ್ರವಷ್ಟೆ. ಇದರಿಂದ ನಿಮಗೆ ತೊಂದರೆ ಆಗಿದ್ದರೇ ದಯವಿಟ್ಟು ನನ್ನನ್ನು ಕ್ಷಮಿಸಿʼ ಅಂತಾ ಕೇಳುತ್ತಿದ್ದರಂತೆ.
Vajramuni: ಸ್ಯಾಂಡಲ್ವುಡ್ನ ಪ್ರತಿಭಾವಂತ ನಟರಲ್ಲಿ ಖಳನಾಯಕರು ಹೆಸರುಗಳೂ ಬರುತ್ತವೆ. ಸಾಫ್ಟ್ ಆಗಿದ್ದ ಕಲಾವಿದರು ಖಳನಾಯಕನ ಪಾತ್ರವನ್ನ ಮಾಡಿ ತೆರೆಮೇಲೆ ಮಿಂಚಿದ್ದರು. ತೆರೆ ಮೇಲೆ ವಿಲನ್ ಆಗಿ ಮೆರೆದ ಈ ಕಲಾವಿದರು ರಿಯಲ್ ಲೈಫ್ನಲ್ಲಿ ತುಂಬಾನೆ ಸಾಫ್ಟ್ ಆಗಿದ್ದಾರೆ. ಕನ್ನಡದ ಒಬ್ಬ ಹಿರಿಯ ಕಲಾವಿದರು ತುಂಬಾ ವಿಶೇಷವಾಗಿದ್ದರು. ಅವರ ಫೇಮಸ್ ಡೈಲಾಗ್ ʼಯಲಾ ಕುನ್ನಿʼ ಹೆಸರಿನ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿತ್ತು. ನಟ ಕೋಮಲ್ ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಈ ಖ್ಯಾತ ಕಲಾವಿದ ಕನ್ನಡದಲ್ಲಿ ಮಾಡಿರುವ ಪಾತ್ರಗಳು ಅತ್ಯದ್ಭುತವಾಗಿ ಮೂಡಿ ಬಂದಿವೆ. ಹಲವು ಚಿತ್ರಗಳಲ್ಲಿ ಈ ರೇಪ್ ಸೀನ್ಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಕಲಾವಿದ ರೇಪ್ ಸೀನ್ ಆದಮೇಲೆ ಕಲಾವಿದೆಯರಿಗೆ ಕ್ಷಮೆ ಕೇಳುತ್ತಿದ್ದರಂತೆ. ಈ ಮೂಲಕ ಮಹಿಳೆಯರ ಬಗ್ಗೆ ತಮಗಿದ್ದ ಗೌರವವನ್ನು ತೋರಿಸಿದ್ದರು. ಆ ನಟ ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕನ್ನಡದ ಕ್ಲಾಸಿಕ್ ʼಸಂಪತ್ತಿಗೆ ಸವಾಲ್ʼ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದು ಯಾರು ಗೊತ್ತಾ? ಅದುವೇ ವಜ್ರಮುನಿ.. ವಜ್ರಮುನಿ ಅವರು ಈ ಚಿತ್ರದಲ್ಲಿ ಸಾಹುಕಾರ ಸಿದ್ದಪ್ಪನವರ ಪಾತ್ರವನ್ನ ಮಾಡಿದ್ದರು. ಈ ಸಿನಿಮಾದಲ್ಲೂ ವಜ್ರಮುನಿ ರೇಪ್ ಸೀನ್ ಕೂಡ ಮಾಡಿದ್ದರು. ತುಂಬಾನೆ ಕ್ರೂರವಾಗಿ ಕಾಣಿಸುವ ವಜ್ರಮುನಿಯವರು ಅಸಲಿಗೆ ಹಾಗೆ ಇರಲಿಲ್ಲ. ಅವರ ತುಂಬಾನೆ ಸಾಫ್ಟ್ ಮನುಷ್ಯ ಆಗಿದ್ದರು. ಅವರು ತುಂಬಾನೆ ಒಳ್ಳೆ ವ್ಯಕ್ತಿಯಾಗಿದ್ದರು. ಸಿನಿಮಾಗಳಲ್ಲಿ ವಿಲನ್ ರೋಲ್ ಮಾಡುತ್ತಿದ್ದ ವಜ್ರಮುನಿಯವರಿಗೆ, ರಿಯಲ್ ಲೈಫ್ನಲ್ಲಿ ಖಳತ್ವದ ಯಾವುದೇ ಛಾಯೆ ಇರಲಿಲ್ಲ. ಅಷ್ಟು ಸ್ಪೆಷಲ್ ಆಗಿಯೇ ಇದ್ದ ಕನ್ನಡದ ಈ ಸೂಪರ್ ವಿಲನ್ ರೇಪ್ ಸೀನ್ ಆದ್ಮೇಲೆ ಆ ಒಂದು ಕೆಲಸವನ್ನ ತಪ್ಪದೇ ಮಾಡುತ್ತಿದ್ದರಂತೆ.
ವಜ್ರಮುನಿಯವರು ಹಲವು ಸಿನಿಮಾಗಳ ರೇಪ್ ಸೀನ್ಗಳಲ್ಲಿ. ಆದರೆ ಆ ಸೀನ್ ಮಾಡುವಾಗ ಅವರಿಗೆ ಸಹಜವಾಗಿಯೇ ಬೇಸರ ಆಗುತ್ತಿತ್ತಂತೆ. ಹಾಗಂತ ಕಲಾವಿದರಾಗಿ ಸುಮ್ಮನೆ ಇರಲು ಆಗುವುದಿಲ್ಲ. ಕಲಾದೇವಿಗೆ ನ್ಯಾಯ ಸಲ್ಲಿಸಬೇಕಿತ್ತು. ಹೀಗಾಗಿಯೇ ಆಯಾ ಸೀನ್ ಆದ್ಮೇಲೆ ವಜ್ರಮುನಿಯವರು ಒಂದು ಕೆಲಸ ಮಾಡುತ್ತಿದ್ದರು. ಹೌದು, ರೇಪ್ ಸೀನ್ ಆದಮೇಲೆ ವಜ್ರಮುನಿಯವರು ಆಯಾ ಕಲಾವಿದೆಯರ ಬಳಿ ತೆರಳಿ ಕ್ಷಮೆ ಕೇಳುತ್ತಿದ್ದರಂತೆ. ʼನಾನು ಇಲ್ಲಿವರೆಗೂ ಮಾಡಿರೋದು ಒಂದು ಪಾತ್ರವಷ್ಟೆ. ಇದರಿಂದ ನಿಮಗೆ ತೊಂದರೆ ಆಗಿದ್ದರೇ ದಯವಿಟ್ಟು ನನ್ನನ್ನು ಕ್ಷಮಿಸಿʼ ಅಂತಾ ಕೇಳುತ್ತಿದ್ದರಂತೆ.
ರೇಪ್ ಸೀನ್ ಆದಮೇಲೆ ಆಯಾ ಕಲಾವಿದರಿಗೆ, ʼನೀವು ನಮ್ಮ ತಾಯಿಯ ಸಮಾನʼ ಅಂತಾ ಹೇಳಿ ವಜ್ರಮುನಿಯವರು ಕಾಲು ಬಿದ್ದಿರೋದು ಇದೆಯಂತೆ. ಅಂದರೆ ವಜ್ರಮುನಿಯವರು ತುಂಬಾನೆ ಒಳ್ಳೆಯ ವ್ಯಕ್ತಿ ಆಗಿದ್ದರು. ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗೌರವ ಸಹ ಹೊಂದಿದ್ದರು. ಅದಕ್ಕೆ ಅವರ ಈ ರೀತಿಯ ವ್ಯಕ್ತಿತ್ವವೇ ಸಾಕ್ಷಿಯಾಗಿದೆ.
ವಜ್ರಮುನಿಯವರು ತಮ್ಮ ಸಿನಿಮಾ ಜೀವನದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಚಿತ್ರಗಳಲ್ಲಿ ಅವರು ವಿಲನ್ ಆಗಿಯೇ ನಟಿಸಿದ್ದಾರೆ. ಈ ಮೂಲಕ ಆಯಾ ಚಿತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ವರನಟ ಡಾ.ರಾಜಕುಮಾರ್ ಸೇರಿದಂತೆ ಕನ್ನಡದ ಖ್ಯಾತ ನಟರೊಂದಿಗೆ ವಜ್ರಮುನಿಯವರು ನೂರಾರು ಚಿತ್ರಗಳಲ್ಲಿ ನಟಿಸಿದ್ದರು.
ಅದ್ಭುತವಾಗಿ ನಟಿಸುತ್ತಿದ್ದ ವಜ್ರಮುನಿಯವರಿಗೆ ಅಂದು ಲಕ್ಷಾಂತರ ಅಭಿಮಾನಿಗಳಿದ್ದರು. ಅವರ ನಟನೆಯನ್ನ ಕಣ್ತುಂಬಿಕೊಳ್ಳಲು ಥಿಯೇಟರ್ಗೆ ಹೋಗುತ್ತಿದ್ದರು. ಅನೇಕರು ಅವರ ವಿಲನ್ ಪಾತ್ರವನ್ನು ನೋಡಿ ಹೆದರಿದ್ದು ಇದೆ. ಅಂದಿನ ವರದಿಯ ಪ್ರಕಾರ, ವಜ್ರಮುನಿಯವರ ಭಯಂಕರ ನಟನೆಯನ್ನ ನೋಡಿ ಅನೇಕರು ಥಿಯೇಟರ್ನಲ್ಲೇ ಸುಸ್ಸು ಮಾಡಿದ್ದರಂತೆ. ಆ ರೀತಿ ಭಯ ಹುಟ್ಟಿಸುವ ಅದ್ಭುತ ಅಭಿನಯವಿತ್ತು.